IPL 2023: ಡೆಲ್ಲಿ ತಂಡಕ್ಕೆ ಹೊಸ ನಾಯಕ, ಅಕ್ಷರ್​ಗೆ ಉಪನಾಯಕತ್ವ; ಅಧಿಕೃತ ಹೇಳಿಕೆ ನೀಡಿದ ಫ್ರಾಂಚೈಸ್

|

Updated on: Mar 16, 2023 | 12:16 PM

IPL 2023: ವಾಸ್ತವವಾಗಿ ಕಳೆದ ಡಿಸೆಂಬರ್​ 30 ರಂದು ರಸ್ತೆ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆಯಲ್ಲಿರುವ ಡೆಲ್ಲಿ ತಂಡದ ನಾಯಕ ಪಂತ್ ಇಡೀ ಟೂರ್ನಿಯಿಂದ ಹೊರಗುಳಿಯಲಿದ್ದಾರೆ. ಹಾಗಾಗಿ ಪಂತ್ ಅನುಪಸ್ಥಿತಿಯಲ್ಲಿ ವಾರ್ನರ್ ತಂಡವನ್ನು ಮುನ್ನಡೆಸಲಿದ್ದಾರೆ.

1 / 6
ಡೇವಿಡ್ ವಾರ್ನರ್‌ಗೆ ಐಪಿಎಲ್ 2023 ರ ದೊಡ್ಡ ಜವಾಬ್ದಾರಿಯನ್ನು ವಹಿಸಲಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸ್ ವಾರ್ನರ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕನನ್ನಾಗಿ ಮಾಡಿದೆ. ಕಳೆದ ವರ್ಷವಷ್ಟೇ ತಂಡವನ್ನು ಸೇರಿಕೊಂಡಿದ್ದ ವಾರ್ನರ್​ಗೆ ಡೆಲ್ಲಿ ತಂಡದ ನಾಯಕತ್ವ ಸಿಗುವುದು ಈ ಹಿಂದೆಯೇ ಖಚಿತವಾಗಿತ್ತು. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿರಲಿಲ್ಲ.

2 / 6
ಆದರೀಗ ಅಧಿಕೃತ ಹೇಳಿಕೆ ನೀಡಿರುವ ಡೆಲ್ಲಿ ಫ್ರಾಂಚೈಸ್, ರಿಷಭ್ ಪಂತ್ ಗಾಯಗೊಂಡಿರುವ ಕಾರಣ ವಾರ್ನರ್​ಗೆ ತಂಡದ ನಾಯಕತ್ವ ನೀಡಿರುವುದಾಗಿ ಹೇಳಿಕೊಂಡಿದೆ. ಹಾಗೆಯೇ ವಾರ್ನರ್ ಜೊತೆಗೆ ಅಕ್ಷರ್ ಪಟೇಲ್​ಗೆ ತಂಡದ ಉಪನಾಯಕತ್ವವಹಿಸಿಕೊಡಲಾಗಿದೆ.

3 / 6
ವಾಸ್ತವವಾಗಿ ಕಳೆದ ಡಿಸೆಂಬರ್​ 30 ರಂದು ರಸ್ತೆ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆಯಲ್ಲಿರುವ ಡೆಲ್ಲಿ ತಂಡದ ನಾಯಕ ಪಂತ್ ಇಡೀ ಟೂರ್ನಿಯಿಂದ ಹೊರಗುಳಿಯಲಿದ್ದಾರೆ. ಹಾಗಾಗಿ ಪಂತ್ ಅನುಪಸ್ಥಿತಿಯಲ್ಲಿ ವಾರ್ನರ್ ತಂಡವನ್ನು ಮುನ್ನಡೆಸಲಿದ್ದಾರೆ.

4 / 6
2021ರ ಐಪಿಎಲ್ ಬಳಿಕ ಸನ್‌ರೈಸರ್ಸ್ ಹೈದರಾಬಾದ್‌ ಫ್ರಾಂಚೈಸ್, ಡೇವಿಡ್ ವಾರ್ನರ್ ಅವರನ್ನು ತಂಡದಿಂದ ಬಿಡುಗಡೆ ಮಾಡಿತ್ತು. ವಾರ್ನರ್ ಈ ಹಿಂದೆ ಹೈದರಾಬಾದ್‌ ತಂಡದ ನಾಯಕರಾಗಿದ್ದರು. ವಾರ್ನರ್ ನಾಯಕತ್ವದಲ್ಲಿ ಸನ್‌ರೈಸರ್ಸ್ ತಂಡ 2016 ರಲ್ಲಿ ಚಾಂಪಿಯನ್ ಆಗಿತ್ತು.

5 / 6
ಕಳೆದ ಸೀಸನ್​ನಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದ್ದ ವಾರ್ನರ್, ಆಡಿದ 12 ಪಂದ್ಯಗಳಲ್ಲಿ 150 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿ 48 ರ ಸರಾಸರಿಯಲ್ಲಿ 432 ರನ್ ಬಾರಿಸಿದರು.

6 / 6
ಡೇವಿಡ್ ವಾರ್ನರ್ ಇದುವರೆಗೆ 162 ಐಪಿಎಲ್ ಪಂದ್ಯಗಳನ್ನಾಡಿದ್ದು ಇದರಲ್ಲಿ 42 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 5881 ರನ್ ಗಳಿಸಿದ್ದಾರೆ. ಇದರಲ್ಲಿ 4 ಶತಕಗಳು ಮತ್ತು 55 ಅರ್ಧ ಶತಕಗಳು ಸೇರಿವೆ.