IND vs PAK: ಅಕ್ಟೋಬರ್ 15ರ ಬದಲು ಈ ದಿನದಂದು ನಡೆಯಲ್ಲಿದೆ ಭಾರತ- ಪಾಕ್ ವಿಶ್ವಕಪ್ ಪಂದ್ಯ; ವರದಿ

Updated on: Jul 26, 2023 | 11:39 AM

ODI World Cup 2023: ಪಿಟಿಐ ವರದಿ ಮಾಡಿರುವ ಪ್ರಕಾರ ನಿಗದಿಗೂ ಒಂದು ದಿನ ಮೊದಲು ಭಾರತ- ಪಾಕ್ ಪಂದ್ಯ ನಡೆಯುವ ಸಾಧ್ಯತೆಗಳಿವೆ.

1 / 7
ಏಕದಿನ ವಿಶ್ವಕಪ್ ವೇಳಾಪಟ್ಟಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಕದನದ ದಿನಾಂಕ ಬದಲಾಗುವ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿ ಮಾಡಲಾಗುತ್ತಿದೆ. ಇದೀಗ ಪಿಟಿಐ ವರದಿ ಮಾಡಿರುವ ಪ್ರಕಾರ ನಿಗದಿಗೂ ಒಂದು ದಿನ ಮೊದಲು ಭಾರತ- ಪಾಕ್ ಪಂದ್ಯ ನಡೆಯುವ ಸಾಧ್ಯತೆಗಳಿವೆ.

ಏಕದಿನ ವಿಶ್ವಕಪ್ ವೇಳಾಪಟ್ಟಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಕದನದ ದಿನಾಂಕ ಬದಲಾಗುವ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿ ಮಾಡಲಾಗುತ್ತಿದೆ. ಇದೀಗ ಪಿಟಿಐ ವರದಿ ಮಾಡಿರುವ ಪ್ರಕಾರ ನಿಗದಿಗೂ ಒಂದು ದಿನ ಮೊದಲು ಭಾರತ- ಪಾಕ್ ಪಂದ್ಯ ನಡೆಯುವ ಸಾಧ್ಯತೆಗಳಿವೆ.

2 / 7

ವಾಸ್ತವವಾಗಿ ಅಕ್ಟೋಬರ್ 15 ರಂದು ಭಾರತ ಹಾಗೂ ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯವನ್ನು ಅಹಮದಾಬಾದ್​ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಆ ದಿನವೇ ನವರಾತ್ರಿಯ ಮೊದಲ ದಿನವಾಗಿರುವುದು ಪಂದ್ಯಕ್ಕೆ ತಡೆಯೊಡ್ಡುತ್ತಿದೆ.

3 / 7

ಉತ್ತರ ಭಾರತದಲ್ಲಿ, ಅದರಲ್ಲೂ ಗುಜರಾತ್​​ನಲ್ಲಿ ನವರಾತ್ರಿಯ ಮೊದಲ ದಿನವನ್ನು ರಾತ್ರಿಯಿಡಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಹೀಗಾಗಿ ಆ ದಿನವೇ ಭಾರತ ಹಾಗೂ ಪಾಕಿಸ್ತಾನದ ನಡುವೆ ಪಂದ್ಯವನ್ನು ನಡೆಸಿದರೆ, ಭಾರಿ ಪ್ರಮಾಣದ ಪ್ರೇಕ್ಷಕರು ಮೈದಾನಕ್ಕೆ ಬರಲಿದ್ದಾರೆ.

4 / 7

ಹೀಗಾಗಿ ಪಂದ್ಯದ ವೇಳೆ ಭದ್ರತೆ ಒದಗಿಸುವುದು ಕೊಂಚ ಕಷ್ಟಕರವಾಗಬಹುದು. ಇದನ್ನು ಗಮನದಲ್ಲಿಟ್ಟುಕೊಂಡು ಭದ್ರತಾ ಏಜೆನ್ಸಿಗಳು ಪಂದ್ಯವನ್ನು ಬೇರೆ ದಿನ ನಡೆಸುವಂತೆ ಬಿಸಿಸಿಐಗೆ ಸೂಚಿಸಿವೆ. ಈ ಬಗ್ಗೆ ಚರ್ಚೆ ನಡೆಸುತ್ತಿರುವ ಬಿಸಿಸಿಐ ಶೀಘ್ರದಲ್ಲೇ ಒಂದು ತೀರ್ಮಾನಕ್ಕೆ ಬರಲಿದೆ ಎಂದು ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿ ದಿ ಇಂಡಿಯನ್ ಎಕ್ಸ್​ಪ್ರೆಸ್ ವರದಿ ಮಾಡಿದೆ.

5 / 7

ಇದೀಗ ಪಿಟಿಐ ವರದಿ ಮಾಡಿರುವ ಪ್ರಕಾರ, ಪಂದ್ಯವನ್ನು ಮುಂದೂಡುವ ಬದಲು ಈಗ ನಿಗದಿಯಾಗಿರುವ ದಿನಾಂಕಕ್ಕೆ ಒಂದು ದಿನ ಮುಂಚಿತವಾಗಿ ಅಂದರೆ, ಅಕ್ಟೋಬರ್ 15 ರ ಬದಲು ಅಕ್ಟೋಬರ್ 14 ರಂದು ನಡೆಸಲು ಬಿಸಿಸಿಐ ತೀರ್ಮಾನಿಸಿದೆ ಎಂದು ವರದಿಯಾಗಿದೆ.

6 / 7

ಅಲ್ಲದೆ ನರೇಂದ್ರ ಮೋದಿ ಸ್ಟೇಡಿಯಂನಲ್ಲೇ ಉಭಯ ತಂಡಗಳ ನಡುವೆ ಪಂದ್ಯ ನಡೆಯುವುದು ಖಚಿತ ಎಂದು ವರದಿಯಾಗಿದ್ದು, ಅಭಿಮಾನಿಗಳು ಮಾತ್ರ ತಮ್ಮ ಪ್ರಯಾಣದ ಯೋಜನೆಗಳನ್ನು ಬದಲಾಯಿಸಬೇಕಾಗಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

7 / 7

ಇನ್ನು ಟೀಂ ಇಂಡಿಯಾ ತನ್ನ ಆರಂಭಿಕ ವಿಶ್ವಕಪ್ ಪಂದ್ಯವನ್ನು ಅಕ್ಟೋಬರ್ 8 ರಂದು ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ಆಡಲಿದ್ದು, ಪಾಕಿಸ್ತಾನದ ಮೊದಲ ಎರಡು ಪಂದ್ಯಗಳನ್ನು ಹೈದರಾಬಾದ್‌ನಲ್ಲಿ ಅಕ್ಟೋಬರ್ 6 ಮತ್ತು ಅಕ್ಟೋಬರ್ 12 ರಂದು ನಿಗದಿಪಡಿಸಲಾಗಿದೆ.

Loading...
Unable to load recommendations.
Follow Us