ಟೀಮ್ ಇಂಡಿಯಾ ಆರ್ಭಟಕ್ಕೆ ಪಾಕಿಸ್ತಾನ್ ತಂಡದ ದಾಖಲೆ ಉಡೀಸ್

|

Updated on: Jan 23, 2025 | 10:02 AM

India - Pakistan: 2016 ರಿಂದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಟೀಮ್ ಇಂಡಿಯಾ ಟಿ20 ಪಂದ್ಯದಲ್ಲಿ ಸೋಲನುಭವಿಸಿಲ್ಲ. ಇದೀಗ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡವು 7 ವಿಕೆಟ್​​ಗಳ ಭರ್ಜರಿ ಜಯ ಸಾಧಿಸುವುದರೊಂದಿಗೆ ಪಾಕಿಸ್ತಾನ್ ತಂಡದ ಹೆಸರಿನಲ್ಲಿದ್ದ ದಾಖಲೆಯೊಂದು 2ನೇ ಸ್ಥಾನಕ್ಕೆ ಇಳಿದಿದೆ.

1 / 6
ಟಿ20 ಕ್ರಿಕೆಟ್​ ಇತಿಹಾಸದಲ್ಲಿ ಒಂದೇ ಸ್ಟೇಡಿಯಂನಲ್ಲಿ ಸತತ ಗೆಲುವು ದಾಖಲಿಸಿದ ವಿಶೇಷ ದಾಖಲೆಯೊಂದು ಪಾಕಿಸ್ತಾನ್ ತಂಡದ ಹೆಸರಿನಲ್ಲಿತ್ತು. ಈ ದಾಖಲೆಯನ್ನು ಇದೀಗ ಭಾರತ ತಂಡ ಸರಿಗಟ್ಟಿದೆ. ಈ ಸರಿಗಟ್ಟುವಿಕೆಯೊಂದಿಗೆ ಹೊಸ ಇತಿಹಾಸವನ್ನು ಸಹ ನಿರ್ಮಿಸಿದ್ದಾರೆ.

2 / 6
ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್​ಗಳ ಜಯಭೇರಿ ಬಾರಿಸಿದೆ. ಈ ಗೆಲುವಿನೊಂದಿಗೆ ಒಂದೇ ಮೈದಾನದಲ್ಲಿ ಸತತ 7 ಜಯ ಸಾಧಿಸಿದ ವಿಶೇಷ ದಾಖಲೆಯೊಂದನ್ನು ಟೀಮ್ ಇಂಡಿಯಾ ನಿರ್ಮಿಸಿದೆ.

3 / 6
ಇದಕ್ಕೂ ಮುನ್ನ ಇಂತಹದೊಂದು ವಿಶೇಷ ದಾಖಲೆ ಬರೆದಿದ್ದು ಪಾಕಿಸ್ತಾನ್ ತಂಡ. ಪಾಕ್ ಪಡೆ ಕರಾಚಿಯ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಂನಲ್ಲಿ ಸತತ 7 ಗೆಲುವು ಸಾಧಿಸಿ ಈ ದಾಖಲೆ ಬರೆದಿತ್ತು. ಆದರೀಗ ಈ ದಾಖಲೆಯನ್ನು ಮುರಿದು ಟೀಮ್ ಇಂಡಿಯಾದ ಹೊಸ ನಿರ್ಮಿಸಿರುವುದು ವಿಶೇಷ.

4 / 6
ಅತ್ತ ಕರಾಚಿಯಲ್ಲಿ ಪಾಕಿಸ್ತಾನ್ ತಂಡ 7 ಜಯ ಸಾಧಿಸಿದರೆ, ಇತ್ತ ಕೊಲ್ಕತ್ತಾದಲ್ಲಿ ಭಾರತ ತಂಡ 7 ಗೆಲುವು ದಾಖಲಿಸಿದೆ. ಆದರೆ ಪಾಕ್ ಪಡೆ ಸತತ 7 ಗೆಲುವು ದಾಖಲಿಸಿರುವುದು 2008 ರಿಂದ 2021 ರ ನಡುವೆ. ಅಂದರೆ 13 ವರ್ಷಗಳಲ್ಲಿ ಕರಾಚಿಯಲ್ಲಿ ಕೇವಲ 7 ಪಂದ್ಯವಾಡಿ ಈ ದಾಖಲೆ ನಿರ್ಮಿಸಿದೆ.

5 / 6
ಅದೇ ಟೀಮ್ ಇಂಡಿಯಾ ಕೇವಲ 8 ವರ್ಷಗಳ ಅವಧಿಯಲ್ಲಿ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ 7 ಪಂದ್ಯಗಳನ್ನಾಡಿದ್ದು, ಈ ಎಲ್ಲಾ ಮ್ಯಾಚ್​ಗಳಲ್ಲೂ ಗೆಲುವು ದಾಖಲಿಸಿದೆ. ಈ ಮೂಲಕ ಅಲ್ಪಾವಧಿಯಲ್ಲಿ ಒಂದೇ ಸ್ಟೇಡಿಯಂನಲ್ಲಿ ಅತ್ಯಧಿಕ ಪಂದ್ಯಗಳನ್ನಾಡಿ, ಸತತ ಗೆಲುವು ದಾಖಲೆ ಇದೀಗ ಭಾರತ ತಂಡದ ಪಾಲಾಗಿದೆ.

6 / 6
ಇನ್ನು ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಣ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಅಮೋಘ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 132 ರನ್​ ಕಲೆಹಾಕಿದರೆ, ಟೀಮ್ ಇಂಡಿಯಾ 12.5 ಓವರ್​​ಗಳಲ್ಲಿ ಈ ಗುರಿಯನ್ನು ಬೆನ್ನತ್ತಿ 7 ವಿಕೆಟ್​ಗಳ ಜಯ ಸಾಧಿಸಿತು.

Published On - 9:58 am, Thu, 23 January 25