IND vs ENG: ಅತಿ ಹೆಚ್ಚು ಸರಣಿ ಗೆಲುವು; ಪಾಕ್, ವಿಂಡೀಸ್ ದಾಖಲೆ ಮುರಿದ ಟೀಂ ಇಂಡಿಯಾ
Team India: ತವರಿನಲ್ಲಿ ಅಜೇಯರಾಗಿ ಉಳಿದಿರುವ ಟೀಂ ಇಂಡಿಯಾ, ತವರಿನಲ್ಲಿ ಅತಿ ಹೆಚ್ಚು ಸರಣಿಗಳನ್ನು ಗೆದ್ದ ತಂಡಗಳ ಪೈಕಿ ಇದೀಗ ಪಾಕಿಸ್ತಾನ ಹಾಗೂ ವೆಸ್ಟ್ ಇಂಡೀಸ್ ತಂಡಗಳನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದೆ. ಇನ್ನು ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾ ತಂಡ ಮೊದಲ ಸ್ಥಾನದಲ್ಲಿದೆ.
1 / 6
ರಾಂಚಿಯಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಸರಣಿ ಗೆದ್ದಿರುವ ಟೀಂ ಇಂಡಿಯಾ, ತವರಿನಲ್ಲಿ ತನ್ನ ಅಜೇಯ ಓಟವನ್ನು ಮುಂದುವರೆಸಿದೆ. ಇಂಗ್ಲೆಂಡ್ ವಿರುದ್ಧದ ಈ ಟೆಸ್ಟ್ ಸರಣಿ ಗೆಲುವು ಟೀಂ ಇಂಡಿಯಾದ 17ನೇ ಟೆಸ್ಟ್ ಸರಣಿ ಗೆಲುವಾಗಿದೆ.
2 / 6
ಈ ಮೂಲಕ ತವರಿನಲ್ಲಿ ಅಜೇಯರಾಗಿ ಉಳಿದಿರುವ ಟೀಂ ಇಂಡಿಯಾ, ತವರಿನಲ್ಲಿ ಅತಿ ಹೆಚ್ಚು ಸರಣಿಗಳನ್ನು ಗೆದ್ದ ತಂಡಗಳ ಪೈಕಿ ಇದೀಗ ಪಾಕಿಸ್ತಾನ ಹಾಗೂ ವೆಸ್ಟ್ ಇಂಡೀಸ್ ತಂಡಗಳನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದೆ. ಇನ್ನು ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾ ತಂಡ ಮೊದಲ ಸ್ಥಾನದಲ್ಲಿದೆ.
3 / 6
ಕಾಂಗರೂಗಳು 1993ರಿಂದ 2008 ರವರೆಗೆ ತವರಿನಲ್ಲಿ ಒಟ್ಟು 28 ಟೆಸ್ಟ್ ಸರಣಿಗಳನ್ನು ಆಡಿದ್ದು, ಇದರಲ್ಲಿ ಒಂದೇ ಒಂದು ಸರಣಿಗಳನ್ನು ಸೋತಿಲ್ಲ. ಇದು ಇವರೆಗಿನ ದಾಖಲೆಯಾಗಿದೆ. ಇದಾದ ನಂತರ ಎರಡನೇ ಸ್ಥಾನದಲ್ಲಿದ್ದ ಪಾಕಿಸ್ತಾನ 1982 ರಿಂದ 1994 ರವರೆಗೆ ತನ್ನ ತವರಿನಲ್ಲಿ ಸರಣಿ ಸೋಲದ ದಾಖಲೆ ನಿರ್ಮಿಸಿತ್ತು.
4 / 6
2013 ರಿಂದ ತವರಿನಲ್ಲಿ ಯಾವುದೇ ಟೆಸ್ಟ್ ಸರಣಿಯನ್ನು ಸೋಲದ ಭಾರತ, ಇದೀಗ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು 3-1 ಅಂತರದಲ್ಲಿ ವಶಪಡಿಸಿಕೊಂಡಿದ್ದು, ಈ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಈ ಮೂಲಕ ಪಾಕಿಸ್ತಾನವನ್ನು ಮೂರನೇ ಸ್ಥಾನಕ್ಕೆ ತಳ್ಳಿದೆ. 2013 ರಿಂದ ಇಲ್ಲಿಯವರೆಗೆ ಭಾರತದಲ್ಲಿ ಟೀಂ ಇಂಡಿಯಾ 17ರ ಸರಣಿಯಲ್ಲಿ ಈ ಸಾಧನೆ ಮಾಡಿದೆ.
5 / 6
ಪಾಕಿಸ್ತಾನವನ್ನು ಹೊರತುಪಡಿಸಿ, ವೆಸ್ಟ್ ಇಂಡೀಸ್ ಸಹ ತವರಿನಲ್ಲಿ 16 ಸರಣಿಯಲ್ಲಿ ಸೋಲದ ದಾಖಲೆ ನಿರ್ಮಿಸಿತ್ತು. ತಂಡವು 1974 ಮತ್ತು 1994 ರ ನಡುವೆ ಈ ಸಾಧನೆ ಮಾಡಿತ್ತು. ಇದೀಗ 17 ಸರಣಿಯಲ್ಲಿ ಸೋಲಿಲ್ಲದ ಸರದಾರನೆನಿಸಿಕೊಂಡಿರುವ ಭಾರತವು ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ತಂಡಗಳನ್ನು ಹಿಂದಿಕ್ಕಿದೆ.
6 / 6
ಇದಕ್ಕೂ ಮುನ್ನ ಭಾರತ 1987 ರಿಂದ 1999 ರವರೆಗೆ 14 ಸರಣಿಗಳನ್ನು ಮತ್ತು 2004 ರಿಂದ 2012 ರವರೆಗೆ ಸತತ 14 ಸರಣಿಗಳನ್ನು ಸೋತಿಲ್ಲದ ದಾಖಲೆಯನ್ನು ಮಾಡಿದೆ. ಇವತ್ತಿಗೂ ಭಾರತಕ್ಕೆ ಬರುವ ಯಾವುದೇ ತಂಡಕ್ಕೆ ಸರಣಿ ಗೆಲ್ಲುವುದು ಕೋಟೆ ಗೆಲ್ಲುವುದಕ್ಕಿಂತ ಕಡಿಮೆಯೇನಲ್ಲ ಎಂಬುದು ಇಡೀ ವಿಶ್ವಕ್ಕೆ ತಿಳಿದಿರುವ ಸಂಗತಿಯಾಗಿದೆ.