IND vs WI: ಒಂದೇ ಮೈದಾನ, 29ನೇ ಶತಕ; ಕೊಹ್ಲಿ- ಸಚಿನ್ ಶತಕದ ನಡುವೆ ಹೀಗೊಂದು ಕಾಕತಾಳೀಯ

Updated on: Jul 22, 2023 | 12:18 PM

IND vs WI: ಈ ಶತಕದ ಮೂಲಕ ತಮ್ಮ 29ನೇ ಟೆಸ್ಟ್ ಶತಕ ಹಾಗೂ ಒಟ್ಟಾರೆ 76ನೇ ಅಂತಾರಾಷ್ಟ್ರೀಯ ಶತಕ ಪೂರ್ಣಗೊಳಿಸಿದ ವಿರಾಟ್ ಈ ಶತಕದೊಂದಿಗೆ ಹಲವರು ದಾಖಲೆಗಳನ್ನು ಪುಡಿಗಟ್ಟಿದ್ದಾರೆ.

1 / 9
ಈ ವರ್ಷದ ಮಾರ್ಚ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 186 ರನ್‌ಗಳ ಸ್ಮರಣೀಯ ಇನ್ನಿಂಗ್ಸ್‌ನೊಂದಿಗೆ ತಮ್ಮ ಟೆಸ್ಟ್ ಶತಕದ ಬರವನ್ನು ಕೊನೆಗೊಳಿಸಿದ ಕೊಹ್ಲಿ, ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್​ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿ ಮಿಂಚಿದ್ದಾರೆ.

ಈ ವರ್ಷದ ಮಾರ್ಚ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 186 ರನ್‌ಗಳ ಸ್ಮರಣೀಯ ಇನ್ನಿಂಗ್ಸ್‌ನೊಂದಿಗೆ ತಮ್ಮ ಟೆಸ್ಟ್ ಶತಕದ ಬರವನ್ನು ಕೊನೆಗೊಳಿಸಿದ ಕೊಹ್ಲಿ, ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್​ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿ ಮಿಂಚಿದ್ದಾರೆ.

2 / 9

ಇದು ವಿರಾಟ್ ಕೊಹ್ಲಿ ಅವರ ಅಂತರಾಷ್ಟ್ರೀಯ ವೃತ್ತಿಜೀವನದ 500 ನೇ ಪಂದ್ಯವಾಗಿದ್ದು, ಈ ಶತಕ ಅವರಿಗೆ ತುಂಬಾ ವಿಶೇಷವಾಗಿದೆ. ಈ ಶತಕದ ಮೂಲಕ ತಮ್ಮ 29ನೇ ಟೆಸ್ಟ್ ಶತಕ ಹಾಗೂ ಒಟ್ಟಾರೆ 76ನೇ ಅಂತಾರಾಷ್ಟ್ರೀಯ ಶತಕ ಪೂರ್ಣಗೊಳಿಸಿದ ವಿರಾಟ್ ಈ ಶತಕದೊಂದಿಗೆ ಹಲವರು ದಾಖಲೆಗಳನ್ನು ಪುಡಿಗಟ್ಟಿದ್ದಾರೆ.

3 / 9

ಅದರಲ್ಲಿ ಪ್ರಮುಖವಾದದ್ದು, 21 ವರ್ಷಗಳ ಹಿಂದೆ ಇದೇ ಮೈದಾನದಲ್ಲಿ ಅಂದರೆ ಪೋರ್ಟ್ ಆಫ್ ಸ್ಪೇನ್‌ನಲ್ಲಿ ಕ್ರಿಕೆಟ್ ದೇವರು ಮಾಡಿದ ಸಾಧನೆಯನ್ನು ಇದೀಗ ವಿರಾಟ್ ಕೊಹ್ಲಿ ಪುನರಾವರ್ತಿಸಿದ್ದಾರೆ.

4 / 9

ಟ್ರಿನಿಡಾಡ್ ನಗರದ ಈ ಐತಿಹಾಸಿಕ ಮೈದಾನದಲ್ಲಿ ನಡೆಯುತ್ತಿರುವ ಈ ಟೆಸ್ಟ್ ಪಂದ್ಯ ಅನೇಕ ಸ್ಮರಣೀಯ ಘಟನೆಗಳಿಗೆ ಸಾಕ್ಷಿಯಾಗಿದೆ. ಇದು ಉಭಯ ದೇಶಗಳ ನಡುವಣ 100ನೇ ಟೆಸ್ಟ್ ಪಂದ್ಯವಾಗಿರುವುದರೊಂದಿಗೆ ಕಿಂಗ್ ಕೊಹ್ಲಿಯ 500ನೇ ಅಂತಾರಾಷ್ಟ್ರೀಯ ಪಂದ್ಯವೂ ಆಗಿದೆ.

5 / 9

ತನ್ನ 500ನೇ ಪಂದ್ಯವನ್ನು ಸ್ಮರಣೀಯವಾಗಿಸಿದ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ, ಕಳೆದ 5 ವರ್ಷಗಳಿಂದ ವಿದೇಶಿ ನೆಲದಲ್ಲಿ ಎದುರಿಸುತ್ತಿದ್ದ ಟೆಸ್ಟ್ ಶತಕದ ಬರವನ್ನು ಪೋರ್ಟ್ ಆಫ್ ಸ್ಪೇನ್ ಮೈದಾನದಲ್ಲಿ ನೀಗಿಸಿದ್ದಾರೆ.

6 / 9

ಇದರೊಂದಿಗೆ 21 ವರ್ಷಗಳ ಹಿಂದೆ ಇದೇ ಮೈದಾನದಲ್ಲಿ ಸಚಿನ್ ತೆಂಡೂಲ್ಕರ್ ಮಾಡಿದ್ದ ಐತಿಹಾಸಿಕ ಸಾಧನೆಯನ್ನು ಕಾಕತಾಳೀಯವೆಂಬಂತೆ ಕೊಹ್ಲಿ ಪುನರಾವರ್ತಿಸಿದ್ದಾರೆ. ವಾಸ್ತವವಾಗಿ 2002 ರಲ್ಲಿ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸ ಮಾಡಿತ್ತು.

7 / 9

ಆ ಪ್ರವಾಸದಲ್ಲೂ ಈ ಮೈದಾನದಲ್ಲೇ ಎರಡನೇ ಟೆಸ್ಟ್ ಪಂದ್ಯ ನಡೆದಿತ್ತು. ಆ ಪಂದ್ಯದಲ್ಲೂ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ಪರ ಸಚಿನ್ ತೆಂಡೂಲ್ಕರ್ ಮೊದಲ ಇನ್ನಿಂಗ್ಸ್‌ನಲ್ಲಿ 117 ರನ್​ಗಳ ಇನ್ನಿಂಗ್ಸ್ ಆಡಿದ್ದರು.

8 / 9

ಸಚಿನ್ ಸಿಡಿಸಿದ ಆ ಶತಕ ಅವರ ಟೆಸ್ಟ್ ವೃತ್ತಿ ಬದುಕಿನ 29ನೇ ಟೆಸ್ಟ್ ಶತಕವಾಗಿತ್ತು. ಈಗ ಕೊಹ್ಲಿ ಸಿಡಿಸಿರುವುದು ಕೂಡ 29ನೇ ಟೆಸ್ಟ್ ಶತಕ.

9 / 9

ಅಲ್ಲದೆ 21 ವರ್ಷಗಳ ಹಿಂದೆ 29ನೇ ಟೆಸ್ಟ್ ಶತಕ ಸಿಡಿಸಿದ್ದ ಸಚಿನ್ ತೆಂಡೂಲ್ಕರ್, ಅತಿ ಹೆಚ್ಚು ಟೆಸ್ಟ್ ಶತಕಗಳ ವಿಚಾರದಲ್ಲಿ ಆಸೀಸ್ ದಂತಕಥೆ ಸರ್ ಬ್ರಾಡ್​ಮನರ್​ನ್ನು ಸರಿಗಟ್ಟಿದ್ದರು. ಇದೀಗ ಕೊಹ್ಲಿ ಸಹ ಈ ದಾಖಲೆಯ ವಿಚಾರದಲ್ಲಿ ಬ್ರಾಡ್​ಮನ್​ರನ್ನು ಸರಿಗಟ್ಟಿದ್ದಾರೆ.

Loading...
Unable to load recommendations.
Follow Us