ಟಿ20 ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ ಜೋಸ್ ಬಟ್ಲರ್

Updated on: Sep 18, 2026 | 8:08 PM

ಇಂಗ್ಲೆಂಡ್‌ನ ಜೋಸ್ ಬಟ್ಲರ್ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಕೇವಲ 16 ಎಸೆತಗಳಲ್ಲಿ 30 ರನ್ ಗಳಿಸಿ ಮಿಂಚಿದರು. ಈ ಇನ್ನಿಂಗ್ಸ್‌ನೊಂದಿಗೆ, ಅವರು ತಮ್ಮ ಟಿ20 ವೃತ್ತಿಜೀವನದಲ್ಲಿ 15,000 ರನ್‌ಗಳನ್ನು ಪೂರೈಸಿ ವಿಶ್ವದ ಮೊದಲ ಕ್ರಿಕೆಟಿಗರಾದರು. ಕೀರನ್ ಪೊಲಾರ್ಡ್ ಅವರ ಹಿಂದಿನ ದಾಖಲೆಯನ್ನು ಮುರಿದು, 528 ಪಂದ್ಯಗಳಲ್ಲಿ 9 ಶತಕ ಮತ್ತು 107 ಅರ್ಧಶತಕಗಳೊಂದಿಗೆ ಈ ಐತಿಹಾಸಿಕ ಮೈಲಿಗಲ್ಲು ಸಾಧಿಸಿದ್ದಾರೆ.

1 / 5
ಇಂಗ್ಲೆಂಡ್‌ನ ಸ್ಟಾರ್ ಆಟಗಾರ ಜೋಸ್ ಬಟ್ಲರ್ ಶ್ರೀಲಂಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಶ್ರೀಲಂಕಾ ನೀಡಿದ 146 ರನ್‌ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ ಪರ ಆರಂಭಿಕರಾಗಿ ಕ್ರೀಸ್‌ಗೆ ಬಂದ ಜೋಸ್ ಬಟ್ಲರ್ ಆಕ್ರಮಣಕಾರಿಯಾಗಿ ಬ್ಯಾಟಿಂಗ್‌ ಆರಂಭಿಸಿ ಕೇವಲ 16 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಒಂದು ಸಿಕ್ಸ್ ಸಹಾಯದಿಂದ 30 ರನ್ ಬಾರಿಸಿದರು. ಈ ಸಣ್ಣ ಇನ್ನಿಂಗ್ಸ್ ಹೊರತಾಗಿಯೂ ಬಟ್ಲರ್ ಟಿ20 ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದರು(PC-PTI).

2 / 5

2009 ರಿಂದ ಟಿ20 ಸ್ವರೂಪದಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಬಟ್ಲರ್, ಈ ಪಂದ್ಯದೊಂದಿಗೆ ತಮ್ಮ ಟಿ20 ವೃತ್ತಿಜೀವನದಲ್ಲಿ 15000 ರನ್​ಗಳನ್ನು ಪೂರೈಸಿ ಹೊಸ ದಾಖಲೆಯನ್ನು ಸೃಷ್ಟಿಸಿದರು. ಈ ಸಾಧನೆ ಮಾಡಿದ ವಿಶ್ವದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಮೂಲಕ ಇಲ್ಲಿಯವರೆಗೆ ಅಗ್ರಸ್ಥಾನದಲ್ಲಿದ್ದ ವೆಸ್ಟ್ ಇಂಡೀಸ್ ದೈತ್ಯ ಕೀರನ್ ಪೊಲಾರ್ಡ್ ಅವರ ದಾಖಲೆಯನ್ನು ಮುರಿದರು(PC-PTI).

3 / 5

ಬಟ್ಲರ್ ಇಲ್ಲಿಯವರೆಗೆ 528 ಪಂದ್ಯಗಳನ್ನು ಆಡಿದ್ದು, 497 ಇನ್ನಿಂಗ್ಸ್‌ಗಳಲ್ಲಿ 35.46 ಸರಾಸರಿಯಲ್ಲಿ 15000 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಈ ದೀರ್ಘ ಪ್ರಯಾಣದಲ್ಲಿ, ಅವರು 9 ಶತಕಗಳು ಮತ್ತು 107 ಅರ್ಧಶತಕಗಳನ್ನು ಬಾರಿಸಿದ್ದಾರೆ(PC-PTI).

4 / 5

ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯನ್ನು ನೋಡಿದರೆ, ಜೋಸ್ ಬಟ್ಲರ್ 15000 ರನ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಕೀರನ್ ಪೊಲಾರ್ಡ್ 14999 ರನ್‌ಗಳೊಂದಿಗೆ 2 ನೇ ಸ್ಥಾನದಲ್ಲಿದ್ದಾರೆ. ನಂತರ ಅಲೆಕ್ಸ್ ಹೇಲ್ಸ್ 14581 ರನ್‌, ಕ್ರಿಸ್ ಗೇಲ್ 14562 ರನ್‌ ಮತ್ತು ಡೇವಿಡ್ ವಾರ್ನರ್ 14284 ರನ್‌ಗಳೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ(PC-PTI).

5 / 5

ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ 6 ನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ 430 ಪಂದ್ಯಗಳ 413 ಇನ್ನಿಂಗ್ಸ್​ಗಳಲ್ಲಿ 14218 ರನ್ ಬಾರಿಸಿದ್ದಾರೆ. ಇದರಲ್ಲಿ ಕೊಹ್ಲಿ 10 ಶತಕಗಳು ಮತ್ತು 118 ಅರ್ಧಶತಕಗಳನ್ನು ಬಾರಿಸಿದ್ದಾರೆ(PC-PTI).

Loading...
Unable to load recommendations.
Follow Us