
ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಎಷ್ಟೋ ದಿಗ್ಗಜ ಆರಂಭಿಕ ಬ್ಯಾಟರ್‌ಗಳು ಬಂದು ಹೋಗಿದ್ದಾರೆ. ಸುನಿಲ್ ಗವಾಸ್ಕರ್, ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಮುರಳಿ ವಿಜಯ್ ಮತ್ತು ರೋಹಿತ್ ಶರ್ಮಾ ಅವರಂತಹ ಮಹಾನ್ ಆಟಗಾರರು ಭಾರತಕ್ಕೆ ಹಲವು ಸ್ಮರಣೀಯ ಗೆಲುವುಗಳನ್ನು ತಂದುಕೊಟ್ಟಿದ್ದಾರೆ. ಆದರೆ, ಈ ದಿಗ್ಗಜರಿಗೂ ಸಾಧ್ಯವಾಗದ ಅಪರೂಪದ ಮತ್ತು ಐತಿಹಾಸಿಕ ಸಾಧನೆಯೊಂದನ್ನು ಕನ್ನಡಿಗ ಕೆ.ಎಲ್. ರಾಹುಲ್ ಮಾಡಿ ತೋರಿಸಿದ್ದಾರೆ. (PC: Gettyimages)
ಟೆಸ್ಟ್ ಕ್ರಿಕೆಟ್‌ನಲ್ಲಿ ಆರಂಭಿಕ ಆಟಗಾರನಾಗಿ ಎಲ್ಲಾ ನಾಲ್ಕು SENA ದೇಶಗಳಲ್ಲಿ (ಸೌತ್ ಆಫ್ರಿಕಾ, ಇಂಗ್ಲೆಂಡ್, ನ್ಯೂಝಿಲೆಂಡ್ ಮತ್ತು ಆಸ್ಟ್ರೇಲಿಯಾ) 50+ ರನ್ ಗಳಿಸಿದ ಏಕೈಕ ಹಾಗೂ ಮೊದಲ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಕೆ.ಎಲ್. ರಾಹುಲ್ ಪಾತ್ರರಾಗಿದ್ದಾರೆ. (PC: Gettyimages)
2026ರ ನವೆಂಬರ್ 20ರಂದು ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್ ಮೈದಾನದಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಂದು ರಾಹುಲ್ ಈ ಮೈಲಿಗಲ್ಲನ್ನು ತಲುಪಿದರು. ನ್ಯೂಝಿಲೆಂಡ್ ನೆಲದಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವಾಡುತ್ತಿರುವ ರಾಹುಲ್, ತಾಳ್ಮೆಯ ಹಾಗೂ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿ ಅಜೇಯ 52 ರನ್ (116 ಎಸೆತಗಳು) ಗಳಿಸುವ ಮೂಲಕ ಈ ವಿಶೇಷ ದಾಖಲೆಯನ್ನು ನಿರ್ಮಿಸಿದ್ದಾರೆ. (PC: Gettyimages)
ಈ ಮೂಲಕ ಸೌತ್ ಆಫ್ರಿಕಾ, ಇಂಗ್ಲೆಂಡ್, ನ್ಯೂಝಿಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ಆರಂಭಿಕನಾಗಿ ಕಣಕ್ಕಿಳಿದು ಟೆಸ್ಟ್ ಕ್ರಿಕೆಟ್‌ನಲ್ಲಿ 50+ ಸ್ಕೋರ್ ಗಳಿಸಿದ ಟೀಮ್ ಇಂಡಿಯಾದ ಏಕೈಕ ಬ್ಯಾಟರ್ ಎಂಬ ದಾಖಲೆಯನ್ನು ಕೆ.ಎಲ್. ರಾಹುಲ್ ತಮ್ಮದಾಗಿಸಿಕೊಂಡಿದ್ದಾರೆ. (PC: Gettyimages)
2014ರಲ್ಲಿ ಮೆಲ್ಬೋರ್ನ್‌ನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದಾಗಿನಿಂದ ಕನ್ನಡಿಗ ಕೆ.ಎಲ್ ರಾಹುಲ್ ವಿದೇಶಿ ಪಿಚ್‌ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು, ಈ ಮೂಲಕ ಎಲ್ಲಾ ನಾಲ್ಕು SENA ದೇಶಗಳಲ್ಲಿ ಒಟ್ಟು 13 ಬಾರಿ 50+ ರನ್ ಗಳಿಸಿದ್ದಾರೆ. ಇದರಲ್ಲಿ ಇಂಗ್ಲೆಂಡ್‌ನಲ್ಲಿ 4 ಶತಕ ಹಾಗೂ 3 ಅರ್ಧಶತಕಗಳೊಂದಿಗೆ 7 ಬಾರಿ, ಆಸ್ಟ್ರೇಲಿಯಾದಲ್ಲಿ 1 ಶತಕ ಹಾಗೂ 2 ಅರ್ಧಶತಕಗಳೊಂದಿಗೆ 3 ಬಾರಿ, ಸೌತ್ ಆಫ್ರಿಕಾದಲ್ಲಿ 1 ಶತಕ ಹಾಗೂ 1 ಅರ್ಧಶತಕಗಳೊಂದಿಗೆ 2 ಬಾರಿ, ಮತ್ತು ನ್ಯೂಝಿಲೆಂಡ್‌ನ ವೆಲ್ಲಿಂಗ್ಟನ್‌ನಲ್ಲಿ ಗಳಿಸಿದ ಅಜೇಯ 52 ರನ್‌ಗಳ ಅರ್ಧಶತಕ ಸೇರಿವೆ. ಈ ಮೂಲಕ ಟೀಮ್ ಇಂಡಿಯಾದ ದಿಗ್ಗಜ ಆರಂಭಿಕರಿಗೂ ಸಾಧ್ಯವಾಗದ ಅಪರೂಪದ ಮತ್ತು ಐತಿಹಾಸಿಕ ಸಾಧನೆಯೊಂದನ್ನು ಕನ್ನಡಿಗ ಮಾಡಿ ತೋರಿಸಿದ್ದಾರೆ. (PC: Gettyimages)