IND vs ZIM: ಟೀಂ ಇಂಡಿಯಾ ಸೋಲಿಗೆ ಕಾರಣರಾದ ಈ ಐವರು ಐಪಿಎಲ್ ಸೂಪರ್ ಸ್ಟಾರ್ಸ್​..!

|

Updated on: Jul 06, 2024 | 9:00 PM

IND vs ZIM: ಸಾಕಷ್ಟು ರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ ಜಿಂಬಾಬ್ವೆ ತಂಡ 115 ರನ್‌ಗಳ ಡಿಫೆಂಡ್‌ ಮಾಡುತ್ತಿರುವಾಗ ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಸೋಲಿಸುತ್ತದೆ ಎಂದು ಯಾರೂ ಭಾವಿಸಿರಲಿಲ್ಲ. ಆದರೆ ಐಪಿಎಲ್​ನ ಈ ಐವರು ಸೂಪರ್ ಸ್ಟಾರ್​ಗಳ ಕಳಪೆ ಆಟದಿಂದಾಗಿ ಟೀಂ ಇಂಡಿಯಾ ಸೋಲನುಭವಿಸಿತು.

1 / 7
ಶನಿವಾರ ಹರಾರೆಯಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಸೋಲನ್ನು ಎದುರಿಸಿದೆ. ಐಪಿಎಲ್ ಸ್ಟಾರ್ ಆಟಗಾರರಿಂದ ಕಂಗೊಳಿಸುತ್ತಿದ್ದ ಟೀಂ ಇಂಡಿಯಾ 116 ರನ್ ಕೂಡ ಗಳಿಸಲಾಗದೆ 13 ರನ್ ಗಳಿಂದ ಸೋಲನುಭವಿಸಿತು.

2 / 7
ಸಾಕಷ್ಟು ರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ ಜಿಂಬಾಬ್ವೆ ತಂಡ 115 ರನ್‌ಗಳ ಡಿಫೆಂಡ್‌ ಮಾಡುತ್ತಿರುವಾಗ ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಸೋಲಿಸುತ್ತದೆ ಎಂದು ಯಾರೂ ಭಾವಿಸಿರಲಿಲ್ಲ. ಆದರೆ ಐಪಿಎಲ್​ನ ಈ ಐವರು ಸೂಪರ್ ಸ್ಟಾರ್​ಗಳ ಕಳಪೆ ಆಟದಿಂದಾಗಿ ಟೀಂ ಇಂಡಿಯಾ ಸೋಲನುಭವಿಸಿತು. ಆ ಐವರು ಐಪಿಎಲ್ ಸ್ಟಾರ್​ಗಳು ಯಾರು ಎಂಬುದನ್ನು ನೋಡುವುದಾದರೆ..

3 / 7
ಅಭಿಷೇಕ್ ಶರ್ಮಾ: ಐಪಿಎಲ್ ಸ್ಟಾರ್ ಬ್ಯಾಟ್ಸ್​ಮನ್ ಅಭಿಷೇಕ್ ಶರ್ಮಾ ಮೇಲೆ ಟೀಂ ಇಂಡಿಯಾ ಭಾರೀ ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ ಆರಂಭಿಕರಾಗಿ ಬಂದ ಅಭಿಷೇಕ್ ಖಾತೆ ತೆರೆಯದೆಯೇ ಔಟಾದರು. ಅಭಿಷೇಕ್ ಕೇವಲ 4 ಎಸೆತಗಳನ್ನು ಎದುರಿಸಿ ಚೊಚ್ಚಲ ಪಂದ್ಯದಲ್ಲೇ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.

4 / 7
ರುತುರಾಜ್ ಗಾಯಕ್ವಾಡ್: ಅಭಿಷೇಕ್ ಶರ್ಮಾ ಔಟಾದ ನಂತರ, ಅನುಭವಿ ಬ್ಯಾಟ್ಸ್‌ಮನ್ ರುತುರಾಜ್ ಗಾಯಕ್ವಾಡ್ ಅವರಿಂದ ಭಾರತ ತಂಡವು ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿತ್ತು. ಆದರೆ ಜಿಂಬಾಬ್ವೆ ಬೌಲರ್‌ಗಳ ಮುಂದೆ ರುತುರಾಜ್ ಆಟ ನಡೆಯಲಿಲ್ಲ. ರುತುರಾಜ್ 9 ಎಸೆತಗಳಲ್ಲಿ ಕೇವಲ 1 ಬೌಂಡರಿ ಬಾರಿಸಿ 7 ರನ್ ಗಳಿಸಿ ಔಟಾದರು.

5 / 7
ರಿಯಾನ್ ಪರಾಗ್: ತಮ್ಮ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಐಪಿಎಲ್‌ನಲ್ಲಿ ಅವಾಂತರ ಸೃಷ್ಟಿಸಿದ್ದ ರಿಯಾನ್ ಪರಾಗ್ ನಿರ್ಭೀತಿಯಿಂದ ಬ್ಯಾಟಿಂಗ್ ಮಾಡಿ ಜಿಂಬಾಬ್ವೆಯನ್ನು ಹಿಮ್ಮೆಟ್ಟಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಪರಾಗ್ 3 ಎಸೆತಗಳಲ್ಲಿ 2 ರನ್ ಗಳಿಸಲಷ್ಟೇ ಶಕ್ತರಾದರು. ಅವರು ಐದನೇ ಓವರ್‌ನ ನಾಲ್ಕನೇ ಎಸೆತದಲ್ಲಿ ತೆಂಡೈ ಚಟಾರ ಬೌಲಿಂಗ್​ನಲ್ಲಿ ಔಟಾದರು.

6 / 7
ರಿಂಕು ಸಿಂಗ್: ಒಂದರ ಹಿಂದೆ ಒಂದರಂತೆ ವಿಕೆಟ್‌ಗಳನ್ನು ಕಳೆದುಕೊಂಡ ನಂತರ, ಫಿನಿಶರ್ ಎಂದು ಕರೆಯಲ್ಪಡುವ ರಿಂಕು ಸಿಂಗ್ ಅವರು ನಿಧಾನವಾಗಿ ಆದರೆ ಖಚಿತವಾಗಿ ಭಾರತ ತಂಡವನ್ನು ಗೆಲುವಿನ ಹೊಸ್ತಿಲಿಗೆ ಕೊಂಡೊಯ್ಯುತ್ತಾರೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಅದು ಸಾಧ್ಯವಾಗಲಿಲ್ಲ. ಜಿಂಬಾಬ್ವೆ ವಿರುದ್ಧದ ಪ್ರದರ್ಶನದಿಂದ ರಿಂಕು ನಿರಾಸೆ ಮೂಡಿಸಿದರು. ಐದನೇ ಓವರ್‌ನ ಆರನೇ ಎಸೆತದಲ್ಲಿ ಅವರು ಕೆಟ್ಟ ಹೊಡೆತವನ್ನು ಆಡಿ ಖಾತೆ ತೆರೆಯದೆ ಔಟಾದರು.

7 / 7
ಧ್ರುವ್ ಜುರೆಲ್:  ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಮೆಚ್ಚುಗೆ ಗಳಿಸಿದ್ದ ಧ್ರುವ್ ಜುರೆಲ್ ಬ್ಯಾಟಿಂಗ್‌ನಲ್ಲಿ ದುರ್ಬಲ ಪ್ರದರ್ಶನ ತೋರಿದರು. ಜುರೆಲ್ 14 ಎಸೆತಗಳಲ್ಲಿ ಕೇವಲ 6 ರನ್ ಗಳಿಸಿ ಔಟಾದರು. ಅವರನ್ನು 10ನೇ ಓವರ್‌ನಲ್ಲಿ ಲ್ಯೂಕ್ ಜೊಂಗ್ವೆ ಔಟ್ ಮಾಡಿದರು.