IPL 2023: ‘ಮಿಷನ್ 123’; ಕಿಂಗ್ ಕೊಹ್ಲಿ ದಾಖಲೆಯ ಮೇಲೆ ಕಣ್ಣಿಟ್ಟ ಪ್ರಿನ್ಸ್ ಗಿಲ್..!

Updated on: May 27, 2023 | 4:40 PM

IPL 2023: ವಾಸ್ತವವಾಗಿ ಫೈನಲ್ ಪಂದ್ಯದಲ್ಲಿ ಗಿಲ್ 123 ರನ್ ಬಾರಿಸಿದರೆ, ಒಂದು ಆವೃತ್ತಿಯಲ್ಲಿ ಅತ್ಯಧಿಕ ರನ್ ಬಾರಿಸಿದ ಆಟಗಾರನೆಂಬ ದಾಖಲೆ ಬರೆದಿರುವ ಕಿಂಗ್ ಕೊಹ್ಲಿಯನ್ನು ಗಿಲ್ ಹಿಂದಿಕ್ಕಲಿದ್ದಾರೆ.

1 / 7
ಐದು ಬಾರಿಯ ಚಾಂಪಿಯನ್ ಮುಂಬೈ ತಂಡವನ್ನು 61 ರನ್​ಗಳಿಂದ ಮಣಿಸಿದ ಗುಜರಾತ್ ಸತತ ಎರಡನೇ ಬಾರಿಗೆ ಐಪಿಎಲ್ ಫೈನಲ್ ತಲುಪಿದೆ. ಇದೀಗ ಭಾನುವಾರ ಮೋದಿ ಮೈದಾನದಲ್ಲಿ ನಡೆಯಲ್ಲಿರುವ ಫೈನಲ್ ಪಂದ್ಯದಲ್ಲಿ ಚೆನ್ನೈ ತಂಡವನ್ನು ಎದುರಿಸಲಿದೆ. ಇದೇ ಪಂದ್ಯದಲ್ಲಿ ಗುಜರಾತ್ ಆರಂಭಿಕ ಶುಭ್​ಮನ್ ಗಿಲ್ ಅಪರೂಪದ ದಾಖಲೆ ಮುರಿಯಲು ಸಜ್ಜಾಗಿದ್ದಾರೆ.

ಐದು ಬಾರಿಯ ಚಾಂಪಿಯನ್ ಮುಂಬೈ ತಂಡವನ್ನು 61 ರನ್​ಗಳಿಂದ ಮಣಿಸಿದ ಗುಜರಾತ್ ಸತತ ಎರಡನೇ ಬಾರಿಗೆ ಐಪಿಎಲ್ ಫೈನಲ್ ತಲುಪಿದೆ. ಇದೀಗ ಭಾನುವಾರ ಮೋದಿ ಮೈದಾನದಲ್ಲಿ ನಡೆಯಲ್ಲಿರುವ ಫೈನಲ್ ಪಂದ್ಯದಲ್ಲಿ ಚೆನ್ನೈ ತಂಡವನ್ನು ಎದುರಿಸಲಿದೆ. ಇದೇ ಪಂದ್ಯದಲ್ಲಿ ಗುಜರಾತ್ ಆರಂಭಿಕ ಶುಭ್​ಮನ್ ಗಿಲ್ ಅಪರೂಪದ ದಾಖಲೆ ಮುರಿಯಲು ಸಜ್ಜಾಗಿದ್ದಾರೆ.

2 / 7

ಇಡೀ ಆವೃತ್ತಿಯಲ್ಲಿ ಅದ್ಭುತ ಫಾರ್ಮ್​ನಲ್ಲಿರುವ ಶುಭ್​ಮನ್ ಗಿಲ್ ಕಳೆದ ನಾಲ್ಕು ಪಂದ್ಯಗಳಲ್ಲಿ ಬರೋಬ್ಬರಿ 3 ಶತಕ ಸಿಡಿಸಿ ಆರೆಂಜ್ ಕ್ಯಾಪ್ ಹೋಲ್ಡರ್ ಎನಿಸಿಕೊಂಡಿದ್ದಾರೆ. ಈ ಆವೃತ್ತಿಯಲ್ಲಿ ಇನ್ನೊಂದು ಪಂದ್ಯ ಬಾಕಿ ಇರುವಂತೆ 851 ರನ್ ಬಾರಿಸಿರುವ ಗಿಲ್ ಕಿಂಗ್ ಕೊಹ್ಲಿಯ ದಾಖಲೆ ಮೇಲೆ ಕಣ್ಣಿಟ್ಟಿದ್ದಾರೆ.

3 / 7

ಸಿಎಸ್​ಕೆ ವಿರುದ್ಧದ ಫೈನಲ್​ ಪಂದ್ಯದಲ್ಲಿ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಸಜ್ಜಾಗಿರುವ ಗಿಲ್, ಈ ಪಂದ್ಯದಲ್ಲಿ 123 ರನ್ ಬಾರಿಸಿದರೆ, ಕೊಹ್ಲಿ ಬರೆದ ಮಹತ್ವದ ದಾಖಲೆಯನ್ನು ಮುರಿಯಲಿದ್ದಾರೆ. ಅಲ್ಲದೆ ದಾಖಲೆಯ ಶತಕ ಸಿಡಿಸುವುದರೊಂದಿಗೆ ಗುಜರಾತ್ ತಂಡವನ್ನು ಮತ್ತೊಮ್ಮೆ ಚಾಂಪಿಯನ್ ಮಾಡಲು ಪ್ರಯತ್ನಿಸಲಿದ್ದಾರೆ.

4 / 7

ವಾಸ್ತವವಾಗಿ ಫೈನಲ್ ಪಂದ್ಯದಲ್ಲಿ ಗಿಲ್ 123 ರನ್ ಬಾರಿಸಿದರೆ, ಒಂದು ಆವೃತ್ತಿಯಲ್ಲಿ ಅತ್ಯಧಿಕ ರನ್ ಬಾರಿಸಿದ ಆಟಗಾರನೆಂಬ ದಾಖಲೆ ಬರೆದಿರುವ ಕಿಂಗ್ ಕೊಹ್ಲಿಯನ್ನು ಗಿಲ್ ಹಿಂದಿಕ್ಕಲಿದ್ದಾರೆ.

5 / 7

ಸದ್ಯ ಐಪಿಎಲ್‌ನ ಒಂದು ಸೀಸನ್‌ನಲ್ಲಿ 973 ರನ್‌ಗಳ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಐಪಿಎಲ್ 2016 ರಲ್ಲಿ ಕಿಂಗ್ ಕೊಹ್ಲಿ ಮಾಡಿದ ಮ್ಯಾಜಿಕಲ್ ಫಿಗರ್ ಅನ್ನು ಮೀರಿಸಲು ಶುಭ್‌ಮನ್ ಗಿಲ್ 123 ರನ್‌ಗಳ ಹಿಂದೆ ಇದ್ದಾರೆ.

6 / 7

ಗಿಲ್ ಈ ಐಪಿಎಲ್​ನಲ್ಲಿ ಇದುವರೆಗೆ ಆಡಿದ 16 ಪಂದ್ಯಗಳಲ್ಲಿ 156.43 ಸ್ಟ್ರೈಕ್ ರೇಟ್‌ನಲ್ಲಿ 851 ರನ್ ಬಾರಿಸಿದ್ದಾರೆ. ಇದರಲ್ಲಿ 3 ಶತಕಗಳು ಸೇರಿವೆ. ಅತ್ಯಧಿಕ ರನ್ ಬಾರಿಸಿದ ದಾಖಲೆ ಮುರಿಯುವದರೊಂದಿಗೆ ಒಂದು ಆವೃತ್ತಿಯಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಕೊಹ್ಲಿ ದಾಖಲೆಯನ್ನು ಗಿಲ್ ಸರಿಗಟ್ಟಲಿದ್ದಾರೆ. ಕೊಹ್ಲಿ ಒಂದು ಸೀಸನ್​ನಲ್ಲಿ 4 ಶತಕ ಸಿಡಿಸಿದ್ದು ಇದುವರೆಗಿನ ದಾಖಲೆಯಾಗಿದೆ.

7 / 7

ಇನ್ನು ಫೈನಲ್​ನಲ್ಲಿ ಚೆನ್ನೈ ತಂಡವನ್ನು ಗುಜರಾತ್ ಎದುರಿಸುತ್ತಿದ್ದು ಧೋನಿ ತಂಡದ ವಿರುದ್ಧ ಶುಭಮನ್ ಗಿಲ್ ಪ್ರದರ್ಶನವನ್ನು ನೋಡುವುದಾದರೆ.. ಚೆನ್ನೈ ವಿರುದ್ಧ 12 ಪಂದ್ಯಗಳನ್ನಾಡಿರುವ ಗಿಲ್ 301 ರನ್ ಬಾರಿಸಿದ್ದಾರೆ. ಅಲ್ಲದೆ ಇದೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಚೆನ್ನೈ ವಿರುದ್ಧ 63 ರನ್​ಗಳ ಗೆಲುವಿನ ಇನ್ನಿಂಗ್ಸ್ ಆಡಿದ್ದರು. ಹಾಗೆಯೇ ಗಿಲ್ ಅವರ ಈ 12 ಪಂದ್ಯಗಳಲ್ಲಿ 3 ಅರ್ಧಶತಕಗಳು ಸೇರಿವೆ.

Loading...
Unable to load recommendations.
Follow Us