IND vs SA: 31 ವರ್ಷಗಳ ಕಾಯುವಿಕೆ ಅಂತ್ಯ; ಇತಿಹಾಸ ಸೃಷ್ಟಿಸಿದ ರೋಹಿತ್ ಪಡೆ..!
IND vs SA: 1993ರ ನಂತರ ಮೊದಲ ಬಾರಿಗೆ ಭಾರತ ತಂಡ ಕೇಪ್‌ಟೌನ್‌ನಲ್ಲಿ ಗೆಲುವು ಸಾಧಿಸಿದೆ. ಅಂದರೆ ಇಲ್ಲಿ ಗೆಲುವಿಗಾಗಿ ಮೂರು ದಶಕಗಳ ಕಾಯುವಿಕೆ ಅಂತ್ಯಗೊಂಡಿದೆ. ಭಾರತ ತಂಡವು 2 ಜನವರಿ 1993 ರಂದು ಇಲ್ಲಿ ತನ್ನ ಮೊದಲ ಟೆಸ್ಟ್ ಆಡಿ ಸೋತಿತ್ತು.
1 / 8
ಕೇಪ್ ಟೌನ್ ಟೆಸ್ಟ್‌ನಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ 2 ಪಂದ್ಯಗಳ ಟೆಸ್ಟ್ ಸರಣಿಯನ್ನು 1-1 ರಿಂದ ಡ್ರಾ ಮಾಡಿಕೊಂಡಿದೆ. ಮೊದಲ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದ್ದ ಭಾರತ, ಇದೀಗ 2ನೇ ಟೆಸ್ಟ್‌ನಲ್ಲಿ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.
2 / 8
ಆದರೆ ಈ ಬಾರಿಯೂ ಟೆಸ್ಟ್ ಸರಣಿ ಗೆಲ್ಲದ ಭಾರತ ಮತ್ತೊಮ್ಮೆ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಕನಸನ್ನು ಕನಸಾಗಿಯೇ ಉಳಿಸಿಕೊಂಡಿದೆ. ಆದರೆ ಕೇಪ್ ಟೌನ್ ಟೆಸ್ಟ್ ಗೆದ್ದ ಭಾರತ ಇತಿಹಾಸ ಸೃಷ್ಟಿಸಿದೆ. ಅದರಂತೆ ಕೇಪ್‌ಟೌನ್‌ನಲ್ಲಿ ಆಫ್ರಿಕಾ ತಂಡವನ್ನು ಮಣಿಸಿದ ಏಷ್ಯಾದ ಮೊದಲ ತಂಡ ಎಂಬ ದಾಖಲೆಯನ್ನು ಟೀಂ ಇಂಡಿಯಾ ಬರೆದಿದೆ.
3 / 8
1993ರ ನಂತರ ಮೊದಲ ಬಾರಿಗೆ ಭಾರತ ತಂಡ ಕೇಪ್‌ಟೌನ್‌ನಲ್ಲಿ ಗೆಲುವು ಸಾಧಿಸಿದೆ. ಅಂದರೆ ಇಲ್ಲಿ ಗೆಲುವಿಗಾಗಿ ಮೂರು ದಶಕಗಳ ಕಾಯುವಿಕೆ ಅಂತ್ಯಗೊಂಡಿದೆ. ಭಾರತ ತಂಡವು 2 ಜನವರಿ 1993 ರಂದು ಇಲ್ಲಿ ತನ್ನ ಮೊದಲ ಟೆಸ್ಟ್ ಆಡಿ ಸೋತಿತ್ತು.
4 / 8
ಅಂದಿನಿಂದ ತಂಡ ಒಟ್ಟು 6 ಪಂದ್ಯಗಳನ್ನು ಆಡಿದ್ದು, ಈ ಪೈಕಿ ನಾಲ್ಕರಲ್ಲಿ ಸೋಲು ಕಂಡಿದ್ದು, ಎರಡು ಪಂದ್ಯಗಳು ಡ್ರಾ ಆಗಿವೆ. ಇದೀಗ ಇದೇ ಮೈದಾನದಲ್ಲಿ ಮೊದಲ ಬಾರಿಗೆ ಏಳನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದೆ.
5 / 8
ಈ ಪಂದ್ಯದ ಕುರಿತು ಮಾತನಾಡುವುದಾದರೆ.. ದಕ್ಷಿಣ ಆಫ್ರಿಕಾದ ನಾಯಕ ಡೀನ್ ಎಲ್ಗರ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಮೊದಲ ಇನ್ನಿಂಗ್ಸ್‌ನಲ್ಲಿ ಮೊಹಮ್ಮದ್ ಸಿರಾಜ್ 15 ರನ್‌ಗಳಿಗೆ 6 ವಿಕೆಟ್ ಕಬಳಿಸಿ ಇಡೀ ಆಫ್ರಿಕಾ ತಂಡ 55 ರನ್‌ಗಳಿಗೆ ಕುಸಿಯುವಂತೆ ಮಾಡಿದರು. ಇದಾದ ಬಳಿಕ ಭಾರತ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ 153 ರನ್‌ಗಳಿಗೆ ಆಲೌಟ್ ಆಗುವ ಮೂಲಕ 98 ರನ್‌ಗಳ ಮುನ್ನಡೆ ಸಾಧಿಸಿತು.
6 / 8
ಎರಡನೇ ಇನ್ನಿಂಗ್ಸ್‌ನಲ್ಲಿ ಆಫ್ರಿಕಾ ತಂಡ 176 ರನ್‌ಗಳಿಗೆ ಆಲೌಟ್ ಆಯಿತು. ತಂಡದ ಪರ ಏಡೆನ್ ಮಾಕ್ರ್ರಾಮ್ ಅಮೋಘ ಶತಕ ಸಿಡಿಸಿದರೆ, ಭಾರತದ ಪರ ಅದ್ಭುತ ಪ್ರದರ್ಶನ ನೀಡಿದ ಬುಮ್ರಾ 6 ವಿಕೆಟ್ ಪಡೆದರು. 79 ರನ್‌ಗಳ ಗೆಲುವಿನ ಗುರಿಯನ್ನು ಭಾರತ 3 ವಿಕೆಟ್ ಕಳೆದುಕೊಂಡು ಸಾಧಿಸಿತು.
7 / 8
ಹಾಗೆಯೇ ಮೊದಲ ಇನ್ನಿಂಗ್ಸ್‌ನಲ್ಲಿ 15 ರನ್ ನೀಡಿ 6 ವಿಕೆಟ್ ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ 31 ರನ್ ನೀಡಿ 1 ವಿಕೆಟ್ ಪಡೆದ ಮೊಹಮ್ಮದ್ ಸಿರಾಜ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
8 / 8
ಆಡಿದ ಎರಡು ಟೆಸ್ಟ್ ಪಂದ್ಯಗಳಲ್ಲಿ 12 ವಿಕೆಟ್ ಉರುಳಿಸಿದ ಯಾರ್ಕರ್ ಕಿಂಗ್ ಜಸ್ಪ್ರೀತ್ ಬುಮ್ರಾ, ಆಫ್ರಿಕಾದ ಡೀನ್ ಎಲ್ಗರ್ ಅವರೊಂದಿಗೆ ಜಂಟಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.