IND vs IRE: ಟಿ20 ಕ್ರಿಕೆಟ್​ನಲ್ಲಿ ಹಾರ್ದಿಕ್- ಅಶ್ವಿನ್​ರನ್ನು ಹಿಂದಿಕ್ಕಿದ ಜಸ್ಪ್ರೀತ್ ಬುಮ್ರಾ..!

|

Updated on: Aug 21, 2023 | 8:14 AM

Jasprit Bumrah: ಐರ್ಲೆಂಡ್​ ಪ್ರವಾಸದಲ್ಲಿ ಇದುವರೆಗೆ ಆಡಿರುವ ಎರಡು ಟಿ20 ಪಂದ್ಯಗಳಲ್ಲಿ 4 ವಿಕೆಟ್ ಪಡೆದಿರುವ ಬುಮ್ರಾ (ಮೊದಲ ಪಂದ್ಯದಲ್ಲಿ 2 ವಿಕೆಟ್, 2ನೇ ಟಿ20 ಪಂದ್ಯದಲ್ಲಿ 2 ವಿಕೆಟ್) ಭಾರತದ ಪರ ಈ ಚುಟುಕು ಮಾದರಿಯಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್​ಗಳ ಪಟ್ಟಿಯಲ್ಲಿ ಇದೀಗ ಮೂರನೇ ಸ್ಥಾನಕ್ಕೇರಿದ್ದಾರೆ.

1 / 8
ಐರ್ಲೆಂಡ್‌ ಪ್ರವಾಸದಲ್ಲಿ ತಂಡವನ್ನು ಮುನ್ನಡೆಸುತ್ತಿರುವ ಸ್ಟಾರ್ ಭಾರತೀಯ ವೇಗಿ ಜಸ್ಪ್ರೀತ್ ಬುಮ್ರಾ ನಾಯಕತ್ವವಹಿಸಿದ ಮೊದಲ ಸರಣಿಯನ್ನೇ ಗೆದ್ದು ಬೀಗಿದ್ದರೆ, ಅಲ್ಲದೆ ವರ್ಷದ ಬಳಿಕ ತಂಡಕ್ಕೆ ಮರಳಿದ ಬುಮ್ರಾ ತಮ್ಮ ಲಯ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

2 / 8
ಐರ್ಲೆಂಡ್​ ಪ್ರವಾಸದಲ್ಲಿ ಇದುವರೆಗೆ ಆಡಿರುವ ಎರಡು ಟಿ20 ಪಂದ್ಯಗಳಲ್ಲಿ 4 ವಿಕೆಟ್ ಪಡೆದಿರುವ ಬುಮ್ರಾ (ಮೊದಲ ಪಂದ್ಯದಲ್ಲಿ 2 ವಿಕೆಟ್, 2ನೇ ಟಿ20 ಪಂದ್ಯದಲ್ಲಿ 2 ವಿಕೆಟ್) ಭಾರತದ ಪರ ಈ ಚುಟುಕು ಮಾದರಿಯಲ್ಲಿ ಅತ್ಯಧಿಕ  ವಿಕೆಟ್ ಪಡೆದ ಬೌಲರ್​ಗಳ ಪಟ್ಟಿಯಲ್ಲಿ ಇದೀಗ ಮೂರನೇ ಸ್ಥಾನಕ್ಕೇರಿದ್ದಾರೆ.

3 / 8
ಇದರೊಂದಿಗೆ ಟೀಂ ಇಂಡಿಯಾ ಪರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ವಿಕೆಟ್ ಉರುಳಿಸಿದ ಬೌಲರ್​ಗಳ ಪೈಕಿ ಹಾರ್ದಿಕ್ ಪಾಂಡ್ಯ ಹಾಗೂ ಆರ್ ಅಶ್ವಿನ್​ರನ್ನು ಬುಮ್ರಾ ಹಿಂದಿಕ್ಕಿದ್ದಾರೆ.

4 / 8
ಟಿ20 ಮಾದರಿಯಲ್ಲಿ ಟೀಂ ಇಂಡಿಯಾ ಪರ ಅತ್ಯಧಿಕ ವಿಕೆಟ್ ಉರುಳಿಸಿದ ಬೌಲರ್​ಗಳ ಪೈಕಿ 80 ಪಂದ್ಯಗಳನ್ನಾಡಿರುವ ಯುಜ್ವೇಂದ್ರ ಚಾಹಲ್ 96 ವಿಕೆಟ್ ಉರುಳಿಸಿ ಮೊದಲ ಸ್ಥಾನದಲ್ಲಿದ್ದಾರೆ.

5 / 8
ಹಾಗೆಯೇ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ವೇಗಿ ಭುವನೇಶ್ವರ್ ಕುಮಾರ್ ಆಡಿರುವ 87 ಪಂದ್ಯಗಳಲ್ಲಿ 90 ವಿಕೆಟ್ ಪಡೆದಿದ್ದಾರೆ.

6 / 8
ಪ್ರಸ್ತುತ ಮೂರನೇ ಸ್ಥಾನಕ್ಕೇರಿರುವ ವೇಗಿ ಜಸ್ಪ್ರೀತ್ ಬುಮ್ರಾ 62 ಪಂದ್ಯಗಳಿಂದ 74 ವಿಕೆಟ್ ಪಡೆದಿದ್ದಾರೆ.

7 / 8
92 ಪಂದ್ಯಗಳಿಂದ 73 ವಿಕೆಟ್ ಪಡೆದಿರುವ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ನಾಲ್ಕನೇ ಸ್ಥಾನದಲ್ಲಿದ್ದಾರೆ.

8 / 8
ಐದನೇ ಸ್ಥಾನದಲ್ಲಿರುವ ರವಿಚಂದ್ರನ್ ಅಶ್ವಿನ್ ಆಡಿರುವ 65 ಪಂದ್ಯಗಳಲ್ಲಿ 72 ವಿಕೆಟ್ ಕಬಳಿಸಿದ್ದಾರೆ.