IPL 2023: ಹೈದರಾಬಾದ್ ವಿರುದ್ಧ ಕಳೆದೆರಡು ಇನ್ನಿಂಗ್ಸ್​ಗಳಲ್ಲಿ ಕಿಂಗ್ ಕೊಹ್ಲಿ ಖಾತೆಯನ್ನೇ ತೆರೆದಿಲ್ಲ..!

|

Updated on: May 18, 2023 | 5:36 PM

Virat Kohli: ಲ್ಲಿಯವರೆಗೆ, ಹೈದರಾಬಾದ್ ವಿರುದ್ಧ ಕೊಹ್ಲಿ ಒಟ್ಟು 20 ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಅವರು 136.8 ರ ಸ್ಟ್ರೈಕ್ ರೇಟ್‌ನಲ್ಲಿ 31.6 ರ ಸರಾಸರಿಯಲ್ಲಿ 569 ರನ್ ಬಾರಿಸಿದ್ದಾರೆ.

1 / 5
ಐಪಿಎಲ್​ನಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ಮಹತ್ವದ ಪಂದ್ಯ ನಡೆಯಲಿದೆ. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣ ಈ ಪಂದ್ಯಕ್ಕೆ ವೇದಿಕೆಯಾಗಲಿದೆ. ಈ ಪಂದ್ಯ ಆರ್‌ಸಿಬಿಗೆ ಪ್ಲೇಆಫ್‌ನಲ್ಲಿ ಅತ್ಯಂತ ಮಹತ್ವದ ಪಂದ್ಯವಾಗಿದೆ.

2 / 5
ಹೀಗಾಗಿ ಈ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಎಲ್ಲಾ ಕೊಹ್ಲಿ ಅಭಿಮಾನಿಗಳು ಅದ್ಭುತ ಇನ್ನಿಂಗ್ಸ್ ನೋಡುವ ನಿರೀಕ್ಷೆಯಲ್ಲಿದ್ದಾರೆ. ಆದರೆ ಅದಕ್ಕೂ ಮುನ್ನ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಕೊಹ್ಲಿ ದಾಖಲೆಗಳು ಹೇಗಿವೆ ಎಂಬುದನ್ನು ನೋಡೋಣ.

3 / 5
ಹೈದರಾಬಾದ್ ವಿರುದ್ಧದ ಕೊನೆಯ ಎರಡು ಇನ್ನಿಂಗ್ಸ್‌ಗಳಲ್ಲಿ, ಕೊಹ್ಲಿ ಗೋಲ್ಡನ್ ಡಕ್‌ಗೆ (ಮೊದಲ ಎಸೆತದಲ್ಲಿ ಔಟ್) ಔಟಾಗಿದ್ದಾರೆ. ಇಲ್ಲಿಯವರೆಗೆ, ಹೈದರಾಬಾದ್ ವಿರುದ್ಧ ಕೊಹ್ಲಿ ಒಟ್ಟು 20 ಇನ್ನಿಂಗ್ಸ್‌ಗಳನ್ನು ಆಡಿದ್ದು ಅದರಲ್ಲಿ 136.8 ರ ಸ್ಟ್ರೈಕ್ ರೇಟ್‌ ಹಾಗೂ 31.6 ರ ಸರಾಸರಿಯಲ್ಲಿ 569 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 4 ಅರ್ಧ ಶತಕಗಳು ಸೇರಿವೆ. ಔಟಾಗದೆ 93 ರನ್ ಬಾರಿಸಿದ್ದು ಹೈದರಾಬಾದ್ ವಿರುದ್ಧ ಕೊಹ್ಲಿಯ ಗರಿಷ್ಠ ಸ್ಕೋರ್ ಆಗಿದೆ.

4 / 5
ಆದರೆ ಇದೆಲ್ಲದರ ನಡುವೆ ಹೈದರಾಬಾದ್ ವಿರುದ್ಧ ಆಡಿದ 20 ಇನ್ನಿಂಗ್ಸ್‌ನಲ್ಲಿ ಕೊಹ್ಲಿ ಮೂರು ಬಾರಿ ಖಾತೆ ತೆರೆಯದೆ 0 ರನ್‌ಗಳಿಗೆ ಪೆವಿಲಿಯನ್ ಸೇರಿಕೊಂಡಿದ್ದಾರೆ. ಹೀಗಾಗಿ ಇಂದಿನ ಮಹತ್ವದ ಪಂದ್ಯದಲ್ಲಿ ಕೊಹ್ಲಿ ಬ್ಯಾಟ್ ಅಬ್ಬರಿಸದಿದ್ದರೆ ಆರ್​ಸಿಬಿಗೆ ಭಾರಿ ಹಿನ್ನಡೆಯಾಗಲಿದೆ.

5 / 5
ಇನ್ನು ಪ್ಲೇ ಆಫ್‌ಗೆ ಅರ್ಹತೆ ಪಡೆಯಲು ಆರ್‌ಸಿಬಿ ತನ್ನ ಕೊನೆಯ ಎರಡು ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಹೈದರಾಬಾದ್ ನಂತರ ಆರ್‌ಸಿಬಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಇದೆಲ್ಲದರ ನಡುವೆ ಆರ್​ಸಿಬಿ ಎರಡು ಪಂದ್ಯಗಳನ್ನು ಗೆದ್ದರೂ, ಇತರ ತಂಡಗಳ ಫಲಿತಾಂಶವನ್ನು ಅವಲಂಬಿಸಬೇಕಾಗಿದೆ. ಆದ್ದರಿಂದ ಈ ಸೀಸನ್​ನಲ್ಲಿ ಆರ್‌ಸಿಬಿ ಪ್ಲೇ ಆಫ್‌ಗೆ ಅರ್ಹತೆ ಪಡೆಯುತ್ತದೆಯೇ ಎಂಬುದು ಕುತೂಹಲಕಾರಿಯಾಗಿದೆ.