Maharaja Trophy 2024: ಸಿಕ್ಸ್ ಸಿಡಿಸಿಯೇ ಹೊಸ ದಾಖಲೆ ಬರೆದ ಎಲ್ಆರ್ ಚೇತನ್
Maharaja Trophy 2024: ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಕರ್ನಾಟಕದ ಯುವ ದಾಂಡಿಗ ಚೇತನ್ ರೇವಣ್ಣ ಅವರ ಸಿಡಿಲಬ್ಬರ ಮುಂದುವರೆದಿದೆ. ಕೇವಲ ಮೂರು ಸೀಸನ್ಗಳ ಮೂಲಕವೇ ಎಲ್ಆರ್ಸಿ 50 ಸಿಕ್ಸ್ಗಳನ್ನು ಸಿಡಿಸಿ ಕರ್ನಾಟಕ ಟಿ20 ಲೀಗ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಈ ಬಾರಿಯ ಐಪಿಎಲ್ಗೂ ಎಂಟ್ರಿ ಕೊಡುವ ವಿಶ್ವಾಸದಲ್ಲಿದ್ದಾರೆ.
1 / 5
ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಸಿಕ್ಸ್ ಸಿಡಿಸಿಯೇ ಯುವ ಸ್ಟೋಟಕ ದಾಂಡಿಗ ಎಲ್ಆರ್ ಚೇತನ್ ಹೊಸ ದಾಖಲೆ ನಿರ್ಮಿಸಿದ್ದಾರೆ. ಅದು ಸಹ 24 ಪಂದ್ಯಗಳ ಮೂಲಕ ಎಂಬುದು ವಿಶೇಷ. ಅಂದರೆ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ 50 ಸಿಕ್ಸ್ಗಳನ್ನು ಬಾರಿಸಿದ ಮೊದಲ ಬ್ಯಾಟರ್ ಎಂಬ ದಾಖಲೆ ಚೇತನ್ ಪಾಲಾಗಿದೆ.
2 / 5
ಗುಲ್ಬರ್ಗ ಮಿಸ್ಟಿಕ್ಸ್ ಹಾಗೂ ಬೆಂಗಳೂರು ಬ್ಲಾಸ್ಟರ್ಸ್ ಪರ ಒಟ್ಟು 24 ಪಂದ್ಯಗಳನ್ನಾಡಿರುವ ಎಲ್ಆರ್ ಚೇತನ್ ಈವರೆಗೆ 50 ಸಿಕ್ಸ್ಗಳನ್ನು ಬಾರಿಸಿದ್ದಾರೆ. ಈ ಮೂಲಕ ಕರ್ನಾಟಕ ಟಿ20 ಲೀಗ್ನ ಸಿಕ್ಸರ್ ಸರದಾರರ ಪಟ್ಟಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡದ ಆರಂಭಿಕ ದಾಂಡಿಗ ಅಗ್ರಸ್ಥಾನ ಅಲಂಕರಿಸಿದ್ದಾರೆ.
3 / 5
ಮಹಾರಾಜ ಟಿ20 ಟೂರ್ನಿಯ ಸೀಸನ್-1 ರಲ್ಲಿ ಒಟ್ಟು 26 ಸಿಕ್ಸ್ಗಳನ್ನು ಬಾರಿಸಿದ್ದ ಎಲ್ಆರ್ ಚೇತನ್, 2023 ರಲ್ಲಿ 19 ಸಿಕ್ಸ್ಗಳನ್ನು ಸಿಡಿಸಿದ್ದರು. ಇನ್ನು ಬಾರಿಯ ಟೂರ್ನಿಯ ಮೊದಲೆರಡು ಪಂದ್ಯಗಳಲ್ಲೇ 5 ಸಿಕ್ಸ್ಗಳನ್ನು ಸಿಡಿಸಿ ಅಬ್ಬರಿಸಿದ್ದಾರೆ. ಈ ಮೂಲಕ ಮಹಾರಾಜ ಟಿ20 ಟೂರ್ನಿಯ ಸಿಕ್ಸರ್ ಕಿಂಗ್ ಎನಿಸಿಕೊಂಡಿದ್ದಾರೆ.
4 / 5
ಹಾಗೆಯೇ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ 700+ ರನ್ ಕಲೆಹಾಕಿದ ಬ್ಯಾಟರ್ಗಳ ಪಟ್ಟಿಯಲ್ಲೂ ಯುವ ದಾಂಡಿಗ ಕಾಣಿಸಿಕೊಂಡಿದ್ದಾರೆ. 2022 ರ ಸೀಸನ್ನಲ್ಲಿ 11 ಪಂದ್ಯಗಳಿಂದ ಚೇತನ್ ಒಟ್ಟು 447 ರನ್ ಕಲೆಹಾಕಿದ್ದರು. ಇನ್ನು 2023ರ ಸೀಸನ್ನಲ್ಲಿ 11 ಪಂದ್ಯಗಳಿಂದ 309 ರನ್ ಬಾರಿಸಿದ್ದಾರೆ. ಹಾಗೆಯೇ ಈ ಬಾರಿ ಬೆಂಗಳೂರು ಬ್ಲಾಸ್ಟರ್ಸ್ ಪರ ಆಡುತ್ತಿರುವ ಚೇತನ್ ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ.
5 / 5
ದೇಶೀಯ ಅಂಗಳದಲ್ಲಿ ಸ್ಪೋಟಕ ಬ್ಯಾಟಿಂಗ್ನೊಂದಿಗೆ ಸಂಚಲನ ಸೃಷ್ಟಿಸಿರುವ 24 ವರ್ಷದ ಎಲ್ಆರ್ ಚೇತನ್ ಅವರಿಗೆ ಈವರೆಗೆ ಐಪಿಎಲ್ನಲ್ಲಿ ಚಾನ್ಸ್ ಸಿಕ್ಕಿಲ್ಲ ಎಂಬುದೇ ಅಚ್ಚರಿ. ಅದರಲ್ಲೂ ಕಳೆದ ಎರಡು ಸೀಸನ್ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರೂ ಯುವ ದಾಂಡಿಗನ ಖರೀದಿಗೆ ಆರ್ಸಿಬಿ ಆಸಕ್ತಿವಹಿಸಿರಲಿಲ್ಲ. ಇದೀಗ ಸಿಕ್ಸರ್ಗಳ ಮೂಲಕವೇ ಗಮನ ಸೆಳೆದಿರುವ ಎಲ್ಆರ್ ಚೇತನ್ ಈ ಬಾರಿಯ ಮೆಗಾ ಹರಾಜಿನ ಮೂಲಕ ಐಪಿಎಲ್ಗೆ ಎಂಟ್ರಿ ಕೊಡುವ ವಿಶ್ವಾಸದಲ್ಲಿದ್ದಾರೆ.