IPL 2022: ಮುಂಬೈ ಮುಂದೆ ಮಂಕಾದ ಚೆನ್ನೈ; ಐಪಿಎಲ್ ಇತಿಹಾಸದಲ್ಲಿ 2ನೇ ಬಾರಿಗೆ ಕೆಟ್ಟ ದಾಖಲೆ ಬರೆದ ಧೋನಿ ಬಳಗ
IPL 2022: ಐಪಿಎಲ್‌ನಲ್ಲಿ ಚೆನ್ನೈನ ಅತ್ಯಂತ ಕಡಿಮೆ ಸ್ಕೋರ್ 79 ಆಗಿದ್ದು, ಈ ಸ್ಕೋರ್ ಕೂಡ ಮುಂಬೈ ವಿರುದ್ಧವೇ ಬಂದಿದೆ. ಮುಂಬೈ 2013ರ ಮೇ 5ರಂದು ವಾಂಖೆಡೆ ಸ್ಟೇಡಿಯಂನಲ್ಲಿ ಚೆನ್ನೈ ತಂಡವನ್ನು 80 ರನ್‌ಗಳಿಂದ ಸೋಲಿಸಿತ್ತು.
1 / 5
ಚೆನ್ನೈ ಸೂಪರ್ ಕಿಂಗ್ಸ್ ನಾಲ್ಕು ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಶಸ್ತಿ ಗೆದ್ದಿದೆ. ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಈ ತಂಡವು ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡವೆಂದು ಪರಿಗಣಿಸಲ್ಪಟ್ಟಿದೆ. ಆದರೆ ಈ ತಂಡಕ್ಕೆ ಐಪಿಎಲ್ 2022 ಉತ್ತಮವಾಗಿಲ್ಲ. ಪ್ರಸಕ್ತ ಋತುವಿನಲ್ಲಿ ಪ್ಲೇಆಫ್ ರೇಸ್‌ನಲ್ಲಿ ಉಳಿಯಲು ಗೆಲ್ಲಲೇಬೇಕಾದ ಪಂದ್ಯದಲ್ಲಿ ಸೋಲನುಭವಿಸಿ ಪಂದ್ಯಾವಳಿಯಿಂದ ಹೊರಬಿದ್ದಿದೆ.
2 / 5
ಮುಂಬೈ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಜೊತೆಗೆ ಮೊದಲ ಎಸೆತದಲ್ಲೇ ಚೆನ್ನೈಗೆ ತೊಂದರೆ ನೀಡಿದರು. ಇದರೊಂದಿಗೆ ಚೆನ್ನೈಗೆ 100 ರನ್ ಗಳಿಸಲೂ ಸಹ ಮುಂಬೈ ಅವಕಾಶ ನೀಡಲಿಲ್ಲ. ಚೆನ್ನೈ ತಂಡ 16 ಓವರ್‌ಗಳಲ್ಲಿ ಕೇವಲ 97 ರನ್‌ಗಳಿಗೆ ಆಲೌಟಾಯಿತು. ಇದು ಐಪಿಎಲ್‌ನಲ್ಲಿ ಚೆನ್ನೈನ ಎರಡನೇ ಅತಿ ಕಡಿಮೆ ಸ್ಕೋರ್ ಆಗಿದೆ.
3 / 5
ಐಪಿಎಲ್‌ನಲ್ಲಿ ಚೆನ್ನೈನ ಅತ್ಯಂತ ಕಡಿಮೆ ಸ್ಕೋರ್ 79 ಆಗಿದ್ದು, ಈ ಸ್ಕೋರ್ ಕೂಡ ಮುಂಬೈ ವಿರುದ್ಧವೇ ಬಂದಿದೆ. ಮುಂಬೈ 2013ರ ಮೇ 5ರಂದು ವಾಂಖೆಡೆ ಸ್ಟೇಡಿಯಂನಲ್ಲಿ ಚೆನ್ನೈ ತಂಡವನ್ನು 80 ರನ್‌ಗಳಿಂದ ಸೋಲಿಸಿತ್ತು. ಆದರೆ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ 139 ರನ್ ಗಳಿಸಿತು. ಈ ಪಂದ್ಯವನ್ನು ಮುಂಬೈ 60 ರನ್‌ಗಳಿಂದ ಗೆದ್ದುಕೊಂಡಿತು.
4 / 5
ಐಪಿಎಲ್‌ನಲ್ಲಿ ಚೆನ್ನೈನ ಮೂರನೇ ಅತಿ ಕಡಿಮೆ ಸ್ಕೋರ್ 109 ರನ್, ಅವರು ರಾಜಸ್ಥಾನ್ ರಾಯಲ್ಸ್ ವಿರುದ್ಧ 2008 ರಂದು ಈ ಕಳಪೆ ಆಟ ಪ್ರದರ್ಶಿಸಿದ್ದರು. ಮುಂಬೈ 26 ಏಪ್ರಿಲ್ 2019 ರಂದು ಚೆನ್ನೈ ಅನ್ನು 109 ರನ್‌ಗಳಿಗೆ ಆಲ್ಔಟ್ ಮಾಡಿತ್ತು.
5 / 5
ಗುರುವಾರ ಚೆನ್ನೈ ಪರ ಮಹೇಂದ್ರ ಸಿಂಗ್ ಧೋನಿ ತಂಡವನ್ನು ಉಳಿಸಲು ಸಾಕಷ್ಟು ಪ್ರಯತ್ನಿಸಿದರು ಆದರೆ ಅವರಿಗೆ ಇನ್ನೊಂದು ತುದಿಯಿಂದ ಬೆಂಬಲ ಸಿಗಲಿಲ್ಲ. ಚೆನ್ನೈ ಪರ ಧೋನಿ ಅಜೇಯ 36 ರನ್ ಗಳಿಸಿದರು. ತಂಡದ ನಾಲ್ವರು ಬ್ಯಾಟ್ಸ್‌ಮನ್‌ಗಳು ಮಾತ್ರ ಎರಡಂಕಿ ದಾಟಲು ಸಾಧ್ಯವಾಯಿತು. ಡ್ವೇನ್ ಬ್ರಾವೋ 12 ರನ್ ಗಳಿಸಿದರು. ಶಿವಂ ದುಬೆ ಮತ್ತು ಅಂಬಟಿ ರಾಯುಡು ತಲಾ 10 ರನ್‌ಗಳ ಕಾಣಿಕೆ ನೀಡಿದರು.
Published On - 11:03 pm, Thu, 12 May 22