ಗ್ಲೆನ್ ಮ್ಯಾಕ್ಸ್​ವೆಲ್​ಗೆ ಒಲಿದ ಚಾಂಪಿಯನ್ ತಂಡದ ನಾಯಕತ್ವ

Updated on: Jun 12, 2025 | 12:04 PM

MLC 2025: ಮೇಜರ್ ಲೀಗ್ ಕ್ರಿಕೆಟ್ ಟಿ20 ಟೂರ್ನಿಯ ಮೂರನೇ ಆವೃತ್ತಿಯ ಆರಂಭಕ್ಕೆ ಕೌಂಟ್ ಡೌನ್ ಶುರುವಾಗಿದೆ. ಆರು ತಂಡಗಳ ನಡುವಣ ಈ ಟೂರ್ನಿಯಲ್ಲಿ ಕಳೆದ ಬಾರಿ ವಾಷಿಂಗ್ಟನ್ ಫ್ರೀಡಂ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಆದರೆ ಈ ಬಾರಿ ಫ್ರೀಡಂ ಪಡೆ ಗ್ಲೆನ್ ಮ್ಯಾಕ್ಸ್​ವೆಲ್ ಮುಂದಾಳತ್ವದಲ್ಲಿ ಕಣಕ್ಕಿಳಿಯಲಿರುವುದು ವಿಶೇಷ.

1 / 5
ಜೂನ್ 13 ರಿಂದ ಶುರುವಾಗಲಿರುವ ಮೇಜರ್ ಲೀಗ್ ಕ್ರಿಕೆಟ್ (MLC 2025) ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ವಾಷಿಂಗ್ಟನ್ ಫ್ರೀಡಂ ತಂಡವನ್ನು ಗ್ಲೆನ್ ಮ್ಯಾಕ್ಸ್​ವೆಲ್ (Glenn Maxwell) ಮುನ್ನಡೆಸಲಿದ್ದಾರೆ. ಕಳೆದ ಸೀಸನ್​ನಲ್ಲಿ ವಾಷಿಂಗ್ಟನ್ ಫ್ರೀಡಂ ತಂಡದ ನಾಯಕರಾಗಿ ಸ್ಟೀವ್ ಸ್ಮಿತ್ ಕಾಣಿಸಿಕೊಂಡಿದ್ದರು. ಅಲ್ಲದೆ ಸ್ಮಿತ್ ಮುಂದಾಳತ್ವದಲ್ಲಿ ಫ್ರೀಡಂ ಪಡೆ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿತ್ತು.

ಜೂನ್ 13 ರಿಂದ ಶುರುವಾಗಲಿರುವ ಮೇಜರ್ ಲೀಗ್ ಕ್ರಿಕೆಟ್ (MLC 2025) ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ವಾಷಿಂಗ್ಟನ್ ಫ್ರೀಡಂ ತಂಡವನ್ನು ಗ್ಲೆನ್ ಮ್ಯಾಕ್ಸ್​ವೆಲ್ (Glenn Maxwell) ಮುನ್ನಡೆಸಲಿದ್ದಾರೆ. ಕಳೆದ ಸೀಸನ್​ನಲ್ಲಿ ವಾಷಿಂಗ್ಟನ್ ಫ್ರೀಡಂ ತಂಡದ ನಾಯಕರಾಗಿ ಸ್ಟೀವ್ ಸ್ಮಿತ್ ಕಾಣಿಸಿಕೊಂಡಿದ್ದರು. ಅಲ್ಲದೆ ಸ್ಮಿತ್ ಮುಂದಾಳತ್ವದಲ್ಲಿ ಫ್ರೀಡಂ ಪಡೆ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿತ್ತು.

2 / 5

ಆದರೆ ಈ ಬಾರಿಯ ಟೂರ್ನಿಗೆ ಸ್ಟೀವ್ ಸ್ಮಿತ್ ಅಲಭ್ಯರಾಗುವುದು ಖಚಿತವಾಗಿದೆ. ಆಸ್ಟ್ರೇಲಿಯಾ ಟೆಸ್ಟ್ ತಂಡದ ಭಾಗವಾಗಿರುವ ಸ್ಮಿತ್​ ಮೇಜರ್ ಲೀಗ್ ಟಿ20 ಟೂರ್ನಿಯ 2 ಪಂದ್ಯಗಳಿಗೆ ಮಾತ್ರ ಲಭ್ಯರಿರಲಿದ್ದಾರೆ. ಹೀಗಾಗಿ ವಾಷಿಂಗ್ಟನ್ ಫ್ರೀಡಂ ತಂಡದ ಹಂಗಾಮಿ ನಾಯಕನಾಗಿ ಗ್ಲೆನ್ ಮ್ಯಾಕ್ಸ್​ವೆಲ್ ಅವರನ್ನು ನೇಮಿಸಲಾಗಿದೆ.

3 / 5

ಇದಕ್ಕೂ ಮುನ್ನ ಗ್ಲೆನ್ ಮ್ಯಾಕ್ಸ್​ವೆಲ್ ಬಿಗ್ ಬ್ಯಾಷ್ ಲೀಗ್​ನಲ್ಲಿ ಮೆಲ್ಬೋರ್ನ್​ ಸ್ಟಾರ್ಸ್ ತಂಡವನ್ನು ಮುನ್ನಡೆಸಿದ್ದರು. 65 ಪಂದ್ಯಗಳಲ್ಲಿ ಮೆಲ್ಬೋರ್ನ್​ ತಂಡದ ಸಾರಥ್ಯವಹಿಸಿದ್ದ ಮ್ಯಾಕ್ಸಿ 34 ಪಂದ್ಯಗಳಲ್ಲಿ ಗೆಲುವಿನ ರುಚಿ ನೋಡಿದ್ದರು. ಹಾಗೆಯೇ ಐಪಿಎಲ್​ನಲ್ಲಿ 14 ಪಂದ್ಯಗಳಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿ ಕಾಣಿಸಿಕೊಂಡಿದ್ದರು.

4 / 5

ಇದೀಗ ಮೇಜರ್ ಲೀಗ್ ಕ್ರಿಕೆಟ್ ಟಿ20 ಟೂರ್ನಿಯಲ್ಲೂ ಗ್ಲೆನ್ ಮ್ಯಾಕ್ಸ್​ವೆಲ್​ ಕಪ್ತಾನನಾಗಿ ಹೊಸ ಇನಿಂಗ್ಸ್ ಆರಂಭಿಸಲು ಮುಂದಾಗಿದ್ದಾರೆ. ಈ ಮೂಲಕ ಹಾಲಿ ಚಾಂಪಿಯನ್ ವಾಷಿಂಗ್ಟನ್ ಫ್ರೀಡಂ ತಂಡದ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳಲಿದ್ದಾರಾ ಕಾದು ನೋಡಬೇಕಿದೆ.

5 / 5

ವಾಷಿಂಗ್ಟನ್ ಫ್ರೀಡಂ ತಂಡ: ಗ್ಲೆನ್ ಮ್ಯಾಕ್ಸ್‌ವೆಲ್ (ನಾಯಕ), ಸ್ಟೀವ್ ಸ್ಮಿತ್, ಮಾರ್ಕ್ ಚಾಪ್‌ಮನ್, ಮುಖ್ತಾರ್ ಅಹ್ಮದ್, ಜ್ಯಾಕ್ ಎಡ್ವರ್ಡ್ಸ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಓವನ್, ಅಭಿಷೇಕ್ ಪರಾಡ್ಕರ್, ಒಬುಸ್ ಪಿನಾರ್, ಇಯಾನ್ ಹಾಲೆಂಡ್, ಜಸ್ಟಿನ್ ಡಿಲ್, ಆಂಡ್ರೀಸ್ ಗೌಸ್, ಲಹಿರು ಮಿಲಂತ, ಸೌರಭ್ ನೆತ್ರವಾಲ್ಕರ್, ಅಮಿಲ ಅಪೊನ್ಸೊ, ಯಾಸಿರ್ ಮೊಹಮ್ಮದ್, ಲಾಕಿ ಫರ್ಗುಸನ್, ಜೇಸನ್ ಬೆನ್ರೆಂಡಾರ್ಫ್, ಬೆನ್ ಸಿಯರ್ಸ್.

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us