IND vs ENG 1st Test, Day 3: ಶತಕದ ಮೇಲೆ ಜಡೇಜಾ ಕಣ್ಣು, ಬೃಹತ್ ಮುನ್ನಡೆಯತ್ತ ಭಾರತ: ರೋಚಕತೆ ಸೃಷ್ಟಿಸಿದ ಇಂದಿನ 3ನೇ ದಿನದಾಟ
India vs England 3rd Test: ಇಂಗ್ಲೆಂಡ್ ತಂಡವನ್ನು 246 ರನ್ಗಳಿಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಆಡುತ್ತಿರುವ ರೋಹಿತ್ ಪಡೆ ಎರಡನೇ ದಿನದಾಟದಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 421 ರನ್ ಕಲೆಹಾಕಿದೆ. ಈ ಮೂಲಕ ಭಾರತ ಮೊದಲ ಇನ್ನಿಂಗ್ಸ್ನಲ್ಲಿ 175 ರನ್ಗಳ ಮುನ್ನಡೆ ಕಾಯ್ದುಕೊಂಡಿದೆ.
1 / 6
ಹೈದರಾಬಾದ್ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಭರ್ಜರಿ ಪ್ರದರ್ಶನ ತೋರುತ್ತಿದೆ. ಎರಡನೇ ದಿನದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಬ್ಯಾಟರ್ಗಳು ಆಂಗ್ಲ ಬೌಲರ್ಗಳ ಬೆವರಿಳಿಸಿದರು.
2 / 6
ಇಂಗ್ಲೆಂಡ್ ತಂಡವನ್ನು 246 ರನ್ಗಳಿಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಆಡುತ್ತಿರುವ ರೋಹಿತ್ ಪಡೆ ಎರಡನೇ ದಿನದಾಟದಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 421 ರನ್ ಕಲೆಹಾಕಿದೆ. ಈ ಮೂಲಕ ಭಾರತ ಮೊದಲ ಇನ್ನಿಂಗ್ಸ್ನಲ್ಲಿ 175 ರನ್ಗಳ ಮುನ್ನಡೆ ಕಾಯ್ದುಕೊಂಡಿದೆ. 81 ರನ್ ಗಳಿಸಿ ರವೀಂದ್ರ ಜಡೇಜಾ ಕ್ರೀಸ್ನಲ್ಲಿದ್ದು, ಇಂದು ಶತಕವನ್ನು ಎದುರು ನೋಡುತ್ತಿದ್ದಾರೆ.
3 / 6
ಮೊದಲ ದಿನದಾಟದ ಅಂತ್ಯಕ್ಕೆ ಭಾರತ 1 ವಿಕೆಟ್ ನಷ್ಟಕ್ಕೆ 119 ರನ್ ಗಳಿಸಿತ್ತು. 127 ರನ್ಗಳ ಹಿನ್ನಡೆಯಲ್ಲಿತ್ತು. ಎರಡನೇ ದಿನ 76 ರನ್ ಗಳಿಸಿದ್ದ ಯಶಸ್ವಿ ಜೈಸ್ವಾಲ್ ಮತ್ತು 14 ರನ್ ಗಳಿಸಿದ್ದ ಶುಭ್ಮನ್ ಗಿಲ್ ಬ್ಯಾಟಿಂಗ್ಗೆ ಬಂದರು. ಆದರೆ, ಇವರಿಬ್ಬರು ಹೆಚ್ಚುಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ.
4 / 6
ಜೈಸ್ವಾಲ್ 74 ಎಸೆತಗಳಲ್ಲಿ 80 ರನ್ ಗಳಿಸಿ ಜೋರೂಟ್ಗೆ ಬೌಲಿಂಗ್ನಲ್ಲಿ ಔಟಾದರೆ, ಗಿಲ್ 66 ಎಸೆತಗಳಲ್ಲಿ 23 ರನ್ಗೆ ಬ್ಯಾಟ್ ಕೆಳಗಿಟ್ಟರು. ಆ ಬಳಿಕ ಬಂದ ಕೆಎಲ್ ರಾಹುಲ್ ಐದನೇ ಕ್ರಮಾಂಕದಲ್ಲಿ ಬಂದ ಶ್ರೇಯಸ್ ಅಯ್ಯರ್ ಜೊತೆ ಇನ್ನಿಂಗ್ಸ್ ಕಟ್ಟಲು ಯತ್ನಿಸಿದರು. ಈ ಜೋಡಿ ಅರ್ಧಶತಕದ ಜೊತೆಯಾಟ ಆಡಿತು.
5 / 6
ನಂತರ ರಾಹುಲ್ಗೆ ಜೊತೆಯಾದ ಜಡೇಜಾ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಈ ವೇಳೆ ರಾಹುಲ್ 86 ರನ್ಗಳ ಇನ್ನಿಂಗ್ಸ್ ಆಡಿ ಶತಕ ವಂಚಿರಾದರೆ, ವಿಕೆಟ್ ಕೀಪರ್ ಬ್ಯಾಟರ್ ಕೆಎಸ್ ಭರತ್ 41 ರನ್ಗಳಿಗೆ ಪೆವಿಲಿಯನ್ ಸೇರಿಕೊಂಡರು. ಅಶ್ವಿನ್ ಕೂಡ 1 ರನ್ಗಳಿಗೆ ರನೌಟ್ಗೆ ಬಲಿಯಾಗಬೇಕಾಯ್ತು. ಆದರೆ ಒಂದು ತುದಿಯಲ್ಲಿ ಭದ್ರವಾಗಿ ಬೇರೂರಿದ ರವೀಂದ್ರ ಜಡೇಜಾ ತಮ್ಮ ಅರ್ಧಶತಕ ಪೂರ್ಣಗೊಳಿಸಿದರು.
6 / 6
ಅಶ್ವಿನ್ ವಿಕೆಟ್ ಬಳಿಕ ಬಂದ ಅಕ್ಷರ್ ಪಟೇಲ್ ದಿನದಾಟದಂತ್ಯವರೆಗೆ ಅಜೇಯರಾಗಿ ಉಳಿದು 35 ರನ್ ಸಿಡಿಸಿದರೆ, ರವೀಂದ್ರ ಜಡೇಜಾ ಕೂಡ 81 ರನ್ ಕಲೆಹಾಕಿ ಇಂದಿಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇಂಗ್ಲೆಂಡ್ ಪರ ಟಾಮ್ ಹಾರ್ಟ್ಲಿ ಹಾಗೂ ಜೋ ರೂಟ್ ತಲಾ 2 ವಿಕೆಟ್ ಪಡೆದರೆ, ಜ್ಯಾಕ್ ಲೀಚ್ ಹಾಗೂ ರೆಹಾನ್ ಅಹ್ಮದ್ ತಲಾ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.