Rohit Sharma: ಅರ್ಧಶತಕ ಸಿಡಿಸಿ ಧೋನಿ- ಸೆಹ್ವಾಗ್​ರನ್ನು ಹಿಂದಿಕ್ಕಿದ ಹಿಟ್​ಮ್ಯಾನ್ ರೋಹಿತ್..!

|

Updated on: Jul 21, 2023 | 8:40 AM

IND vs WI 2nd Test: ಟೆಸ್ಟ್ ಕ್ರಿಕೆಟ್‌ನಲ್ಲಿ ಬ್ಯಾಕ್-ಟು-ಬ್ಯಾಕ್ ಶತಕ ಬಾರಿಸುವ ಅವಕಾಶವನ್ನು 20 ರನ್‌ಗಳಿಂದ ಕಳೆದುಕೊಂಡ ರೋಹಿತ್, ತಮ್ಮ11 ನೇ ಟೆಸ್ಟ್ ಶತಕದಿಂದ ವಂಚಿತರಾದರು.

1 / 9
ಕೆರಿಬಿಯನ್‌ ನಾಡಲ್ಲಿ ನಡೆಯುತ್ತಿರುವ ಎರಡು ಪಂದ್ಯಗಳ ಸರಣಿಯ ಎರಡನೇ ಟೆಸ್ಟ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ರೋಹಿತ್ ಶರ್ಮಾ ಉತ್ತಮ ಪ್ರದರ್ಶನ ಮುಂದುವರಿಸಿದ್ದಾರೆ. ಪೋರ್ಟ್ ಆಫ್ ಸ್ಪೇನ್‌ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನಲ್ಲಿ ನಾಯಕ ರೋಹಿತ್ ಟೀಂ ಇಂಡಿಯಾ ಪರ ಮತ್ತೊಂದು ದಾಖಲೆಯನ್ನು ಬರೆದಿದ್ದಾರೆ.

2 / 9
ಟೆಸ್ಟ್ ಕ್ರಿಕೆಟ್‌ನಲ್ಲಿ ಬ್ಯಾಕ್-ಟು-ಬ್ಯಾಕ್ ಶತಕ ಬಾರಿಸುವ ಅವಕಾಶವನ್ನು 20 ರನ್‌ಗಳಿಂದ ಕಳೆದುಕೊಂಡ ರೋಹಿತ್, ತಮ್ಮ11 ನೇ ಟೆಸ್ಟ್ ಶತಕದಿಂದ ವಂಚಿತರಾದರು. 39ನೇ ಓವರ್‌ನಲ್ಲಿ ಎಡಗೈ ಸ್ಪಿನ್ನರ್ ಶರ್ಮಾ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು.

3 / 9
ಮೊದಲ ಇನ್ನಿಂಗ್ಸ್​ನಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ರೋಹಿತ್, ಯಶಸ್ವಿ ಜೈಸ್ವಾಲ್ ಅವರೊಂದಿಗೆ ಮತ್ತೊಂದು ಶತಕದ ಜೊತೆಯಾಟವನ್ನು ಹಂಚಿಕೊಂಡರು. ಬಳಿಕ ಮೊದಲ ದಿನದ ಮೊದಲ ಇನಿಂಗ್ಸ್‌ನಲ್ಲಿ 80 ರನ್ ಬಾರಿಸಿದ ರೋಹಿತ್, ಎಂಎಸ್ ಧೋನಿ ಮತ್ತು ವೀರೇಂದ್ರ ಸೆಹ್ವಾಗ್‌ರನ್ನು ಹಿಂದಿಕ್ಕಿದ್ದಾರೆ.

4 / 9
ವಿಂಡೀಸ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳಲ್ಲಿ ಬಿಗ್ ಇನ್ನಿಂಗ್ಸ್ ಆಡಿದ ರೋಹಿತ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ  ಅತಿ ಹೆಚ್ಚು ರನ್ ಕಲೆಹಾಕಿದ 5 ನೇ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ರೋಹಿತ್ ಖಾತೆಯಲ್ಲಿ ಪ್ರಸ್ತುತ 17298 ರನ್‌ಗಳಿದ್ದು, ಕ್ರಮವಾಗಿ 17266 ಮತ್ತು 17253 ರನ್ ಬಾರಿಸಿರುವ ಧೋನಿ ಮತ್ತು ಸೆಹ್ವಾಗ್ ಅವರನ್ನು ಮೀರಿಸಿದ್ದಾರೆ. ಇನ್ನು ಭಾರತದ ಪರ ಅತಿ ಹೆಚ್ಚು ರನ್ ಕಲೆಹಾಕಿದ ಟಾಪ್ 5 ಬ್ಯಾಟರ್​ಗಳನ್ನು ನೋಡುವುದಾದರೆ..

5 / 9
ಸಚಿನ್ ತೆಂಡೂಲ್ಕರ್: 34357 ರನ್

ಸಚಿನ್ ತೆಂಡೂಲ್ಕರ್: 34357 ರನ್

6 / 9
ವಿರಾಟ್ ಕೊಹ್ಲಿ: 25461 ರನ್

ವಿರಾಟ್ ಕೊಹ್ಲಿ: 25461 ರನ್

7 / 9
ರಾಹುಲ್ ದ್ರಾವಿಡ್: 24208 ರನ್

ರಾಹುಲ್ ದ್ರಾವಿಡ್: 24208 ರನ್

8 / 9
ಸೌರವ್ ಗಂಗೂಲಿ: 28575 ರನ್

ಸೌರವ್ ಗಂಗೂಲಿ: 28575 ರನ್

9 / 9
ರೋಹಿತ್ ಶರ್ಮಾ: 17298 ರನ್

ರೋಹಿತ್ ಶರ್ಮಾ: 17298 ರನ್