IND vs BAN: ಜಡೇಜಾ ಮುಂದೆ ಕೊಹ್ಲಿ, ಗಿಲ್, ರಾಹುಲ್ ಬ್ಯಾಟಿಂಗ್ ತೀರ ‘ಸರಾಸರಿ’
Ravindra Jadeja: ಟೆಸ್ಟ್ ಕ್ರಿಕೆಟ್‌ನಲ್ಲಿ ಜಡೇಜಾ ಅವರ ಅಂಕಿಅಂಶಗಳು ತಂಡದ ಸ್ಟಾರ್ ಬ್ಯಾಟ್ಸ್ಮನ್ಗಳಾದ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಚೇತೇಶ್ವರ ಪೂಜಾರರಂತಹ ಅನುಭವಿ ಬ್ಯಾಟ್ಸ್‌ಮನ್‌ಗಳಿಗಿಂತಲೂ ಉತ್ತಮವಾಗಿದೆ. ಇದಕ್ಕೆ ಜಡೇಜಾ ಅವರ ಕಳೆದ 4 ವರ್ಷಗಳ ಬ್ಯಾಟಿಂಗ್ ಅಂಕಿ ಅಂಶಗಳೇ ಸಾಕ್ಷಿಯಾಗಿವೆ.
1 / 8
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಚೆನ್ನೈ ಟೆಸ್ಟ್ ಪಂದ್ಯದ ಮೊದಲೆರಡು ದಿನ ಆತಿಥೇಯ ಟೀಂ ಇಂಡಿಯಾವೇ ಮೇಲುಗೈ ಸಾಧಿಸಿದೆ. ಮೊದಲು ಬ್ಯಾಟಿಂಗ್ನಲ್ಲಿ ಅಶ್ವಿನ್ ಹಾಗೂ ಜಡೇಜಾ ಅವರ 199 ರನ್ಗಳ ಜೊತೆಯಾಟದ ನೆರವಿನಿಂದಾಗಿ 376 ರನ್ ಬಾರಿಸಿದ್ದ ಟೀಂ ಇಂಡಿಯಾ, ಆ ಬಳಿಕ ಬಾಂಗ್ಲಾದೇಶ ತಂಡವನ್ನು 149 ರನ್ಗಳಿಗೆ ಕಟ್ಟಿಹಾಕಿತು.
2 / 8
ಬಾಂಗ್ಲಾದೇಶ ತಂಡವನ್ನು ಇಷ್ಟು ಕಡಿಮೆ ರನ್ಗಳಿಗೆ ಕಟ್ಟಿಹಾಕುವಲ್ಲಿ ವೇಗಿಗಳಾದ ಜಸ್ಪ್ರೀತ್ ಬುಮ್ರಾ, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್ ಜೊತೆಗೆ ಸ್ಪಿನ್ನರ್ ಜಡೇಜಾ ಕೂಡ ಪ್ರಮುಖ ಪಾತ್ರವಹಿಸಿದರು. ಮೊದಲು ಬ್ಯಾಟಿಂಗ್ನಲ್ಲಿ 86 ರನ್ಗಳ ಉಪಯುಕ್ತ ಇನ್ನಿಂಗ್ಸ್ ಆಡಿದ್ದ ಜಡೇಜಾ, ಆ ಬಳಿಕ ಪ್ರಮುಖ 2 ವಿಕೆಟ್ ಕಬಳಿಸಿದರು.
3 / 8
ಬಹಳ ವರ್ಷಗಳಿಂದ ಭಾರತ ಟೆಸ್ಟ್ ತಂಡದ ಖಾಯಂ ಸದಸ್ಯನಾಗಿರುವ ರವೀಂದ್ರ ಜಡೇಜಾ ತಮ್ಮ ಆಲ್‌ರೌಂಡರ್ ಆಟದ ಮೂಲಕ ತಂಡವನ್ನು ಹಲವು ಬಾರಿ ಸಂಕಷ್ಟದಿಂದ ಪಾರು ಮಾಡಿದ್ದಾರೆ. ತಮ್ಮ ಮ್ಯಾಜಿಕಲ್ ಸ್ಪಿನ್ ಜೊತೆಗೆ ಬ್ಯಾಟಿಂಗ್ನಲ್ಲೂ ಕಮಾಲ್ ಮಾಡಿರುವ ಜಡೇಜಾ ಏಕಾಂಗಿಯಾಗಿ ಅದೇಷ್ಟೋ ಪಂದ್ಯಗಳನ್ನು ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
4 / 8
ಅದೆ ರೀತಿಯಾಗಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲೂ ಅಶ್ವಿನ್ ಜೊತೆಗೆ 199 ರನ್ಗಳ ಜೊತೆಯಾಟವನ್ನಾಡಿದ ಜಡೇಜಾ, 86 ರನ್ ಬಾರಿಸಿ ಕೇವಲ 14 ರನ್ಗಳಿಂದ ಶತಕ ವಂಚಿತರಾದರು. ಆದಾಗ್ಯೂ ಜಡೇಜಾಗೆ ತಮ್ಮ ಶತಕವನ್ನು ಪೂರ್ಣಗೊಳಿಸಲು ಸಾಧ್ಯವಾಗದಿದ್ದರೂ, ಈ ಇನ್ನಿಂಗ್ಸ್ ಮೂಲಕ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾಕ್ಕೆ ಎಷ್ಟು ವಿಶ್ವಾಸಾರ್ಹ ಬ್ಯಾಟ್ಸ್‌ಮನ್ ಆಗಿದ್ದಾರೆ ಎಂಬುದನ್ನು ಸಾಭೀತು ಪಡಿಸಿದರು.
5 / 8
ಅಷ್ಟಕ್ಕೂ ಹೇಳಬೇಕೆಂದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಜಡೇಜಾ ಅವರ ಅಂಕಿಅಂಶಗಳು ತಂಡದ ಸ್ಟಾರ್ ಬ್ಯಾಟ್ಸ್ಮನ್ಗಳಾದ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಚೇತೇಶ್ವರ ಪೂಜಾರರಂತಹ ಅನುಭವಿ ಬ್ಯಾಟ್ಸ್‌ಮನ್‌ಗಳಿಗಿಂತಲೂ ಉತ್ತಮವಾಗಿದೆ. ಇದಕ್ಕೆ ಜಡೇಜಾ ಅವರ ಕಳೆದ 4 ವರ್ಷಗಳ ಬ್ಯಾಟಿಂಗ್ ಅಂಕಿ ಅಂಶಗಳೇ ಸಾಕ್ಷಿಯಾಗಿವೆ.
6 / 8
ಕಳೆದ 4 ವರ್ಷಗಳಲ್ಲಿ, ಜಡೇಜಾ ಒಬ್ಬ ಬ್ಯಾಟ್ಸ್‌ಮನ್ ಆಗಿ ತಮ್ಮ ಉತ್ತಮ ಪ್ರದರ್ಶನವನ್ನು ಮುಂದುವರೆಸಿದ್ದಾರೆ. ಕೊಹ್ಲಿ, ಪೂಜಾರ, ರಹಾನೆ, ರಾಹುಲ್ ಮತ್ತು ಅಯ್ಯರ್‌ರಂತಹ ಬ್ಯಾಟ್ಸ್‌ಮನ್‌ಗಳು ನಿರಂತರವಾಗಿ ವೈಫಲ್ಯ ಅನುಭವಿಸುತ್ತಿರುವ ಸಮಯದಲ್ಲಿ ಜಡೇಜಾ ಅವರ ಬ್ಯಾಟ್ನಿಂದ ನಿರಂತರವಾಗಿ ರನ್ ಮಳೆ ಹರಿದಿದೆ. ಅದಕ್ಕೆ ಪೂರಕವಾಗಿ ಕಳೆದ 4 ವರ್ಷಗಳಲ್ಲಿ ಜಡೇಜಾ ಅವರ ಬ್ಯಾಟಿಂಗ್ ಸರಾಸರಿ ಸ್ಟಾರ್ ಕ್ರಿಕೆಟಿಗರಿಗಿಂತ ಉತ್ತಮವಾಗಿದೆ.
7 / 8
ಸೆಪ್ಟೆಂಬರ್ 1, 2020 ರಿಂದ ಇಲ್ಲಿಯವರೆಗಿನ ಅಂಕಿಅಂಶಗಳನ್ನು ಗಮನಿಸಿದರೆ, ಕೊಹ್ಲಿ 34.70 ರ ಸರಾಸರಿಯಲ್ಲಿ 1631 ರನ್ ಗಳಿಸಿದ್ದಾರೆ. ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ 30.11 ರ ಸರಾಸರಿಯಲ್ಲಿ 1355 ರನ್ ಗಳಿಸಿದ್ದರೆ, ಕೆ ಎಲ್ ರಾಹುಲ್ 32.33 ರ ಸರಾಸರಿಯಲ್ಲಿ 873 ರನ್ ಗಳಿಸಿದ್ದಾರೆ. ಶ್ರೇಯಸ್ ಅಯ್ಯರ್ 36.86 ರ ಸರಾಸರಿಯಲ್ಲಿ 811 ರನ್ ಕಲೆಹಾಕಿದ್ದರೆ, ರಹಾನೆ 35.44 ರ ಸರಾಸರಿಯಲ್ಲಿ 874 ರನ್ ಗಳಿಸಿದ್ದಾರೆ.
8 / 8
ಯುವ ಬ್ಯಾಟ್ಸ್ಮನ್ ಶುಭ್ಮನ್ ಗಿಲ್ ಕೂಡ 35.44 ರ ಸರಾಸರಿಯಲ್ಲಿ 1524 ರನ್ ಗಳಿಸಿದ್ದಾರೆ. ಈ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಿಗೆ ಹೋಲಿಸಿದರೆ, ಆರು ಮತ್ತು ಏಳನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಜಡೇಜಾ 39.15 ಸರಾಸರಿಯಲ್ಲಿ 1253 ರನ್ ಗಳಿಸಿದ್ದಾರೆ. ಇದರಲ್ಲಿ 3 ಶತಕ ಮತ್ತು 7 ಅರ್ಧ ಶತಕಗಳೂ ಸೇರಿವೆ.