KL Rahul: ದಾಖಲೆಯ 257 ರನ್ಸ್: ಪಂದ್ಯ ಮುಗಿದ ಬಳಿಕ ನಾಯಕ ಕೆಎಲ್ ರಾಹುಲ್ ಆಡಿದ ಮಾತುಗಳೇನು ಕೇಳಿ
PBKS vs LSG, IPL 2023: ಪಂಜಾಬ್ ಕಿಂಗ್ಸ್ ವಿರುದ್ಧ ಲಖನೌ ಸೂಪರ್ ಜೇಂಟ್ಸ್ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಬರೋಬ್ಬರಿ 257 ರನ್ ಚಚ್ಚಿ ಐಪಿಎಲ್ 2023 ರಲ್ಲಿ ಗರಿಷ್ಠ ಸ್ಕೋರ್ ಕಲೆಹಾಕಿದ ಸಾಧನೆ ಮತ್ತು ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ತಂಡ ಎಂಬ ದಾಖಲೆ ಬರೆಯಿತು.
1 / 9
16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಒಂದಲ್ಲ ಒಂದು ದಾಖಲೆ ನಿರ್ಮಾಣವಾಗುತ್ತಲೇ ಇದೆ. ಶುಕ್ರಾವರ ಮೊಹಾಲಿಯ ಐಎಸ್ ಬಿಂದ್ರ ಸ್ಟೇಡಿಯಂನಲ್ಲಿ ನಡೆದ ಪಂಜಾಬ್ ಕಿಂಗ್ಸ್ ಮತ್ತು ಲಖನೌ ಸೂಪರ್ ಜೇಂಟ್ಸ್ ನಡುವಣ ಐಪಿಎಲ್ 2023ರ 38ನೇ ಪಂದ್ಯದಲ್ಲಿ ರನ್ ಮಳೆಯೇ ಸುರಿಯಿತು. ಉಭಯ ತಂಡಗಳ ಕಡೆಯಿಂದ ಒಟ್ಟು 458 ರನ್ಗಳು ಹರಿದು ಬಂದವು.
2 / 9
ಲಖನೌ ಸೂಪರ್ ಜೇಂಟ್ಸ್ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಬರೋಬ್ಬರಿ 257 ರನ್ ಚಚ್ಚಿ ಐಪಿಎಲ್ 2023 ರಲ್ಲಿ ಗರಿಷ್ಠ ಸ್ಕೋರ್ ಕಲೆಹಾಕಿದ ಸಾಧನೆ ಮತ್ತು ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ತಂಡ ಎಂಬ ದಾಖಲೆ ಬರೆಯಿತು.
3 / 9
ಪಂದ್ಯ ಮುಗಿದ ಬಳಿಕ ತಂಡದ ಪ್ರದರ್ಶನದ ಬಗ್ಗೆ ಮಾತನಾಡಿದ ಲಖನೌ ತಂಡದ ನಾಯಕ ಕೆಎಲ್ ರಾಹುಲ್ ಕೆಲ ವಿಚಾರಗಳಲ್ಲಿ ಹಂಚಿಕೊಂಡಿದ್ದಾರೆ. ಇದು ಟಿ20 ಟ್ರೆಂಡ್ಗೆ ಸಂಪೂರ್ಣ ವಿರುದ್ಧವಾಗಿದೆ. ಈ ಪಂದ್ಯದಲ್ಲಿ ನಮಗೆ ಗೆಲುವು ಸಿಕ್ಕಿರುವುದು ಸಂತಸ ತಂದಿದೆ ಎಂದು ಹೇಳಿದ್ದಾರೆ.
4 / 9
ಹಿಂದಿನ ಪಂದ್ಯದ ಬಳಿಕ ನಮಗೆ ಕೆಲ ದಿನಗಳ ಕಾಲ ವಿಶ್ರಾಂತಿ ಸಿಕ್ಕಿತು. ಹೀಗಾಗಿ ಹೊಸ ಹುರುಪಿನೊಂದಿಗೆ ನಾವು ಕಣಕ್ಕಿಳಿದೆವು. ಇಲ್ಲಿ ಹೇಗೆ ಬ್ಯಾಟಿಂಗ್ ಮಾಡಬೇಕು ಎಂಬ ಬಗ್ಗೆ ಸ್ಪಷ್ಟವಾದ ಯೋಜನೆಯಿತ್ತು. ಇಂತಹ ವಿಕೆಟ್ ಸಿಕ್ಕಾಗ ಬ್ಯಾಟಿಂಗ್ ಮಾಡಲು ಉತ್ಸುಕರಾಗಿರುತ್ತಾರೆ. 250 ರನ್ ಗಳಿಸಿರುವುದೇ ಇದಕ್ಕೆ ಸಾಕ್ಷಿ - ಕೆಎಲ್ ರಾಹುಲ್.
5 / 9
ನಾವು ಏನು ಪ್ಲಾನ್ ಮಾಡಿಕೊಂಡು ಬಂದೆವು ಅದರಂತೆ ಇಲ್ಲಿ ನಡೆಯಿತು. ನಮಗೆ ವಿಕೆಟ್ ತುಂಬಾ ಸಹಾಯ ಮಾಡಿತು. ನಾವು ಯಾವಾಗಲು ಉತ್ತಮ ಆರಂಭ ಪಡೆಯುವ ಬಗ್ಗೆ ಮಾತನಾಡುತ್ತೇವೆ. ನಮ್ಮಲ್ಲಿ ಮೇಯರ್ಸ್, ಸ್ಟಾಯಿನಿಸ್, ಬದೋನಿ ಯಂತಹ ಬ್ಯಾಟರ್ಗಳಿದ್ದಾರೆ. ಬದೋನಿ, ಹೂಡ ಕಡೆಯಿಂದ ಅತ್ಯುತ್ತಮ ಆಟ ಮೂಡಿಬಂದಿದೆ ಎಂದು ರಾಹುಲ್ ಹೇಳಿದ್ದಾರೆ.
6 / 9
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಲಖನೌ ಆರಂಭದಲ್ಲೇ ಕೆಎಲ್ ರಾಹುಲ್ (12) ವಿಕೆಟ್ ಕಳೆದುಕೊಂಡರೂ ಖೈಲ್ ಮೇಯರ್ಸ್ (54) ಮತ್ತು ಆಯುಷ್ ಬದೋನಿ (43) ಸ್ಫೋಟಕ ಆಟವಾಡಿದರು. 6 ಓವರ್ ಆಗುವ ಹೊತ್ತಿಗೆ ತಂಡದ ಮೊತ್ತವನ್ನು 70ರ ಗಡಿ ದಾಟಿಸಿದರು.
7 / 9
ನಂತರ ಶುರುವಾಗಿದ್ದು ಮಾರ್ಕಸ್ ಸ್ಟೋಯಿನಿಸ್ ಮತ್ತು ನಿಕೋಲಸ್ ಪೂರನ್ ಆಟ. ಮನಬಂದಂತೆ ಬ್ಯಾಟ್ ಬೀಸಿದ ಇವರಿಬ್ಬರು ಚೆಂಡನ್ನು ಫೋರ್, ಸಿಕ್ಸರ್ಗೆ ಅಟ್ಟಿದರು. ಸ್ಟಾಯಿನಿಸ್ 40 ಎಸೆತಗಳಲ್ಲಿ 72 ರನ್ ಸಿಡಿಸಿದರೆ, ಪೂರನ್ ಕೇವಲ 19 ಎಸೆತಗಳಲ್ಲಿ 45 ರನ್ ಗಳಿಸಿದರು.
8 / 9
ದೀಪಕ್ ಹೂಡ 11 ಹಾಗೂ ಕ್ರುನಾಲ್ ಪಾಂಡ್ಯ 5 ರನ್ ಗಳಿಸಿ ಅಜೇಯರಾಗಿ ಉಳಿದರು. ಲಖನೌ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 257 ಕಲೆಹಾಕಿತು. ಪಂಜಾಬ್ ಪರ ಕಗಿಸೊ ರಬಾಡ 2 ವಿಕೆಟ್ ಪಡೆದರು.
9 / 9
ಟಾರ್ಗೆಟ್ ಬೆನ್ನಟ್ಟಿದ ಪಂಜಾಬ್ 19.5 ಓವರ್ಗಳಲ್ಲಿ 201 ರನ್ಗೆ ಆಲೌಟ್ ಆಯಿತು. ತಂಡದ ಪರ ಅಥರ್ವ ತೈಡೆ 66 ರನ್, ಸಿಖಂದರ್ ರಾಜಾ 36, ಲಿಯಾಮ್ ಲಿವಿಂಗ್ಸ್ಟೋನ್ 23, ಸ್ಯಾಮ್ ಕುರ್ರನ್, ಜಿತೇಶ್ ಶರ್ಮಾ ತಲಾ 24 ರನ್ ಗಳಿಸಿದರು. ಎಲ್ಎಸ್ಜಿ ಪರ ಯಶ್ ಥಾಕೂರ್ 4 ಹಾಗೂ ನವೀನ್ ಉಲ್ ಹಖ್ 3 ವಿಕೆಟ್ ಪಡೆದರು.