
ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಕೆಎಲ್ ರಾಹುಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ ಶತಕ ಬಾರಿಸಿದರು. ಕೇವಲ 80 ಎಸೆತಗಳಲ್ಲಿ ಶತಕ ಪೂರೈಸಿದ ರಾಹುಲ್ಗೆ ಇದು ಏಕದಿನ ಕ್ರಿಕೆಟ್‌ನಲ್ಲಿ 9 ನೇ ಶತಕವಾಗಿದೆ. ರಾಹುಲ್ ಅವರ ಶತಕದ ನೆರವಿನಿಂದ ಮೊದಲು ಬ್ಯಾಟಿಂಗ್ ಮಾಡಿದ ಭಾರತ 351 ರನ್ ಕಲೆಹಾಕಿತು(PC-BCCI x).
80 ಎಸೆತಗಳಲ್ಲಿ ಶತಕ ಬಾರಿಸಿದ ರಾಹುಲ್ಗೆ ಇದು ಅವರ ಏಕದಿನ ಕ್ರಿಕೆಟ್‌ನಲ್ಲಿ ಎರಡನೇ ಅತ್ಯಂತ ವೇಗದ ಶತಕವಾಗಿದೆ. 2023 ರ ವಿಶ್ವಕಪ್‌ನಲ್ಲಿ ಬೆಂಗಳೂರಿನಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ಅವರು ಕೇವಲ 62 ಎಸೆತಗಳಲ್ಲಿ ಶತಕ ಬಾರಿಸಿದ್ದರು(PC-BCCI x).
ಈ ಪಂದ್ಯದಲ್ಲಿ ರಾಹುಲ್ 10 ಬೌಂಡರಿ ಮತ್ತು 6 ಸಿಕ್ಸರ್‌ಗಳ ಸಹಿತ 129 ರನ್ ಬಾರಿಸಿದರು. ಇದು ಏಕದಿನ ಕ್ರಿಕೆಟ್‌ನಲ್ಲಿ ರಾಹುಲ್ ಅವರ ಅತ್ಯಧಿಕ ಸ್ಕೋರ್ ಆಗಿದೆ. ಈ ಶತಕದೊಂದಿಗೆ ರಾಹುಲ್ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ 10,000 ರನ್‌ಗಳನ್ನು ಸಹ ಪೂರ್ಣಗೊಳಿಸಿದರು(PC-BCCI x).
2014 ರಲ್ಲಿ ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನವನ್ನು ಪ್ರಾರಂಭಿಸಿದ ರಾಹುಲ್ ಭಾರತದ ಪರ 10,000 ಅಂತರರಾಷ್ಟ್ರೀಯ ರನ್ ಕಲೆಹಾಕಿದ 15 ನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 243 ಪಂದ್ಯಗಳ 281 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ಸಾಧಿಸಿರುವ ರಾಹುಲ್ ಒಟ್ಟು 23 ಶತಕಗಳನ್ನು ಬಾರಿಸಿದ್ದಾರೆ(PC-BCCI x).
ಇನ್ನು ಈ ಪಂದ್ಯದಲ್ಲಿ ರಾಹುಲ್ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಾಗ, ಭಾರತ 141 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಪಂದ್ಯದಲ್ಲಿ ಇನ್ನೂ 25 ಓವರ್‌ಗಳು ಬಾಕಿ ಇರುವಾಗ ಬುದ್ಧಿವಂತಿಕೆಯಿಂದ ಆಟವಾಡಲು ಪ್ರಾರಂಭಿಸಿದ ರಾಹುಲ್ ಕೊನೆಯ 5 ಓವರ್‌ಗಳಲ್ಲಿ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿ ಸ್ಕೋರ್ ಅನ್ನು 350 ರ ಗಡಿ ದಾಟಿಸಿದರು(PC-BCCI x).