Kieron Pollard: 800 ಸಿಕ್ಸರ್‌, 12000 ರನ್‌! ಪಾಕಿಸ್ತಾನದಲ್ಲಿ ವಿಶ್ವ ದಾಖಲೆ ಬರೆದ ಕೀರಾನ್ ಪೊಲಾರ್ಡ್

|

Updated on: Mar 05, 2023 | 2:30 PM

PSL: ಅತಿ ಹೆಚ್ಚು ಸಿಕ್ಸರ್ ಬಾರಿಸಿದವರಲ್ಲಿ ಗೇಲ್ 1056 ಸಿಕ್ಸರ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಪೊಲಾರ್ಡ್ 800 ಸಿಕ್ಸರ್‌ಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಹಾಗೆಯೇ ಆಂಡ್ರೆ ರಸೆಲ್ 587 ಸಿಕ್ಸರ್‌ಗಳೊಂದಿಗೆ 3ನೇ ಸ್ಥಾನದಲ್ಲಿದ್ದಾರೆ

1 / 5
ಪ್ರಸ್ತುತ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ವೆಸ್ಟ್ ಇಂಡೀಸ್ ಆಟಗಾರ ಕೀರಾನ್ ಪೊಲಾರ್ಡ್ ಟಿ20 ಕ್ರಿಕೆಟ್​ನಲ್ಲಿ ಅಪರೂಪದ ದಾಖಲೆ ಮಾಡಿದ್ದಾರೆ. ಅದೆನೆಂದರೆ, ಕೀರಾನ್ ಪೊಲಾರ್ಡ್ ಟಿ20 ಕ್ರಿಕೆಟ್‌ನಲ್ಲಿ 800 ಸಿಕ್ಸರ್‌ಗಳನ್ನು ಸಿಡಿಸಿದ ದಾಖಲೆ ಬರೆದಿದ್ದಾರೆ

2 / 5
ಪಿಎಸ್‌ಎಲ್‌ನಲ್ಲಿ ಮುಲ್ತಾನ್ ಸುಲ್ತಾನ್ಸ್‌ ತಂಡದ ಪರ ಆಡುತ್ತಿರುವ ಪೊಲಾರ್ಡ್​  3 ಸಿಕ್ಸರ್‌ಗಳನ್ನು ಹೊಡೆಯುವುದರೊಂದಿಗೆ ಟಿ 20 ಕ್ರಿಕೆಟ್‌ನಲ್ಲಿ 800 ಸಿಕ್ಸರ್‌ಗಳನ್ನು ಪೂರೈಸಿದರು. ಪೊಲಾರ್ಡ್ 550 ಟಿ20 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ.

3 / 5
ಕೀರಾನ್ ಪೊಲಾರ್ಡ್ ಟಿ20 ಕ್ರಿಕೆಟ್​ನಲ್ಲಿ 800 ಸಿಕ್ಸರ್ ಬಾರಿಸಿದರಾದರೂ, ಟಿ20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದವರಲ್ಲಿ ಕ್ರಿಸ್ ಗೇಲ್ ಮೊದಲ ಸ್ಥಾನದಲ್ಲಿದ್ದಾರೆ. ಕ್ರಿಸ್ ಗೇಲ್ ಟಿ20 ಕ್ರಿಕೆಟ್‌ನಲ್ಲಿ 455 ಇನ್ನಿಂಗ್ಸ್‌ ಆಡಿದ್ದು, ಅದರಲ್ಲಿ ಗರಿಷ್ಠ 1056 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

4 / 5
ಅತಿ ಹೆಚ್ಚು ಸಿಕ್ಸರ್ ಬಾರಿಸಿದವರಲ್ಲಿ ಗೇಲ್ 1056 ಸಿಕ್ಸರ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಪೊಲಾರ್ಡ್ 800 ಸಿಕ್ಸರ್‌ಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಹಾಗೆಯೇ ಆಂಡ್ರೆ ರಸೆಲ್ 587 ಸಿಕ್ಸರ್‌ಗಳೊಂದಿಗೆ 3ನೇ ಸ್ಥಾನದಲ್ಲಿದ್ದಾರೆ

5 / 5
ಅತಿ ಹೆಚ್ಚು ಸಿಕ್ಸರ್​ಗಳ ಜೊತೆಗೆ ಪಾಕಿಸ್ತಾನ ಸೂಪರ್ ಲೀಗ್‌ನ 20 ನೇ ಪಂದ್ಯದಲ್ಲಿ ಪೊಲಾರ್ಡ್ ಮತ್ತೊಂದು ಮೈಲಿಗಲ್ಲು ಕೂಡ ಸಾಧಿಸಿದರು. ಟಿ20 ಕ್ರಿಕೆಟ್‌ನಲ್ಲಿ 12 ಸಾವಿರ ರನ್ ಪೂರೈಸಿದ ಸಾಧನೆ ಕೂಡ ಮಾಡಿದ ಪೊಲಾರ್ಡ್​, ಟಿ20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್ ಬಾರಿಸಿದವರಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಎಂದಿನಂತೆ ಗೇಲ್ 14562 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ.

Published On - 2:27 pm, Sun, 5 March 23