IND vs AUS: ಅಂಪೈರ್ ವಿರುದ್ಧ ತಿರುಗಿ ನಿಂತ ಜಸ್​ಪ್ರೀತ್ ಬುಮ್ರಾಗೆ ದಂಡದ ಭೀತಿ

|

Updated on: Jan 04, 2025 | 11:30 AM

India vs Australia: ಆಸ್ಟ್ರೇಲಿಯಾ ವಿರುದ್ಧದ 5ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಗಾಯದ ಸಮಸ್ಯೆಗೆ ಒಳಗಾಗಿರುವ ಜಸ್​ಪ್ರೀತ್ ಬುಮ್ರಾ ದ್ವಿತೀಯ ದಿನದಾಟದಲ್ಲಿ ಅರ್ಧದಲ್ಲೇ ಮೈದಾನ ತೊರೆದಿದ್ದಾರೆ. ಆದರೆ ಇದಕ್ಕೂ ಮುನ್ನ ಮೊದಲ ದಿನದಾಟದಲ್ಲಿ ಬುಮ್ರಾ ಮೂರನೇ ಅಂಪೈರ್ ತೀರ್ಪನ್ನು ಪ್ರಶ್ನಿಸಿರುವ ಕಾರಣ ಅವರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

1 / 6
ಸಿಡ್ನಿಯಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 5ನೇ ಟೆಸ್ಟ್ ಪಂದ್ಯದಲ್ಲಿ ಅಂಪೈರ್ ನಿರ್ಧಾರವನ್ನು ಪ್ರಶ್ನಿಸಿರುವ ಟೀಮ್ ಇಂಡಿಯಾ ನಾಯಕ ಜಸ್​ಪ್ರೀತ್ ಬುಮ್ರಾ ಐಸಿಸಿಯ ದಂಡದ ಶಿಕ್ಷೆಗೆ ಗುರಿಯಾಗುವ ಸಾಧ್ಯತೆಯಿದೆ. ಈ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ವಾಷಿಂಗ್ಟನ್ ಸುಂದರ್ ಅವರ ಔಟ್ ತೀರ್ಪನ್ನು ಬುಮ್ರಾ ಪಶ್ನಿಸಿದ್ದರು.

2 / 6
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ವಾಷಿಂಗ್ಟನ್ ಸುಂದರ್ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಸಂಕಷ್ಟಕ್ಕೆ ಸಿಲುಕಿದ್ದ ಟೀಮ್ ಇಂಡಿಯಾ ಪಾಲಿಗೆ ಸುಂದರ್ ಅವರ ಅಗತ್ಯವಿತ್ತು. ಆದರೆ ಮೂರನೇ ಅಂಪೈರ್ ನೀಡಿದ ವಿವಾದಾತ್ಮಕ ತೀರ್ಪಿಗೆ ಅವರು ಬಲಿಯಾದರು.

3 / 6
ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಎಸೆತದಲ್ಲಿ ವಾಷಿಂಗ್ಟನ್ ಸುಂದರ್ ಭರ್ಜರಿ ಹೊಡೆತಕ್ಕೆ ಯತ್ನಿಸಿದರು. ಆದರೆ ಚೆಂಡು ಅವರ ಬ್ಯಾಟ್ ಬದಿಯಿಂದ ಸಾಗಿ ವಿಕೆಟ್ ಕೀಪರ್ ಕೈ ಸೇರಿತು. ಅತ್ತ ಆಸ್ಟ್ರೇಲಿಯಾ ಆಟಗಾರರ ಕ್ಯಾಚ್​ಗೆ ಮನವಿ ಮಾಡಿದರೂ ಆನ್ ಫೀಲ್ಡ್ ಅಂಪೈರ್ ನಾಟೌಟ್ ನೀಡಿದರು. ಇದರ ಬೆನ್ನಲ್ಲೇ ಕಮಿನ್ಸ್ ಡಿಆರ್​ಎಸ್ ತೆಗೆದುಕೊಂಡರು.

4 / 6
ಟಿವಿ ಅಂಪೈರ್‌ ವಿಡಿಯೋ ಪರಿಶೀಲಿಸಿದಾಗ ಸ್ನಿಕೋ ಮೀಟರ್‌ನಲ್ಲಿ ಚಲನೆ ಗೋಚರಿಸಿತು. ಆದರೆ ಫ್ರೇಮ್ ಬದಲಾದ ತಕ್ಷಣ ಚಲನೆಯು ಕಣ್ಮರೆಯಾಯಿತು. ಇದಾಗ್ಯೂ ಮೂರನೇ ಅಂಪೈರ್ ವಾಷಿಂಗ್ಟನ್ ಸುಂದರ್ ಅವರನ್ನು ಔಟ್ ಎಂದು ತೀರ್ಪು ನೀಡಿ ಅಚ್ಚರಿ ಮೂಡಿಸಿದರು. ಇದರ ಬೆನ್ನಲ್ಲೇ ನಾನ್​ ಸ್ಟ್ರೈಕ್​ನಲ್ಲಿದ್ದ ಬುಮ್ರಾ ಅಂಪೈರ್ ತೀರ್ಪನ್ನು ಪ್ರಶ್ನಿಸಿದ್ದಾರೆ.

5 / 6
ಕಳೆದ ಪಂದ್ಯದಲ್ಲಿ ಸ್ನಿಕೋ ಮೀಟರ್ ಪರಿಶೀಲಿಸಿ ಮೂರನೇ ಅಂಪೈರ್ ಔಟ್ ನೀಡಿರಲಿಲ್ಲ. ಆದರೆ ಈಗ ಹೇಗೆ ಔಟ್ ನೀಡಿದ್ದಾರೆ ಎಂದು ಜಸ್​ಪ್ರೀತ್ ಬುಮ್ರಾ ಪ್ರಶ್ನಿಸಿದ್ದಾರೆ. ಅಂಪೈರ್ ತೀರ್ಪನ್ನು ಪ್ರಶ್ನಿಸಿರುವ ಬುಮ್ರಾ ಅವರ ವಿಡಿಯೋ ಇದೀಗ ವೈರಲ್ ಆಗಿದ್ದು, ಇದನ್ನು ಐಸಿಸಿ ಗಂಭೀರವಾಗಿ ಪರಿಗಣಿಸುವ ಸಾಧ್ಯತೆಯಿದೆ.

6 / 6
ಐಸಿಸಿ ನಿಯಮಗಳ ಪ್ರಕಾರ, ಅಂಪೈರ್‌ಗಳ ತೀರ್ಮಾನವೇ ಅಂತಿಮ. ಇದನ್ನು ಆಟಗಾರರು ಪ್ರಶ್ನಿಸುವಂತಿಲ್ಲ. ಅಂಪೈರ್ ತೀರ್ಪಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವುದು ಕಂಡು ಬಂದರೆ,  ಹಂತ 1, ಹಂತ 2, ಹಂತ 3 ಮತ್ತು ಹಂತ 4 ನಿಯಮಗಳ ಮೂಲಕ ಕಠಿಣ ಕ್ರಮಕೈಗೊಳ್ಳಲು ಅವಕಾಶವಿದೆ. ಇದೀಗ ಜಸ್​ಪ್ರೀತ್ ಬುಮ್ರಾ ಅವರ ನಡೆಯು ಹಂತ 1 ಅಪರಾಧದ ಅಡಿಯಲ್ಲಿ ಬರುತ್ತವೆ. ಹೀಗಾಗಿ ಐಸಿಸಿ ಬುಮ್ರಾ ವಿರುದ್ಧ ಕ್ರಮ ಕೈಗೊಂಡರೂ ಅಚ್ಚರಿಪಡಬೇಕಿಲ್ಲ.