IND vs IRE: ನಾಯಕನಾಗಿ ಮೊದಲ ಪಂದ್ಯದಲ್ಲೇ ಸೋತ ಶ್ರೇಯಸ್ ಅಯ್ಯರ್

Updated on: Jun 26, 2026 | 10:49 PM

India vs Ireland T20: ಹೊಸ ನಾಯಕ ಶ್ರೇಯಸ್ ಅಯ್ಯರ್ ನೇತೃತ್ವದಲ್ಲಿ ಭಾರತ ಟಿ20 ತಂಡ ಐರ್ಲೆಂಡ್ ವಿರುದ್ಧ ಹೀನಾಯವಾಗಿ ಸೋತಿದೆ. ಸೂರ್ಯಕುಮಾರ್ ಯಾದವ್ ಅನುಪಸ್ಥಿತಿಯಲ್ಲಿ ನಾಯಕತ್ವ ವಹಿಸಿಕೊಂಡ ಅಯ್ಯರ್, ಮೊದಲ ಪಂದ್ಯದಲ್ಲೇ ಸೋಲು ಕಂಡರು. ನಾಯಕರಾಗಿ ಹಾಗೂ ಆಟಗಾರನಾಗಿ ಅಯ್ಯರ್ 3 ರನ್‌ಗೆ ಔಟಾಗಿ ನಿರಾಸೆ ಮೂಡಿಸಿದರು. ಉಪನಾಯಕ ತಿಲಕ್ ಸಹ ಕಳಪೆ ಪ್ರದರ್ಶನ ನೀಡಿದರು. ಈ ಸೋಲು ತಂಡಕ್ಕೆ ದೊಡ್ಡ ಆಘಾತ ನೀಡಿದೆ.

1 / 5
ಹೊಸ ನಾಯಕನಡಿಯಲ್ಲಿ ಮೊದಲ ಟಿ20 ಸರಣಿಯನ್ನಾಡಿದ ವಿಶ್ವ ಚಾಂಪಿಯನ್ ಟೀಂ ಇಂಡಿಯಾ, ಕ್ರಿಕೆಟ್ ಶಿಶು ಐರ್ಲೆಂಡ್ ವಿರುದ್ಧ ಹೀನಾಯ ಸೋಲು ಕಂಡಿದೆ. ಸೂರ್ಯಕುಮಾರ್ ಯಾದವ್​ರನ್ನು ಟಿ20 ತಂಡದಿಂದ ಕೈಬಿಟ್ಟ ಬಳಿಕ ಟಿ20 ತಂಡದ ನಾಯಕತ್ವವಹಿಸಿಕೊಂಡಿರುವ ಶ್ರೇಯಸ್ ಅಯ್ಯರ್ ಮೊದಲ ಪಂದ್ಯದಲ್ಲೇ ಸೋಲಿನ ಆರಂಭ ಪಡೆದುಕೊಂಡಿದ್ದಾರೆ (PC-PTI).

2 / 5
ಸೂರ್ಯಕುಮಾರ್ ಯಾದವ್ ಕಳಪೆ ಫಾರ್ಮ್​ನಿಂದ ಬಳಲಿದರೂ ತಂಡವನ್ನು ಹಲವು ಸ್ಮರಣೀಯ ಗೆಲುವುಗಳತ್ತ ಮುನ್ನಡೆಸಿದ್ದರು. ಆದರೆ ಕಳೆದೆರಡು ಐಪಿಎಲ್‌ಗಳಲ್ಲಿ ಪಂಜಾಬ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಶ್ರೇಯಸ್ ಅಯ್ಯರ್ ಟೀಂ ಇಂಡಿಯಾದ ಚುಕ್ಕಾಣಿ ಹಿಡಿದ ಬಳಿಕ ಗೆಲುವಿನ ಶುಭಾರಂಭ ಪಡೆಯುವಲ್ಲಿ ಎಡವಿದ್ದಾರೆ (PC-PTI).

3 / 5
ಈ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನಾಯಕನಾಗಿ ಎಡವಿದ್ದು ಮಾತ್ರವಲ್ಲದೆ, ಆಟಗಾರನಾಗಿಯೂ ನಿರಾಸೆ ಮೂಡಿಸಿದರು. ಟೀಂ ಇಂಡಿಯಾ ಬಹುಬೇಗನೇ ಎರಡು ವಿಕೆಟ್‌ಗಳನ್ನು ಕಳೆದುಕೊಂಡ ಬಳಿಕ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಶ್ರೇಯಸ್ ಅಯ್ಯರ್ ಕೇವಲ 3 ರನ್ ಬಾರಿಸಿ ಔಟಾದರು. ಅಯ್ಯರ್ ಅವರ ವಿಕೆಟ್ ಪಡೆದಿದ್ದು, ಐರ್ಲೆಂಡ್ ಪರ ಚೊಚ್ಚಲ ಪಂದ್ಯವನ್ನಾಡಿದ ಮ್ಯಾಥ್ಯೂ ಹಂಫ್ರೀಸ್ (PC-PTI).

4 / 5
ವಾಸ್ತವವಾಗಿ ಶ್ರೇಯಸ್ ಅಯ್ಯರ್ ಭಾರತ ಟಿ20 ತಂಡದಲ್ಲಿ ಬರೋಬ್ಬರಿ 936 ದಿನಗಳು ಮತ್ತು 63 ಟಿ20 ಪಂದ್ಯಗಳ ನಂತರ ಕಾಣಿಸಿಕೊಂಡಿದ್ದರು. ಹೀಗಾಗಿ ಅವರ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಅದರಲ್ಲೂ ಟೀಂ ಇಂಡಿಯಾ ಪವರ್‌ಪ್ಲೇನಲ್ಲಿ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡ ಬಳಿಕ ಅಯ್ಯರ್ ಪವರ್‌ಪ್ಲೇನಲ್ಲಿ ಬ್ಯಾಟಿಂಗ್ ಮಾಡಬೇಕಾಯಿತು (PC-PTI).

5 / 5
ಆದರೆ ಅಯ್ಯರ್​ಗೂ ಕೂಡ ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಾಗಲಿಲ್ಲ, ಆರನೇ ಓವರ್‌ನಲ್ಲಿ ಔಟಾದರು. ನಾಯಕ ಶ್ರೇಯಸ್ ಅಯ್ಯರ್ ಮಾತ್ರವಲ್ಲ, ಉಪನಾಯಕ ತಿಲಕ್ ಕೂಡ ಈ ಪಂದ್ಯದಲ್ಲಿ ರನ್ ಗಳಿಸಲು ವಿಫಲರಾದರು. ತಿಲಕ್ ಈ ಪಂದ್ಯದಲ್ಲಿ 21 ಎಸೆತಗಳನ್ನು ಎದುರಿಸಿ ಕೇವಲ 19 ರನ್‌ಗಳಿಸಿ ಔಟಾದರು. ಇವರಿಬ್ಬರ ವಿಕೆಟ್ ಪತನದಿಂದಾಗಿ ತಂಡವು ಸಂಕಷ್ಟದಲ್ಲಿ ಸಿಲುಕಿತು. ಅಂತಿಮವಾಗಿ ತಂಡಕ್ಕೆ ಸೋಲಿನ ಶಾಕ್ ಎದುರಾಯಿತು (PC-PTI).

Follow Us