4 ಕಡೆ 5: ಬೆಂಕಿ ಬೌಲಿಂಗ್‌ನೊಂದಿಗೆ ಭರ್ಜರಿ ದಾಖಲೆ ಬರೆದ ಸಿರಾಜ್

Updated on: Jul 05, 2025 | 8:54 AM

India vs England 2nd Test: ಎಡ್ಜ್​ಬಾಸ್ಟನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಮೊದಲ ಇನಿಂಗ್ಸ್​ನಲ್ಲಿ 587 ರನ್​ ಕಲೆಹಾಕಿದೆ. ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆಡಿದ ಇಂಗ್ಲೆಂಡ್ ತಂಡವು 407 ರನ್​​ಗಳಿಸಿದೆ. ಇದೀಗ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್ ಆರಂಭಿಸಿದ್ದು, ಮೂರನೇ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 64 ರನ್​ಗಳಿಸಿದೆ.

1 / 5
ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶಿಸಿ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ (Mohammed Siraj) ವಿಶೇಷ ದಾಖಲೆ ಬರೆದಿದ್ದಾರೆ. ಅದು ಸಹ ಯಾರ್ಕರ್ ಸ್ಪೆಷಲಿಸ್ಟ್ ಜಸ್​ಪ್ರೀತ್ ಬುಮ್ರಾ ಅವರ ಸ್ಪೆಷಲ್ ರೆಕಾರ್ಡ್ ಅನ್ನು ಸರಿಗಟ್ಟುವ ಮೂಲಕ ಎಂಬುದು ವಿಶೇಷ.

2 / 5
ಬರ್ಮಿಂಗ್ಹ್ಯಾಮ್​ನ ಎಡ್ಜ್ ಬಾಸ್ಟನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ 19.3 ಓವರ್ ಎಸೆದ ಸಿರಾಜ್ ಕೇವಲ 70 ರನ್ ನೀಡಿ 6 ವಿಕೆಟ್ ಉರುಳಿಸಿದರು. ಇದು ಇಂಗ್ಲೆಂಡ್ ನಲ್ಲಿ ಸಿರಾಜ್ ಅವರ ಮೊದಲ ಫೈಫರ್ ಎಂಬುದು ವಿಶೇಷ.

3 / 5
ಇದರೊಂದಿಗೆ ಇಂಗ್ಲೆಂಡ್, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ಹಾಗೂ ಸೌತ್ ಆಫ್ರಿಕಾದಲ್ಲಿ ಇನಿಂಗ್ಸ್ ವೊಂದರಲ್ಲಿ 5 ವಿಕೆಟ್ ಗಳನ್ನು (ಫೈಫರ್) ಕಬಳಿಸಿದ ಭಾರತದ 2ನೇ ವೇಗಿ ಎಂಬ ದಾಖಲೆಯನ್ನು ಮೊಹಮ್ಮದ್ ಸಿರಾಜ್ ತಮ್ಮದಾಗಿಸಿಕೊಂಡರು.

4 / 5
ಇದಕ್ಕೂ ಮುನ್ನ ಇಂತಹದೊಂದು ಸಾಧನೆ ಮಾಡಿದ್ದು ಜಸ್​ಪ್ರೀತ್ ಬುಮ್ರಾ ಮಾತ್ರ. ಬುಮ್ರಾ ಕೂಡ ಇಂಗ್ಲೆಂಡ್, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ಹಾಗೂ ಸೌತ್ ಆಫ್ರಿಕಾದಲ್ಲಿ ಇನಿಂಗ್ಸ್ ವೊಂದರಲ್ಲಿ 5 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

5 / 5
ಇದೀಗ 6 ವಿಕೆಟ್ ಗಳೊಂದಿಗೆ ಈ ದಾಖಲೆ ಪಟ್ಟಿಗೆ ಮೊಹಮ್ಮದ್ ಸಿರಾಜ್ ಸೇರ್ಪಡೆಯಾಗಿದ್ದಾರೆ. ಇನ್ನು ಸಿರಾಜ್ ಅವರ ಈ ಮಾರಕ ದಾಳಿಯಿಂದಾಗಿ ಇಂಗ್ಲೆಂಡ್ ತಂಡವು ಮೊದಲ ಇನಿಂಗ್ಸ್ ನಲ್ಲಿ 407 ರನ್ ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಟೀಮ್ ಇಂಡಿಯಾ 180 ರನ್ ಗಳ ಮುನ್ನಡೆ ಪಡೆದುಕೊಂಡಿದೆ.