Virat Kohli: ಅತಿ ಹೆಚ್ಚು ಕ್ಯಾಚ್ ಹಿಡಿದವರ ಪೈಕಿ ಇದೀಗ ಕಿಂಗ್ ಕೊಹ್ಲಿಗೆ ನಾಲ್ಕನೇ ಸ್ಥಾನ..!

|

Updated on: Jul 28, 2023 | 3:07 PM

Virat Kohli: ವಿರಾಟ್​ಗೆ ಮೊದಲ ಪಂದ್ಯದಲ್ಲಿ ಬ್ಯಾಟ್ ಮಾಡಲು ಅವಕಾಶ ಸಿಗದಿದ್ದರೂ ನ್ಯೂಜಿಲೆಂಡ್ ಸ್ಟಾರ್ ಬ್ಯಾಟರ್ ಮತ್ತು ಮಾಜಿ ನಾಯಕ ರಾಸ್ ಟೇಲರ್ ಅವರ ದಾಖಲೆಯನ್ನು ಸರಿಗಟ್ಟುವಲ್ಲಿ ಯಶಸ್ವಿಯಾದರು.

1 / 8
ಕೆನ್ಸಿಂಗ್ಟನ್ ಓವಲ್‌ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ ಸೂಪರ್‌ಸ್ಟಾರ್ ವಿರಾಟ್ ಕೊಹ್ಲಿಗೆ ಬ್ಯಾಟಿಂಗ್ ಅವಕಾಶ ಸಿಗಲಿಲ್ಲ. ಇದು ಬಹುಶಃ ಅವರ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಏಕದಿನ ಪಂದ್ಯದಲ್ಲಿ ಆಡುತ್ತಿದ್ದರೂ ಮತ್ತು ಭಾರತವು ಐದು ವಿಕೆಟ್‌ಗಳನ್ನು ಕಳೆದುಕೊಂಡಿದ್ದರೂ, ಅವರಿಗೆ ಬ್ಯಾಟಿಂಗ್ ಮಾಡಲು ಅವಕಾಶ ಸಿಗಲಿಲ್ಲ.

2 / 8
ಆದರೆ ವಿರಾಟ್​ಗೆ ಮೊದಲ ಪಂದ್ಯದಲ್ಲಿ ಬ್ಯಾಟ್ ಮಾಡಲು ಅವಕಾಶ ಸಿಗದಿದ್ದರೂ ನ್ಯೂಜಿಲೆಂಡ್ ಸ್ಟಾರ್ ಬ್ಯಾಟರ್ ಮತ್ತು ಮಾಜಿ ನಾಯಕ ರಾಸ್ ಟೇಲರ್ ಅವರ ದಾಖಲೆಯನ್ನು ಸರಿಗಟ್ಟುವಲ್ಲಿ ಯಶಸ್ವಿಯಾದರು.

3 / 8
ಮೊದಲ ಏಕದಿನ ಪಂದ್ಯದಲ್ಲಿ, ರವೀಂದ್ರ ಜಡೇಜಾ ಬೌಲ್ ಮಾಡಿದ 18 ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ವೆಸ್ಟ್ ಇಂಡೀಸ್ ಆಲ್‌ರೌಂಡರ್ ರೊಮಾರಿಯೊ ಶೆಫರ್ಡ್ ಅವರ ಒನ್ ಹ್ಯಾಂಡ್ ಕ್ಯಾಚ್ ಪಡೆಯುವ ಮೂಲಕ ವಿರಾಟ್ ದಾಖಲೆಯೊಂದನ್ನು ನಿರ್ಮಿಸಿದರು.

4 / 8
ಎರಡನೇ ಸ್ಲಿಪ್‌ನಲ್ಲಿ ಶೆಫರ್ಡ್‌ ಅವರ ಕ್ಯಾಚ್ ಹಿಡಿಯುವುದರೊಂದಿಗೆ ಕೊಹ್ಲಿ ಏಕದಿನ ಮಾದರಿಯಲ್ಲಿ 142 ಕ್ಯಾಚ್​ಗಳನ್ನು ಪೂರೈಸಿದಿರು. ಇದರೊಂದಿಗೆ ಏಕದಿನ ಮಾದರಿಯಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ಆಟಗಾರರ ಪಟ್ಟಿಯಲ್ಲಿ ರಾಸ್ ಟೇಲರ್​ ಅವರೊಂದಿಗೆ ನಾಲ್ಕನೇ ಸ್ಥಾನಕ್ಕೇರಿದ್ದಾರೆ.

5 / 8
ವಾಸ್ತವವಾಗಿ ಕೊಹ್ಲಿ 275 ಪಂದ್ಯಗಳ 273 ಇನ್ನಿಂಗ್ಸ್‌ಗಳಲ್ಲಿ 142 ನೇ ಕ್ಯಾಚ್ ಹಿಡಿದ ದಾಖಲೆ ನಿರ್ಮಿಸಿದರೆ, ಕಿವೀಸ್ ಬ್ಯಾಟರ್ ಟೇಲರ್ ಒಟ್ಟು 236 ಪಂದ್ಯಗಳಲ್ಲಿ 142 ಕ್ಯಾಚ್‌ಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.

6 / 8
ಇನ್ನು ಅತಿ ಹೆಚ್ಚು ಕ್ಯಾಚ್ ಪಡೆದ ಆಟಗಾರರ ಪೈಕಿ 448 ಪಂದ್ಯಗಳಲ್ಲಿ 218 ಕ್ಯಾಚ್‌ಗಳನ್ನು ಹಿಡಿದಿರುವ ಲಂಕಾ ಲೆಜೆಂಡ್ ಮಹೇಲ ಜಯವರ್ಧನೆ ನಂ.1 ಸ್ಥಾನದಲ್ಲಿ ಕುಳಿತಿದ್ದಾರೆ.

7 / 8
ಅವರ ನಂತರ 375 ಪಂದ್ಯಗಳಲ್ಲಿ 160 ಕ್ಯಾಚ್‌ಗಳನ್ನು ಹಿಡಿದಿರುವ ಎರಡು ಬಾರಿಯ ಏಕದಿನ ವಿಶ್ವಕಪ್ ವಿಜೇತ ಆಸ್ಟ್ರೇಲಿಯಾದ ನಾಯಕ ರಿಕಿ ಪಾಂಟಿಂಗ್ ಇದ್ದಾರೆ.

8 / 8
ಮೂರನೇ ಸ್ಥಾನದಲ್ಲಿರುವ ಭಾರತದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ 334 ಪಂದ್ಯಗಳಲ್ಲಿ 156 ಕ್ಯಾಚ್‌ಗಳನ್ನು ಹಿಡಿದಿದ್ದಾರೆ.