IPL Mega Auction: ಐಪಿಎಲ್ ಮೆಗಾ ಹರಾಜಿನಲ್ಲಿ ಹಣದ ಹೊಳೆಯೇ ಹರಿಯಲಿದೆ ಈ 5 ಓಪನರ್ಗಳಿಗೆ
TV9 Web | Updated By: Vinay Bhat
Updated on:
Jan 29, 2022 | 12:13 PM
IPL 2022: ಈ ಬಾರಿಯ ಐಪಿಎಲ್ 2022 ಹರಾಜಿನಲ್ಲಿ ಆರಂಭಿಕ ಆಟಗಾರರಿಗೆ ದುಡ್ಡಿನ ಮಳೆಯೇ ಹರಿಯಲಿದೆ. ಹೌದು, ಐಪಿಎಲ್ 2022 ಮೆಗಾ ಆಕ್ಷನ್ನಲ್ಲಿ ಓಪನರ್ಗಳು ಸಾಕಷ್ಟು ಬೇಡಿಕೆ ಪಡೆದುಕೊಂಡಿದ್ದಾರೆ, ಹೀಗಾಗಿ ಇವರಿಗೆ ದೊಡ್ಡ ಮೊತ್ತದ ಬಿಡ್ ನಡೆಯುವುದು ಖಚಿತ. ಹಾಗಾದ್ರೆ ಅತಿ ಹೆಚ್ಚು ಮೊತ್ತಕ್ಕೆ ಸೇಲ್ ಆಗಬಹುದಾದ ವಿದೇಶಿ ಆರಂಭಿಕರು ಯಾರು ಎಂಬುದನ್ನು ನೋಡೋಣ.
1 / 8
15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜು ಪ್ರಕ್ರಿಯೆಗೆ ದಿನಗಣನೆ ಶುರುವಾಗಿದೆ. ಕೋವಿಡ್ ನಡುವೆಯೂ ಮುಚ್ಚಿದ ಕ್ರೀಡಾಂಣಗಣದಲ್ಲೇ ಐಪಿಎಲ್ 2022 ನಡೆಸಲು ಯೋಜನೆ ನಡೆಸುತ್ತಿರುವ ಬಿಸಿಸಿಐ ಮೆಗಾ ಆಕ್ಷನ್ ಅನ್ನು ಬೆಂಗಳೂರಿನಲ್ಲಿ ಫೆಬ್ರವರಿ 12 ಮತ್ತು 13 ರಂದು ಆಯೋಜಿಸಿದೆ.
2 / 8
ಈಗಾಗಲೇ ಐಪಿಎಲ್ ಮೆಗಾ ಆಕ್ಷನ್ಗೆ ಬರೋಬ್ಬರಿ 1214 ಆಟಗಾರರು ನೋಂದಣಿ ಮಾಡಿದ್ದಾರೆ. ಇದರಲ್ಲಿ 896 ಭಾರತೀಯ ಆಟಗಾರರು ಮತ್ತು 318 ವಿದೇಶಿ ಪ್ಲೇಯರ್ಸ್ ಇದ್ದಾರೆ. ಸ್ಟಾರ್ ಆಟಗಾರರಾದ ಕ್ರಿಸ್ ಗೇಲ್, ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚೆರ್, ಮಿಚೆಲ್ ಸ್ಟಾರ್ಕ್, ಸ್ಯಾಮ್ ಕುರ್ರನ್ ಹರಾಜು ಪ್ರಕ್ರಿಯೆಯಿಂದ ಹಿಂದೆ ಸರಿದಿರುವುದು ಅಚ್ಚರಿ.
3 / 8
ಈ ಬಾರಿಯ ಹರಾಜಿನಲ್ಲಿ ಆರಂಭಿಕ ಆಟಗಾರರಿಗೆ ದುಡ್ಡಿನ ಮಳೆಯೇ ಹರಿಯಲಿದೆ. ಹೌದು, ಐಪಿಎಲ್ 2022 ಮೆಗಾ ಆಕ್ಷನ್ನಲ್ಲಿ ಓಪನರ್ಗಳು ಸಾಕಷ್ಟು ಬೇಡಿಕೆ ಪಡೆದುಕೊಂಡಿದ್ದಾರೆ, ಹೀಗಾಗಿ ಇವರಿಗೆ ದೊಡ್ಡ ಮೊತ್ತದ ಬಿಡ್ ನಡೆಯುವುದು ಖಚಿತ. ಹಾಗಾದ್ರೆ ಅತಿ ಹೆಚ್ಚು ಮೊತ್ತಕ್ಕೆ ಸೇಲ್ ಆಗಬಹುದಾದ ವಿದೇಶಿ ಆರಂಭಿಕರು ಯಾರು ಎಂಬುದನ್ನು ನೋಡೋಣ.
4 / 8
ಡೇವಿಡ್ ವಾರ್ನರ್
5 / 8
ಜಾನಿ ಬೈರ್ಸ್ಟೋ: ಐಪಿಎಲ್ನಲ್ಲಿ 142.19 ಸ್ಟ್ರೈಕ್ ರೇಟ್ ಹೊಂದಿರುವ ಇಂಗ್ಲೆಂಡ್ ತಂಡದ ಸ್ಟಾರ್ ಬ್ಯಾಟರ್ ಜಾನಿ ಬೈರ್ಸ್ಟೋ ಕೂಡ ಈ ಬಾರಿಯ ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಸೇಲ್ ಆಗಲಿದ್ದಾರೆ.
6 / 8
ಜೇಸನ್ ರಾಯ್: ಇಂಗ್ಲೆಂಡ್ ತಂಡದ ಮತ್ತೊರ್ವ ಓಪನರ್ ಜೇಸನ ರಾಯ್ ಕೂಡ ಹಾಟ್ ಪಿಕ್ ಆಗಿದ್ದಾರೆ. ಇವರು ಕೂಡ ಕಳೆದ ಸೀಸನ್ನಲ್ಲಿ ಹೈದರಾಬಾದ್ ಫ್ರಾಂಚೈಸಿ ಪರ ಆಡಿದ್ದರು. ಆರ್ಸಿಬಿ, ಪಂಜಾಬ್ ಕಿಂಗ್ಸ್ ಇವರನ್ನು ಕೊಂಡುಕೊಳ್ಳಲು ಪೈಪೋಟಿ ನಡೆಸುವುದು ಖಚಿತ.
7 / 8
ಫಾಫ್ ಡುಪ್ಲೆಸಿಸ್: ಚೆನ್ನೈ ಸೂಪರ್ ಕಿಂಗ್ಸ್ ಇವರನ್ನು ಕೈಬಿಟ್ಟ ಬಳಿಕ ಡುಪ್ಲೆಸಿಸ್ಗೆ ಬೇಡಿಕೆ ಹೆಚ್ಚಾಗಿದೆ. ಮೆಗಾ ಹರಾಜಿಗೆ ಲಭ್ಯ ಇರುವ ಇವರು ಉತ್ತಮ ಆರಂಭಿಕನಾಗಿದ್ದು ಹಣದ ಹೊಳೆ ಹರಿಯುವುದು ಪಕ್ಕಾ ಎನ್ನುತ್ತಿದ್ದಾರೆ ಕ್ರಿಕೆಟ್ ಪಂಡಿತರು.
8 / 8
ಕ್ವಿಂಟನ್ ಡಿಕಾಕ್: ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿಕಾಕ್ ಕೂಡ ಐಪಿಎಲ್ 2022 ಮೆಗ ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಸೇಲ್ ಆಗುವ ಸ್ಟಾರ್ ಆಟಗಾರ. ವಿಕೆಟ್ ಕೀಪರ್ ಕೂಡ ಆಗಿರುವುದರಿಂದ ಇವರಿಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಇವರ ಮೇಲೆ ಪ್ರಮುಖ ಫ್ರಾಂಚೈಸಿ ಕಣ್ಣಿಟ್ಟಿದೆ.