ಮುಂಬೈನಲ್ಲಿ ಬರೋಬ್ಬರಿ 30 ಕೋಟಿಯ ಹೊಸ ಮನೆ ಖರೀದಿಸಿದ ಹಾರ್ದಿಕ್-ಕ್ರುನಾಲ್: ಹೇಗಿದೆ ಗೊತ್ತಾ?
TV9 Web | Updated By: Vinay Bhat
Updated on:
Aug 13, 2021 | 10:19 AM
Hardik Pandya new house: ಟೀಮ್ ಇಂಡಿಯಾದ ಪ್ರಮುಖ ಸ್ಟಾರ್ ಆಟಗಾರರಾದ ಹಾರ್ದಿಕ್ ಪಾಂಡ್ಯ ಹಾಗೂ ಕ್ರುನಾಲ್ ಪಾಂಡ್ಯ ಸಹೋದರರು ಮುಂಬೈನಲ್ಲಿ ಬರೋಬ್ಬರಿ 30 ಕೋಟಿ ರೂಪಾಯಿಗೆ ಹೊಸ ಮನೆಯನ್ನು ಖರೀದಿ ಮಾಡಿದ್ದಾರೆ.
1 / 7
ಕ್ರಿಕೆಟ್ ಅಂದ್ರೆನೇ ಒಂದುರೀತಿಯ ಮಾಯಾ ಜಗತ್ತು. ಕತ್ತಲು ಕಳೆದು ಬೆಳಗಾಗುವಷ್ಟರಲ್ಲಿ ಸ್ಟಾರ್ ಆಟಗಾರ ಎಂಬ ಪಟ್ಟ ಸಿಕ್ಕಿಬಿಡುತ್ತದೆ. ಒಂದು ಪಂದ್ಯದಲ್ಲಿ ಮಿಂಚಿದರೆ ಅವರ ಲಕ್ ಬದಲಾಗಿ ಬಿಡುತ್ತದೆ. ಸ್ಟಾರ್ ಆಟಗಾರರಂತು ಎಲ್ಲದರಲ್ಲೂ ದುಬಾರಿ. ಹಾಕೋ ಬಟ್ಟೆ, ತಿನ್ನುವ ಊಟ, ವಾಸಿಸೋಕೆ ಮನೆ ಎಲ್ಲವೂ ಕಾಸ್ಟ್ಲಿ.
2 / 7
ಕ್ರಿಕೆಟ್ ಲೋಕದಲ್ಲಿ ಸ್ಟಾರ್ ಆಗಿ ಗುರುತಿಸಿಕೊಂಡಿರುವವರು ಒಬ್ಬರಿಗಿಂತ ಮತ್ತೊಬ್ಬರು ದುಬಾರಿ ಜೀವನ ಸಾಗಿಸುವುದು ಸಾಮಾನ್ಯವಾಗಿದೆ. ಸ್ವಂತ ಮನೆಗಳು ಇದ್ದರೂ ಪ್ರತಿಷ್ಠಿತ ಅಪಾರ್ಟ್ಮೆಂಟ್ಗಳಲ್ಲಿ ಫ್ಲ್ಯಾಟ್ ಖರೀದಿ ಮಾಡುವ ಆಟಗಾರರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಇದೀಗ ಈ ಸಾಲಿಗೆ ಪಾಂಡ್ಯ ಬ್ರದರ್ಸ್ ಎಂದೇ ಖ್ಯಾತಿ ಪಡೆದಿರುವ ಹಾರ್ದಿಕ್ ಹಾಗೂ ಕ್ರುನಾಲ್ ಕೂಡ ಸೇರಿದ್ದಾರೆ.
3 / 7
ಹೌದು, ಟೀಮ್ ಇಂಡಿಯಾದ ಪ್ರಮುಖ ಸ್ಟಾರ್ ಆಟಗಾರರಾದ ಹಾರ್ದಿಕ್ ಪಾಂಡ್ಯ ಹಾಗೂ ಕ್ರುನಾಲ್ ಪಾಂಡ್ಯ ಸಹೋದರರು ಮುಂಬೈನಲ್ಲಿ ಬರೋಬ್ಬರಿ 30 ಕೋಟಿ ರೂಪಾಯಿಗೆ ಹೊಸ ಮನೆಯನ್ನು ಖರೀದಿ ಮಾಡಿದ್ದಾರೆ.
4 / 7
ಮುಂಬೈನ ಪ್ರತಿಷ್ಠಿತ ಪ್ರದೇಶಗಳಲ್ಲಿ ಒಂದಾದ ಬಾಂದ್ರಾ ಉಪನಗರದಲ್ಲಿ ಪಾಂಡ್ಯ ಸಹೋದರರು ಮನೆ ಖರೀದಿಸಿದ್ದಾರೆ. ಈ ಮನೆಯಲ್ಲಿ ಹೈಟೆಕ್ ಸೌಕರ್ಯವಿದೆ. ವಿಶೇಷ ಎಂದರೆ ಬಾಲಿವುಡ್ನ ಸ್ಟಾರ್ಗಳಾದ ಟೈಗರ್ ಶ್ರಾಫ್ ಹಾಗೂ ದಿಶಾ ಪಟಾನಿ ಕೂಡ ಇವರ ನೆರೆಮನೆಯವರಾಗಿದ್ದಾರೆ.
5 / 7
ಮುಂಬೈ ನಗರ ಹಾಗೂ ಅರೆಬಿಯನ್ ಸಮುದ್ರದ ವಿಹಂಗಮ ನೋಟವನ್ನು ಈ ಪಾಂಡ್ಯ ಬ್ರದರ್ಸ್ ಮನೆಯಿಂದ ನೋಡಬಹುದು. ಮನೆಯ ಆವರಣದಲ್ಲಿ ಸಾಹಸಿಕ ಕ್ರೀಡೆಯಾದ ರಾಕ್ ಕ್ಲೈಬಿಂಗ್, ಡೆಕ್ ಖಾಸಗಿ ಚಿತ್ರಮಂದಿರ, ಸ್ಕೈ ಲಾಂಜ್, ಈಜುಕೊಳ ಒಳಗೊಂಡಿದೆ. ಜತೆಗೆ ಗೇಮ್ ರೂಮ್, ಜಿಮ್, ಪೊಡೀಯಂ ಹಾಗೂ ಸ್ಪಾ ಒಳಗೊಂಡಿದೆ.
6 / 7
ಹಾರ್ದಿಕ್ ಪಾಂಡ್ಯ ಮತ್ತು ಕ್ರುನಾಲ್ ಪಾಂಡ್ಯ ಇತ್ತೀಚೆಗಷ್ಟೆ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಶಿಖರ್ ಧವನ್ ಸಾರಥ್ಯದ ಭಾರತ ನಿಗದಿತ ಓವರ್ಗಳ ತಂಡದ ಸದಸ್ಯರಾಗಿದ್ದರು. ಆದರೆ, ಇಲ್ಲಿ ಕ್ರುನಾಲ್ ಪಾಂಡ್ಯಗೆ ಕೋವಿಡ್-19 ಕಾಣಿಸಿಕೊಂತ್ತು.
7 / 7
ಸದ್ಯ ಗುಣಮುಖರಾಗಿ ಭಾರತಕ್ಕೆ ಹಿಂತಿರುಗಿದ ಬೆನ್ನಲ್ಲೆ ದೊಡ್ಡ ಮೊತ್ತದ ಹೊಸ ಮನೆ ಖರೀದಿಸಿ ಸುದ್ದಿಯಲ್ಲಿದ್ದಾರೆ. ಇವರಿಬ್ಬರು ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡುತ್ತಿದ್ದಾರೆ.
Published On - 10:14 am, Fri, 13 August 21