Hardik Pandya: ಹಾರ್ದಿಕ್, ಚಹಲ್​ಗೆ ಶಾಕ್ ನೀಡಿದ ಬಿಸಿಸಿಐ: ಫಿಟ್ನೆಸ್ ರಿಪೋರ್ಟ್ ತರುವಂತೆ ಆದೇಶ

|

Updated on: Feb 23, 2023 | 7:42 AM

India vs Australia ODI Series: ಟೆಸ್ಟ್ ಸರಣಿ ಮುಗಿದ ಬಳಿಕ ಭಾರತ ಹಾಗೂ ಆಸ್ಟ್ರೇಲಿಯಾ ಮಧ್ಯೆ ಮೂರು ಪಂದ್ಯಗಳ ಏಕದನ ಸರಣಿ ನಡೆಯಲಿದೆ. ಇದೀಗ ಬಿಸಿಸಿಐ ಟೆಸ್ಟ್ ಸರಣಿಯಲ್ಲಿ ಇಲ್ಲದೆ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳುವ ಟೀಮ್ ಇಂಡಿಯಾ ಆಟಗಾರರಿಗೆ ಫಿಟ್ನೆಸ್ ರಿಪೋರ್ಟ್ ತರುವಂತೆ ಸೂಚನೆ ನೀಡಿದೆ.

1 / 7
ಭಾರತ ಕ್ರಿಕೆಟ್ ತಂಡ ಸದ್ಯ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬ್ಯುಸಿಯಾಗಿದೆ. ಈಗಾಗಲೇ ಬಾರ್ಡರ್- ಗವಾಸ್ಕರ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿರುವ ಟೀಮ್ ಇಂಡಿಯಾ ಮಾರ್ಚ್ 1 ರಿಂದ ಇಂದೋರ್​ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೂರನೇ ಟೆಸ್ಟ್ ಆಡಲಿದೆ. ಬಳಿಕ ಮಾರ್ಚ್ 9 ರಿಂದ ಅಂತಿಮ ನಾಲ್ಕನೇ ಟೆಸ್ಟ್  ಆರಂಭವಾಗಲಿದೆ.

2 / 7
ಟೆಸ್ಟ್ ಸರಣಿ ಮುಗಿದ ಬಳಿಕ ಭಾರತ ಹಾಗೂ ಆಸ್ಟ್ರೇಲಿಯಾ ಮಧ್ಯೆ ಮೂರು ಪಂದ್ಯಗಳ ಏಕದನ ಸರಣಿ ನಡೆಯಲಿದೆ. ಇದೀಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಟೆಸ್ಟ್ ಸರಣಿಯಲ್ಲಿ ಇಲ್ಲದೆ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳುವ ಟೀಮ್ ಇಂಡಿಯಾ ಆಟಗಾರರಿಗೆ ಫಿಟ್ನೆಸ್ ರಿಪೋರ್ಟ್ ತರುವಂತೆ ಸೂಚನೆ ನೀಡಿದೆ.

3 / 7
ಉಪ ನಾಯಕ ಹಾರ್ದಿಕ್ ಪಾಂಡ್ಯ, ಯುಜ್ವೇಂದ್ರ ಚಹಲ್, ಉಮ್ರಾನ್ ಮಲಿಕ್, ವಾಷಿಂಗ್ಟನ್ ಸುಂದರ್ ಸೇರಿದಂತೆ ಕೆಲ ಅಟಗಾರರು ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಗೆ (NCA) ಭೇಟಿ ನೀಡಿ ಫಿಟ್ನೆಸ್ ಟೆಸ್ಟ್ ನಡೆಸಬೇಕಿದೆ. ಚಹಲ್ ಹಾಗೂ ಮಲಿಕ್ ಈಗಾಗಲೇ ಎನ್​ಸಿಎಗೆ ತಲುಪಿ ನೆಟ್​ನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಹಾರ್ದಿಕ್ ಇನ್ನಷ್ಟೆ ಬರಬೇಕಿದೆ.

4 / 7
ಮೂರು ಪಂದ್ಯಗಳ ಏಕದಿನ ಸರಣಿ ಪೈಕಿ ಮಾರ್ಚ್ 17 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮೊದಲ ಪಂದ್ಯ ಆಯೋಜಿಸಲಾಗಿದೆ. ಬಳಿಕ ಮಾರ್ಚ್ 19 ರಂದು ವಿಶಾಖಪಟ್ಟಣಂನ ಡಾ. ವೈಎಸ್. ರಾಜಶೇಖರ ರೆಡ್ಡಿ ಸ್ಟೇಡಿಯಂನಲ್ಲಿ ದ್ವಿತೀಯ ಏಕದಿನ, ಮಾರ್ಚ್ 22 ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಅಂತಿಮ ತೃತೀಯ ಏಕದಿನ ಪಂದ್ಯ ನಡೆಯಲಿದೆ.

5 / 7
ಏಕದಿನ ಸರಣಿ ಮೊದಲ ಪಂದ್ಯದಿಂದ ರೋಹಿತ್ ಶರ್ಮಾ ಹೊರಗುಳಿದಿದ್ದಾರೆ. ವೈಯಕ್ತಿಕ ಕಾರಣಗಳಿಂದಾಗಿ ರೋಹಿತ್ ಮೊದಲ ಪಂದ್ಯದಲ್ಲಿ ಆಡುತ್ತಿಲ್ಲ, ಇವರ ಬದಲು  ಹಾರ್ದಿಕ್ ಪಾಂಡ್ಯ ಮೊದಲ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.

6 / 7
ಅಂತೆಯೆ ಕೆಲ ಸಮಯದ ಬಳಿಕ ರವೀಂದ್ರ ಜಡೇಜಾ ಕೂಡ ಏಕದಿನ ತಂಡಕ್ಕೆ ಮರಳಿದ್ದಾರೆ. ಇಂಜುರಿಯಿಂದ ಬಳಲಿ ಟೆಸ್ಟ್ ಸರಣಿ ಮೂಲಕ ಭರ್ಜರಿ ಕಮ್​ಬ್ಯಾಕ್ ಮಾಡಿರುವ ಜಡ್ಡು ಬ್ಯಾಟಿಂಗ್ - ಬೌಲಿಂಗ್​ನಲ್ಲಿ ಮಿಂಚುತ್ತಿದ್ದಾರೆ. ಇವರಿಗೆ ಆಸೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಅವಕಾಶ ನೀಡಲಾಗಿದೆ. ಜೊತೆಗೆ ಜಯದೇವ್ ಉನಾದ್ಕಟ್ ಕೂಡ ತಂಡದಲ್ಲಿದ್ದಾರೆ.

7 / 7
ಏಕದಿನ ಸರಣಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಯದೇವ್ ಉನದ್ಕಟ್, ಉಮ್ರಾನ್ ಮಲಿಕ್.

Published On - 7:42 am, Thu, 23 February 23