
ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿ ಎರಡನೇ ಚರಣ ಆರಂಭಕ್ಕೆ ಕೆಲವು ದಿನಗಳಿರುವಾಗಲೇ ಪ್ರಮುಖ ಬೆಳವಣಿಗೆಗಳು ನಡೆಯುತ್ತಿವೆ. ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಕೆಲ ಆಟಗಾರರು ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಈ ಪೈಕಿ ಆರ್ಸಿಬಿ ವೇಗಿ ಕೇನ್ ರಿಚರ್ಡ್ಸನ್ ಕೂಡ ಒಬ್ಬರು.

* ಕೇನ್ ರಿಚರ್ಡ್ಸನ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು)

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14ನೇ ಆವೃತ್ತಿಗೆ ಎಲ್ಲ ತಂಡಗಳು ಭರ್ಜರಿ ಸಿದ್ಧತೆ ನಡೆಸುತ್ತಿವೆ. ಇದರ ಸಲುವಾಗಿ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಿಲಿಕಾನ್ ಸಿಟಿಗೆ ಬಂದಿಳಿದಿದೆ. ಆಗಸ್ಟ್ 29 ರಂದು ದುಬೈ ಪ್ಲೈಟ್ ಏರಲಿದ್ದಾರೆ.

ಎವಿನ್ ಲೆವಿಸ್: ಐಪಿಎಲ್ 2021ರ ಹರಾಜಿನಲ್ಲಿ ಸೇಲ್ ಆಗದೆ ಉಳಿದ ಸ್ಫೋಟಕ ಓಪನಿಂಗ್ ಬ್ಯಾಟ್ಸ್ಮನ್ ಎವಿನ್ ಲೆವಿಸ್ ಅವರನ್ನು ಆರ್ಸಿಬಿ ಖರೀದಿಸುವ ಸಾಧ್ಯತೆ ಇದೆ. ಸದ್ಯ ಆರ್ಸಿಬಿಯಲ್ಲಿ ಪಡಿಕ್ಕಲ್ ಜೊತೆ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದಾರೆ. ಲೆವಿಸ್ ತಂಡ ಸೇರಿಕೊಂಡರೆ ಕೊಹ್ಲಿ ತಮ್ಮ ನೆಚ್ಚಿನ 3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಬಹುದು.

ಡೇವಿಡ್ ವಿಲ್ಲೆ: ದಿ ಹಂಡ್ರೆಡ್ ಟೂರ್ನಮೆಂಟ್ನಲ್ಲಿ ಅಬ್ಬರಿಸುತ್ತಿರುವ ಆಲ್ರೌಂಡರ್ ಡೇವಿಡ್ ವಿಲ್ಲೆ ಇತ್ತೀಚೆಗಷ್ಟೆ 40 ಎಸೆತಗಳಲ್ಲಿ 81 ರನ್ ಚಚ್ಚಿದ್ದರು. ಆರ್ಸಿಬಿಯ ಬೆಸ್ಟ್ ಆಲ್ರೌಂಡರ್ ಜಾಗ ತುಂಬಲು ಇವರು ಸೂಕ್ತ ಆಟಗಾರು.

ಜೇಮ್ಸ್ ವಿನ್ಸ್: ಜೇಮ್ಸ್ ವಿನ್ಸ್ ಒಬ್ಬ ಸ್ಫೋಟಕ ಬ್ಯಾಟ್ಸ್ಮನ್ ಎಂಬುದು ಅನೇಕ ಬಾರಿ ಸಾಭೀತು ಪಡಿಸಿದ್ದಾರೆ. ಆದರೆ ಇವರು ಐಪಿಎಲ್ನಲ್ಲಿ ಸೋಲ್ಡ್ ಆಗದೆ ಇರುವುದು ಅಚ್ಚರಿ. ಆರ್ಸಿಬಿ ಇವರನ್ನು ಆಯ್ಕೆ ಮಾಡಿದರೆ ತಂಡದ ಬ್ಯಾಟಿಂಗ್ ಶಕ್ತಿ ಮತ್ತಷ್ಟು ಹೆಚ್ಚಲಿದೆ. ಅಲ್ಲದೆ ಇವರು ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಲ್ಲರು.

ಐಪಿಎಲ್ ಸೀಸನ್ 15 ರಲ್ಲಿ ಒಟ್ಟು 10 ತಂಡಗಳು ಕಾಣಿಸಿಕೊಳ್ಳಲಿದೆ. ಪ್ರಸ್ತುತ ಇರುವ 8 ಫ್ರಾಂಚೈಸಿಗಳ ಜೊತೆ ಹೊಸದಾಗಿ ಲಕ್ನೋ ಹಾಗೂ ಅಹಮದಾಬಾದ್ ಫ್ರಾಂಚೈಸಿಗಳು ಸೇರ್ಪಡೆಯಾಗಿದೆ. ಈ ಎರಡು ತಂಡಗಳ ಹರಾಜಿನಿಂದ ಬಿಸಿಸಿಐ ನಿರೀಕ್ಷೆಗೂ ಮೀರಿದ ಆದಾಯಗಳಿಸಿದೆ.

ಇದಾಗ್ಯೂ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ತನ್ನ ನೂತನ ಅಧಿಕೃತ ಜೆರ್ಸಿಯನ್ನು ಬಿಡುಗಡೆ ಮಾಡಿಲ್ಲ. ಆದರೆ ಪ್ರಸ್ತುತ ಇರುವ ಜೆರ್ಸಿಯ ವಿನ್ಯಾಸದಲ್ಲೇ ಹೊಸ ಜೆರ್ಸಿ ಕೂಡ ಇರಲಿದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ. ಒಟ್ಟಿನಲ್ಲಿ ಮುಂದಿನ ಸೀಸನ್ ಐಪಿಎಲ್ಗಾಗಿ ಸಿಎಸ್ಕೆ ತಂಡವು ಸಿದ್ಧತೆಗಳನ್ನು ಆರಂಭಿಸಿದ್ದು, ಅದರಂತೆ ಮೊದಲ ಒಪ್ಪಂದವನ್ನು ಕೂಡ ಕುದಿರಿಸಿಕೊಂಡಿದೆ.

ಒಟ್ಟು ಮೂರು ತಾಣಗಳಲ್ಲಿ ಪಂದ್ಯಗಳು ನಡೆಯಲಿದೆ. ದುಬೈ, ಅಬುದಾಬಿ ಹಾಗೂ ಶಾರ್ಜಾ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯುತ್ತವೆ. ಈ ಪೈಕಿ 13 ಪಂದ್ಯಗಳು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಯೋಜನೆಯಾದರೆ ಶಾರ್ಜಾ ಕ್ರೀಡಾಂಗಣದಲ್ಲಿ 10 ಪಂದ್ಯಗಳು ನಡೆಯುತ್ತವೆ. 8 ಪಂದ್ಯಗಳಿಗೆ ಅಬುದಾಬಿ ಆತಿಥ್ಯ ವಹಿಸಲಿದೆ.