IND vs WI 1st ODI Weather: ವೆಸ್ಟ್ ಇಂಡೀಸ್ನಲ್ಲಿ ಮಾನ್ಸೂನ್ ಆರಂಭ: ಭಾರತ-ವಿಂಡೀಸ್ ಮೊದಲ ಏಕದಿನಕ್ಕೆ ಮಳೆ ಅಡ್ಡಿ?
India vs West Indies 1st ODI: ಭಾರತ- ವೆಸ್ಟ್ ಇಂಡೀಸ್ ಮೊದಲ ಏಕದಿನ ಪಂದ್ಯಕ್ಕೆ ಮಳೆಯ ಕಾಟ ಇದೆಯೇ ಎಂಬ ಅನುಮಾನ ಮೂಡಿದೆ. ಯಾಕೆಂದರೆ ವೆಸ್ಟ್ ಇಂಡೀಸ್ನಲ್ಲಿ ಮಾನ್ಸೂನ್ ಆರಂಭವಾಗಿದೆ.
1 / 7
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಏಕದಿನ ಸರಣಿ ಇಂದಿನಿಂದ ಆರಂಭವಾಗಲಿದೆ. ಬಾರ್ಬಡಸ್ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ಇಂದು ಮೊದಲ ಏಕದಿನ ಪಂದ್ಯ ನಡೆಯಲಿದೆ. ಉಭಯ ತಂಡಗಳಿಗೆ ಈ ಏಕದಿನ ಸರಣಿ ಮುಖ್ಯ ಆಗಿರುವಾಗ ಮೊದಲ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ.
2 / 7
ಆದರೆ, ಭಾರತ- ವೆಸ್ಟ್ ಇಂಡೀಸ್ ಮೊದಲ ಏಕದಿನ ಪಂದ್ಯಕ್ಕೆ ಮಳೆಯ ಕಾಟ ಇದೆಯೇ ಎಂಬ ಅನುಮಾನ ಮೂಡಿದೆ. ಯಾಕೆಂದರೆ ವೆಸ್ಟ್ ಇಂಡೀಸ್ನಲ್ಲಿ ಮಾನ್ಸೂನ್ ಆರಂಭವಾಗಿದೆ. ಇಂಡೋ- ವಿಂಡೀಸ್ ದ್ವಿತೀಯ ಟೆಸ್ಟ್ನ ಅಂತಿಮ ದಿನ ಕೂಡ ಮಳೆಗೆ ಕೊಚ್ಚಿ ಹೋದ ಕಾರಣ ಪಂದ್ಯ ಡ್ರಾ ಆಗಿತ್ತು.
3 / 7
ಇದೀಗ ಮೊದಲ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸುವ ಸಾಧ್ಯತೆ ಇದೆ. AccuWeather ಒದಗಿಸಿದ ಹವಾಮಾನ ಮುನ್ಸೂಚನೆಯ ಪ್ರಕಾರ, ಗುರುವಾರದಂದು ಬ್ರಿಡ್ಜ್ಟೌನ್ನಲ್ಲಿ ಶೇ.7 ರಷ್ಟು ಮಳೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
4 / 7
ಗರಿಷ್ಠ 32 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 26 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ ಎಂದು ವರದಿಯಾಗಿದೆ. ಹಾಗೆಯೇ ಮೋಡ ಕವಿದ ವಾತಾವರಣವಿರಲಿದೆಯಂತೆ.
5 / 7
ಇನ್ನು ಕೆನ್ಸಿಂಗ್ಟನ್ ಓವಲ್ನ ಮೇಲ್ಮೈ ಬೌಲಿಂಗ್ ಸ್ನೇಹಿಯಾಗಿದೆ. ಇದು ನಿಧಾನವಾದ ಪಿಚ್ ಆಗಿದ್ದು ವೇಗಿಗಳಿಗಿಂತ ಸ್ಪಿನ್ನರ್‌ಗಳಿಗೆ ಹೆಚ್ಚು ಸಹಾಯ ಮಾಡುತ್ತದೆ. ಮೊದಲ ಇನಿಂಗ್ಸ್‌ನ ಸರಾಸರಿ ಸ್ಕೋರ್ 229. ಆದರೆ, ಇಲ್ಲಿ ನಡೆದ ಕೊನೆಯ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ 302 ರನ್‌ಗಳ ಗುರಿಯನ್ನು ಇನ್ನೂ 17 ಎಸೆತಗಳು ಮತ್ತು 5 ವಿಕೆಟ್‌ಗಳು ಬಾಕಿ ಇರುವಂತೆಯೇ ಬೆನ್ನಟ್ಟಿತ್ತು.
6 / 7
ಟೀಮ್ ಇಂಡಿಯಾ ಈ ಮೈದಾನದಲ್ಲಿ ಒಟ್ಟು ಮೂರು ಪಂದ್ಯಗಳನ್ನು ಆಡಿದೆ. ಅದರಲ್ಲಿ 1-2 ಸೋಲಿನ ದಾಖಲೆಯನ್ನು ಹೊಂದಿದ್ದಾರೆ. ಆದರೆ, ಈ ಪಂದ್ಯ ನಡೆದಿದ್ದು ಎರಡು ದಶಕಗಳ ಹಿಂದೆ, ಅಂದರೆ 2002 ರಲ್ಲಿ ಕೊನೆಯ ಬಾರಿಗೆ ಇಲ್ಲಿ ಏಕದಿನ ಪಂದ್ಯ ಆಡಿದ್ದರು.
7 / 7
ಒಟ್ಟು 49 ಪಂದ್ಯಗಳು ಕೆನ್ಸಿಂಗ್ಟನ್ ಓವಲ್ನಲ್ಲಿ ನಡೆದಿವೆ. ಇದರಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ 22 ಪಂದ್ಯಗಳನ್ನು ಗೆದ್ದಿದ್ದರೆ, ಚೇಸಿಂಗ್ ತಂಡ 25 ಗೆದ್ದಿದೆ. ಆದರೆ, ಇಲ್ಲಿ ಆಡಿದ ಕಳೆದ 10 ಪಂದ್ಯಗಳ ಪೈಕಿ 7 ಪಂದ್ಯ ಚೇಸಿಂಗ್ ಮೂಲಕ ಗೆದ್ದಿದೆ.