IND vs SA: ಟೀಂ ಇಂಡಿಯಾದೊಂದಿಗೆ ಆಫ್ರಿಕಾಗೆ ತೆರಳಿಲ್ಲ ಮೂವರು ಕ್ರಿಕೆಟಿಗರು..! ಕಾರಣವೇನು?

|

Updated on: Dec 08, 2023 | 7:54 AM

IND vs SA: ದಕ್ಷಿಣ ಆಫ್ರಿಕಾದಲ್ಲಿ ಎಲ್ಲಾ ಮೂರು ಮಾದರಿಗಳ ಸರಣಿಯನ್ನು ಆಡಲು ಭಾರತೀಯ ಕ್ರಿಕೆಟ್ ತಂಡವು ಡಿಸೆಂಬರ್ 6 ರಂದು ಡರ್ಬನ್ ತೆರಳಿತು. ಆದರೆ, ಇನ್ನೂ ಕೆಲವು ಆಟಗಾರರು ತಂಡದೊಂದಿಗೆ ಪ್ರಯಾಣ ಬೆಳೆಸಿಲ್ಲ. ಇದರಲ್ಲಿ ಟಿ20 ಸರಣಿಯಲ್ಲಿ ಉಪನಾಯಕರಾಗಿದ್ದ ರವೀಂದ್ರ ಜಡೇಜಾ ಮತ್ತು ಶುಭ್​ಮನ್ ಗಿಲ್ ಕೂಡ ಸೇರಿದ್ದಾರೆ.

1 / 6
ದಕ್ಷಿಣ ಆಫ್ರಿಕಾದಲ್ಲಿ ಎಲ್ಲಾ ಮೂರು ಮಾದರಿಗಳ ಸರಣಿಯನ್ನು ಆಡಲು ಭಾರತೀಯ ಕ್ರಿಕೆಟ್ ತಂಡವು ಡಿಸೆಂಬರ್ 6 ರಂದು ಡರ್ಬನ್ ತೆರಳಿತು. ಆದರೆ, ಇನ್ನೂ ಕೆಲವು ಆಟಗಾರರು ತಂಡದೊಂದಿಗೆ ಪ್ರಯಾಣ ಬೆಳೆಸಿಲ್ಲ. ಇದರಲ್ಲಿ ಟಿ20 ಸರಣಿಯಲ್ಲಿ ಉಪನಾಯಕರಾಗಿದ್ದ ರವೀಂದ್ರ ಜಡೇಜಾ ಮತ್ತು ಶುಭ್​ಮನ್ ಗಿಲ್ ಕೂಡ ಸೇರಿದ್ದಾರೆ.

2 / 6
ಇಬ್ಬರೂ ಆಟಗಾರರು ಪ್ರಸ್ತುತ ಯುರೋಪ್‌ನಲ್ಲಿದ್ದು ಅಲ್ಲಿಂದ ನೇರವಾಗಿ ದಕ್ಷಿಣ ಆಫ್ರಿಕಾದಲ್ಲಿ ತಂಡವನ್ನು ಸೇರಬೇಕಾಗಿದೆ. ಭಾರತ ತಂಡ ಟಿ20 ಸರಣಿಯೊಂದಿಗೆ ತನ್ನ ಪ್ರವಾಸವನ್ನು ಆರಂಭಿಸಲಿದ್ದು, ಇದರ ಮೊದಲ ಪಂದ್ಯ ಡಿಸೆಂಬರ್ 10 ರಂದು ಡರ್ಬನ್ ಮೈದಾನದಲ್ಲಿಯೇ ನಡೆಯಲಿದೆ.

3 / 6
ಏಕದಿನ ವಿಶ್ವಕಪ್ ಮುಗಿದ ತಕ್ಷಣ ಯುರೋಪ್‌ಗೆ ವಿಹಾರಕ್ಕೆ ತೆರಳಿದ್ದ ಆರಂಭಿಕ ಬ್ಯಾಟ್ಸ್‌ಮನ್ ಶುಭ್​ಮನ್ ಗಿಲ್ ಕೂಡ ನೇರವಾಗಿ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕ್ರಿಕ್‌ಬಜ್‌ಗೆ ಹೇಳಿಕೆ ತಿಳಿಸಿದೆ.

4 / 6
ಇದಲ್ಲದೇ ಟಿ20 ಹಾಗೂ ಏಕದಿನ ಸರಣಿಯಲ್ಲಿ ತಂಡದ ಭಾಗವಾಗಿರುವ ದೀಪಕ್ ಚಾಹರ್ ಸೇರುವ ಬಗ್ಗೆ ಇನ್ನು ಯಾವುದೇ ಖಚಿತ ಮಾಹಿತಿ ಹೊರಬಿದ್ದಿಲ್ಲ. ದೀಪಕ್, ತಮ್ಮ ತಂದೆಯ ಅನಾರೋಗ್ಯದ ಕಾರಣ ಅವರು ಇನ್ನೂ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಲು ಸಾಧ್ಯವಾಗಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

5 / 6
ಆದಾಗ್ಯೂ, ಅವರು ಶೀಘ್ರದಲ್ಲೇ ದಕ್ಷಿಣ ಆಫ್ರಿಕಾಕ್ಕೆ ತೆರಳುವ ಸಾಧ್ಯತೆಗಳಿವೆ. ಅದಕ್ಕಾಗಿಯೇ ನಾವು ಅವರ ಸ್ಥಾನಕ್ಕೆ ಯಾವುದೇ ಬದಲಿ ಆಟಗಾರನ ಹೆಸರನ್ನು ಘೋಷಿಸಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಡರ್ಬನ್‌ನಲ್ಲಿ ನಡೆಯಲಿರುವ ಮೊದಲ ಪಂದ್ಯಕ್ಕೂ ಮುನ್ನವೇ ನೇರವಾಗಿ ತಂಡವನ್ನು ಸೇರಿಕೊಳ್ಳುವುದಾಗಿ ಎಲ್ಲಾ ಆಟಗಾರರು ಬಿಸಿಸಿಐನಿಂದ ಒಪ್ಪಿಗೆ ಪಡೆದಿರುವುದು ಸ್ಪಷ್ಟವಾಗಿದೆ.

6 / 6
ಈ ಪ್ರವಾಸದಲ್ಲಿ ಭಾರತ ಎ ತಂಡ ಟಿ20, ಏಕದಿನ ಹಾಗೂ ಟೆಸ್ಟ್ ಸರಣಿಗಳಲ್ಲದೆ ಮೂರು ಅಭ್ಯಾಸ ಪಂದ್ಯಗಳನ್ನು ಆಡಬೇಕಿದ್ದು, ಇದರಲ್ಲಿ ಹಲವು ಯುವ ಆಟಗಾರರಿಗೆ ಅವಕಾಶ ನೀಡಲಾಗಿದೆ.

Published On - 7:54 am, Fri, 8 December 23