Rohit Sharma: ರನ್ ರಟ್ನಲ್ಲಿ ಸಿಲುಕಿ ಒದ್ದಾಡುತ್ತಿರುವ ರೋಹಿತ್ ಶರ್ಮಾ
IND vs NZ: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನ್ಯೂಝಿಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ಟೀಮ್ ಇಂಡಿಯಾ 4 ವಿಕೆಟ್ ಕಳೆದುಕೊಂಡು 86 ರನ್ ಕಲೆಹಾಕಿದೆ. ಅತ್ತ ನ್ಯೂಝಿಲೆಂಡ್ ತಂಡವು ಮೊದಲ ಇನಿಂಗ್ಸ್ನಲ್ಲಿ 235 ರನ್ ಗಳಿಸಿ ಆಲೌಟ್ ಆಗಿದೆ.
1 / 5
ಟೆಸ್ಟ್ ಕ್ರಿಕೆಟ್ನಲ್ಲಿ ರೋಹಿತ್ ಶರ್ಮಾ (Rohit Sharma) ಅವರ ಕಳಪೆ ಬ್ಯಾಟಿಂಗ್ ಮುಂದುವರೆದಿದೆ. ನ್ಯೂಝಿಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲೂ ಹಿಟ್ಮ್ಯಾನ್ ವಿಫಲರಾಗಿದ್ದಾರೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಕೇವಲ 18 ರನ್ಗಳಿಸಿ ಔಟಾಗಿದ್ದಾರೆ.
2 / 5
ಇದರೊಂದಿಗೆ ಅನಗತ್ಯ ದಾಖಲೆಯೊಂದು ರೋಹಿತ್ ಶರ್ಮಾ ಪಾಲಾಗಿದೆ. ಅಂದರೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ತವರಿನಲ್ಲಿ ಅತ್ಯಧಿಕ ಕಡಿಮೆ ಸರಾಸರಿಯಲ್ಲಿ ರನ್ ಕಲೆಹಾಕಿದ ಭಾರತೀಯ ನಾಯಕನೆಂಬ ಹೀನಾಯ ದಾಖಲೆ ಹಿಟ್ಮ್ಯಾನ್ ಹೆಸರಿಗೆ ಸೇರ್ಪಡೆಯಾಗಿದೆ.
3 / 5
ಇದಕ್ಕೂ ಮುನ್ನ ಈ ಕೆಟ್ಟ ದಾಖಲೆ ಸುನಿಲ್ ಗವಾಸ್ಕರ್ ಹೆಸರಿನಲ್ಲಿತ್ತು. 1984 ರಲ್ಲಿ ಟೀಮ್ ಇಂಡಿಯಾ ಟೆಸ್ಟ್ ತಂಡದ ನಾಯಕರಾಗಿದ್ದ ಗವಾಸ್ಕರ್, ತವರಿನಲ್ಲಿ ಆಡಿದ 8 ಇನಿಂಗ್ಸ್ಗಳಲ್ಲಿ ಕೇವಲ 140 ರನ್ ಕಲೆಹಾಕಿದ್ದರು. ಅಂದರೆ 17.50 ರ ಸರಾಸರಿಯಲ್ಲಿ ಬ್ಯಾಟಿಂಗ್ ಪ್ರದರ್ಶಿಸಿ ಭಾರೀ ಟೀಕೆಗೆ ಗುರಿಯಾಗಿದ್ದರು.
4 / 5
ಇದೀಗ ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಸುನಿಲ್ ಗವಾಸ್ಕರ್ಗಿಂತಲೂ ಕಳಪೆ ಪ್ರದರ್ಶನ ನೀಡಿದ್ದಾರೆ. ಈ ವರ್ಷ ತವರಿನಲ್ಲಿ ಆಡಿದ 9 ಇನಿಂಗ್ಸ್ಗಳಲ್ಲಿ ಹಿಟ್ಮ್ಯಾನ್ ಕಲೆಹಾಕಿದ್ದು ಕೇವಲ 122 ರನ್ಗಳು ಮಾತ್ರ. ಅಂದರೆ ಕೇವಲ 13.55 ಸರಾಸರಿಯಲ್ಲಿ ರನ್ ಕಲೆಹಾಕಿ ತವರಿನಲ್ಲಿ ಅತ್ಯಂತ ಹೀನಾಯ ಪ್ರದರ್ಶನ ನೀಡಿದ ನಾಯಕ ಎನಿಸಿಕೊಂಡಿದ್ದಾರೆ.
5 / 5
ಇನ್ನು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ತವರಿನಲ್ಲಿ ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ ನಾಯಕನ ದಾಖಲೆ ಇಂಗ್ಲೆಂಡ್ನ ಮಾಜಿ ಕ್ಯಾಪ್ಟನ್ ನಾಸಿರ್ ಹುಸೇನ್ ಹೆಸರಿನಲ್ಲಿದೆ. 2000 ರಲ್ಲಿ ನಾಸಿರ್ ಹುಸೇನ್ ತವರಿನಲ್ಲಿ ಆಡಿದ 10 ಇನಿಂಗ್ಸ್ಗಳಿಂದ ಕೇವಲ 92 ರನ್ ಗಳಿಸಿ ಈ ಕಳಪೆ ದಾಖಲೆ ಬರೆದಿದ್ದರು. ಇದೀಗ 9 ಇನಿಂಗ್ಸ್ಗಳಿಂದ 122 ರನ್ ಪೇರಿಸಿ ಈ ಅನಗತ್ಯ ದಾಖಲೆ ಪಟ್ಟಿಯಲ್ಲಿ ರೋಹಿತ್ ಶರ್ಮಾ ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ವೈಫಲ್ಯ ಮುಂದುವರೆದರೆ ನಾಸಿರ್ ಹುಸೇನ್ ಹೆಸರಿನಲ್ಲಿರುವ ಅತ್ಯಂತ ಹೀನಾಯ ದಾಖಲೆ ಹಿಟ್ಮ್ಯಾನ್ ಪಾಲಾಗಬಹುದು.