IND vs PAK, ICC World Cup: ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು ಯಾಕೆ ಗೊತ್ತೇ?: ರೋಹಿತ್ ಮಾಸ್ಟರ್ ಪ್ಲಾನ್

|

Updated on: Oct 14, 2023 | 6:06 PM

Rohit Sharma first Indian skipper to opt to bowl vs Pakistan: ಐಸಿಸಿ ಏಕದಿನ ವಿಶ್ವಕಪ್​ನ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ಕೆ ಮಾಡಿಕೊಂಡರು. ವಿಶೇಷ ಎಂದರೆ, ವಿಶ್ವಕಪ್ ಇತಿಹಾಸದಲ್ಲೇ ಇದೇ ಮೊದಲ ಬಾರಿ ಪಾಕ್ ವಿರುದ್ಧ ಭಾರತ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಡಿರುವುದು. ಇದಕ್ಕೆ ಕಾರಣ ಕೂಡ ಇದೆ.

1 / 7
ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್​ನ ಭಾರತ ಹಾಗೂ ಪಾಕಿಸ್ತಾನ (India vs Pakistan) ನಡುವಣ ಪಂದ್ಯ ರೋಚಕತೆ ಸೃಷ್ಟಿಸಿದೆ. ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಪಾಕಿಸ್ತಾನ ತಂಡ ಟೀಮ್ ಇಂಡಿಯಾ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 191 ರನ್​ಗೆ ಆಲೌಟ್ ಆಯಿತು.

2 / 7
ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ಕೆ ಮಾಡಿಕೊಂಡರು. ವಿಶೇಷ ಎಂದರೆ, ವಿಶ್ವಕಪ್ ಇತಿಹಾಸದಲ್ಲೇ ಇದೇ ಮೊದಲ ಬಾರಿ ಪಾಕ್ ವಿರುದ್ಧ ಭಾರತ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿರುವುದು. ಇದಕ್ಕೆ ಕಾರಣ ಕೂಡ ಇದೆ.

3 / 7
ವಿಶ್ವಕಪ್‌ನಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ಇದುವರೆಗೆ ಆಡಿದ ಎಲ್ಲಾ ಏಳು ಪಂದ್ಯಗಳನ್ನು ಗೆದ್ದು ಪರಿಪೂರ್ಣ ದಾಖಲೆಯನ್ನು ಹೊಂದಿದೆ. ವಿಶ್ವಕಪ್‌ನಲ್ಲಿ ಶನಿವಾರ ಪಾಕಿಸ್ತಾನದ ವಿರುದ್ಧ ಟಾಸ್ ಗೆದ್ದ ನಂತರ ಮೊದಲು ಬೌಲಿಂಗ್ ಆಯ್ಕೆ ಮಾಡಿದ ಮೊದಲ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ರೋಹಿತ್ ಶರ್ಮಾ ಪಾತ್ರರಾದರು.

4 / 7
ಟಾಸ್‌ಗೆ ಬಂದರೆ, ಪಾಕಿಸ್ತಾನ ವಿರುದ್ಧ ಭಾರತ 5-2 ಮುನ್ನಡೆ ಸಾಧಿಸಿದೆ. ಎರಡು ತಂಡಗಳ ನಡುವಿನ ಮೊದಲ ಪಂದ್ಯವು 1992 ರಲ್ಲಿ ನಡೆಯಿತು. ಅಲ್ಲಿ ಭಾರತವು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಇದೇರೀತಿ ಮುಂದಿನ ಎರಡು ಆವೃತ್ತಿಗಳಲ್ಲೂ ಮುಂದುವರೆಯಿತು.

5 / 7
ಭಾರತ ಟಾಸ್ ಗೆಲ್ಲುವ ಅದೃಷ್ಟ ಹೊಂದಿತ್ತು. ಹಾಗೆ ಎದುರಾಳಿ ಪಾಕಿಸ್ತಾವನ್ನು ಕಟ್ಟುಹಾಕುವ ತಂತ್ರಕೂಡ ಮಾಡಿಕೊಂಡಿತ್ತು. 2003ರಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ ಭಾರತಕ್ಕೆ ಚೇಸಿಂಗ್ ನೀಡಿತ್ತು. ಬಳಿಕ 2011 ರಲ್ಲಿ, ಭಾರತವು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು ಮತ್ತು 2015 ರಲ್ಲಿ ಆಸ್ಟ್ರೇಲಿಯಾದಲ್ಲಿ ವಿಶ್ವಕಪ್ ನಡೆದಾಗಲೂ ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿತ್ತು.

6 / 7
2019 ರಲ್ಲಿ ಪಾಕಿಸ್ತಾನ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಇದೀಗ ರೋಹಿತ್ ಈ ಬಾರಿ ಟಾಸ್ ಗೆದ್ದ ನಂತರ ಬೌಲಿಂಗ್ ಆಯ್ಕೆ ಮಾಡಲು ನಿರ್ಧರಿಸಿದರು. ಟಾಸ್ ಗೆದ್ದ ನಂತರ ಭಾರತೀಯ ನಾಯಕ ರೋಹಿತ್ ಇದಕ್ಕೆ ಕಾರಣ ಕೂಡ ತಿಳಿಸಿದ್ದಾರೆ. ಇಲ್ಲಿನ ಟ್ರ್ಯಾಕ್ ಬದಲಾಗುವ ಸಂಭವವಿಲ್ಲ ಎಂದು ಹೇಳಿದ್ದಾರೆ.

7 / 7
"ಇದು ಉತ್ತಮ ಟ್ರ್ಯಾಕ್, ಹೆಚ್ಚು ಬದಲಾಗುವುದಿಲ್ಲ, ಇಬ್ಬನಿ ದೊಡ್ಡಮಟ್ಟದಲ್ಲಿ ತೊಂದರೆ ಕೊಡುವ ಸಾಧ್ಯತೆ ಇದೆ. ಹೀಗಾಗಿ ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ನಾವು ಮೊದಲು ಬೌಲಿಂಗ್ ಮಾಡಲು ಬಯಸುತ್ತೇವೆ" ಎಂದು ರೋಹಿತ್ ಟಾಸ್ ಗೆದ್ದ ನಂತರ ಹೇಳಿದರು. ಅತ್ತ ಬಾಬರ್ ಅಝಂ ಕೂಡ ಟಾಸ್ ಗೆದ್ದರೆ ಮೊದಲು ಬೌಲಿಂಗ್ ಮಾಡಲು ಬಯಸಿದ್ದರು ಎಂದು ಹೇಳಿದ್ದಾರೆ.

Published On - 6:04 pm, Sat, 14 October 23