Updated on: May 01, 2023 | 6:02 PM
ಲಕ್ನೋ ವಿರುದ್ಧದ ಪಂದ್ಯಕ್ಕೂ ಮುನ್ನ ಆರ್ಸಿಬಿಗೆ ಬಿಗ್ ಶಾಕ್ ಎದುರಾಗಿದೆ. ತಂಡದ ಸ್ಟಾರ್ ಬೌಲರ್ ಡೇವಿಡ್ ವಿಲ್ಲಿ ಇಂಜುರಿಯಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಈಗಾಗಲೇ ಟೂರ್ನಿಯಲ್ಲಿ 42 ಪಂದ್ಯಗಳು ಮುಗಿದಿದ್ದು, ಲೀಗ್ನಲ್ಲಿ ಏಳು ಬೀಳುಗಳನ್ನು ಕಂಡಿರುವ ಆರ್ಸಿಬಿಗೆ ವಿಲ್ಲಿ ಅಲಭ್ಯತೆ ಸಾಕಷ್ಟು ಹಿನ್ನಡೆಯುಂಟು ಮಾಡಿದೆ.
ಇದೀಗ ವಿಲ್ಲಿ ಬದಲಿ ಆಟಗಾರನನ್ನು ಆಯ್ಕೆ ಮಾಡಿರುವ ಆರ್‌ಸಿಬಿ, ತಂಡದ ಮಾಜಿ ಆಟಗಾರನಾದ ಕೇದಾರ್ ಜಾಧವ್ರನ್ನು ತಂಡಕ್ಕೆ ಸೇರಿಸಿಕೊಂಡಿದೆ.
ಅಚ್ಚರಿಯ ಸಂಗತಿ ಎಂದರೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಕೇದಾರ್ ಜಾಧವ್‌ಗೆ ಆರ್‌ಸಿಬಿ ತನ್ನ ತಂಡದಲ್ಲಿ ಸ್ಥಾನ ನೀಡಿದೆ. ಈ ಬಲಗೈ ಬ್ಯಾಟ್ಸ್‌ಮನ್ 2021 ರಲ್ಲಿ ಕೊನೆಯ ಬಾರಿಗೆ ಐಪಿಎಲ್ ಆಡಿದ್ದರು. ಈಗ ಇದ್ದಕ್ಕಿದ್ದಂತೆ ಆರ್‌ಸಿಬಿ ಅವರಿಗೆ ತನ್ನ ತಂಡದಲ್ಲಿ ಅವಕಾಶ ನೀಡಿದೆ.
ಐಪಿಎಲ್ ಹರಾಜಿನಲ್ಲಿ ಕೇದಾರ್ ಜಾಧವ್ ಅವರನ್ನು ಯಾವುದೇ ತಂಡ ಖರೀದಿಸಿರಲಿಲ್ಲ. ಇದಕ್ಕೆ ಕಾರಣವೂ ಇದ್ದು, ಕೇದಾರ್ ಜಾಧವ್ ಅವರಿಗೆ ಈಗ 38 ವರ್ಷ ವಯಸ್ಸಾಗಿದೆ. ಅಲ್ಲದೆ ಅವರು ಆಡಿದ ಕಳೆದ ಎರಡು ಸೀಸನ್ಗಳಲ್ಲಿ ಒಂದೇ ಒಂದು ಅರ್ಧಶತಕ ಬಾರಿಸಿರಲಿಲ್ಲ. ಆದರೆ ಈ ಹೊರತಾಗಿಯೂ ಆರ್‌ಸಿಬಿ ಅವರನ್ನು ಖರೀದಿಸಿದೆ.
ಐಪಿಎಲ್ ಹರಾಜಿನಲ್ಲಿ ಮಾರಾಟವಾಗದ ಹಿನ್ನೆಲೆಯಲ್ಲಿ ಕೇದಾರ್ ಜಾಧವ್ ಕಾಮೆಂಟರಿ ಮಾಡುತ್ತಿದ್ದರು. ಈಗ ಪ್ರಶ್ನೆ ಏನೆಂದರೆ ಆರ್‌ಸಿಬಿ ಕೇದಾರ್ ಜಾಧವ್ ಅವರನ್ನು ಏಕೆ ಖರೀದಿಸಿತು ಎಂಬುದು. ಡೇವಿಡ್ ವಿಲ್ಲಿ ಬದಲಿಗೆ ವಿದೇಶಿ ಆಟಗಾರರನ್ನು ಖರೀದಿಸುವ ಅವಕಾಶವಿದ್ದರೂ ಆರ್‌ಸಿಬಿ ಜಾಧವ್ ಅವರನ್ನು ಖರೀದಿಸಲು ಕಾರಣ ಅವರ ಬ್ಯಾಟಿಂಗ್.
ವಾಸ್ತವವಾಗಿ, ಆರ್‌ಸಿಬಿ ಸಮಸ್ಯೆಯೆಂದರೆ ವಿರಾಟ್, ಡುಪ್ಲೆಸಿಸ್ ಮತ್ತು ಮ್ಯಾಕ್ಸ್‌ವೆಲ್ ಹೊರತುಪಡಿಸಿ, ಬೇರೆ ಯಾವುದೇ ಬ್ಯಾಟ್ಸ್‌ಮನ್ ರನ್ ಗಳಿಸುತ್ತಿಲ್ಲ. ಈ ಕೊರತೆಯನ್ನು ನೀಗಿಸಲು ಜಾಧವ್ ಅವರನ್ನು ತಂಡಕ್ಕೆ ಕರೆತಂದಿದ್ದಾರೆ. ಜಾಧವ್ ಅನುಭವ ಹೊಂದಿದ್ದು, ಸುದೀರ್ಘ ಸಿಕ್ಸರ್ ಬಾರಿಸುವುದರಲ್ಲಿ ಹೆಸರುವಾಸಿಯಾಗಿದ್ದಾರೆ.
ಕೇದಾರ್ ಜಾಧವ್ ಅವರ ಸಮಸ್ಯೆ ಏನೆಂದರೆ ಅವರು ಕೊನೆಯ ಬಾರಿಗೆ 2021 ರಲ್ಲಿ ಐಪಿಎಲ್ ಪಂದ್ಯವನ್ನು ಆಡಿದ್ದರು. ಈ ಆಟಗಾರ ಕಳೆದ ನಾಲ್ಕು ಸೀಸನ್ಗಳಲ್ಲಿ 29 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಕೇವಲ ಒಂದು ಅರ್ಧಶತಕವನ್ನು ಮಾತ್ರ ಬಾರಿಸಿದ್ದಾರೆ. ಜಾಧವ್ 123.17ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ್ದು, 21ಕ್ಕೂ ಕಡಿಮೆ ಸರಾಸರಿಯಲ್ಲಿ ರನ್ ಕಲೆಹಾಕಿದ್ದಾರೆ.
Published On - 5:59 pm, Mon, 1 May 23