Mohammad Rizwan: ಅರ್ಧಶತಕ ಬಾರಿಸಿ ಅತ್ಯಂತ ಕೆಟ್ಟ ದಾಖಲೆ ಬರೆದ ರಿಝ್ವಾನ್

Updated on: Jun 12, 2024 | 9:24 AM

T20 World Cup 2024: ಕೆನಾಡ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ್ ತಂಡ ಜಯ ಸಾಧಿಸಿದೆ. ನ್ಯೂಯಾರ್ಕ್​ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆನಢಾ ತಂಡ 106 ರನ್​ ಕಲೆಹಾಕಿತ್ತು. ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ಪರ ಮುಹಮ್ಮದ್ ರಿಝ್ವಾನ್ ಅರ್ಧಶತಕ ಬಾರಿಸಿದ್ದರು. ಈ ಹಾಫ್ ಸೆಂಚುರಿ ನೆರವಿನಿಂದ ಪಾಕಿಸ್ತಾನ್ ತಂಡವು 17.3 ಓವರ್​ಗಳಲ್ಲಿ ಗುರಿ ತಲುಪಿ, 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

1 / 5
T20 World Cup 2024: ಟಿ20 ವಿಶ್ವಕಪ್​ನ 22ನೇ ಪಂದ್ಯದಲ್ಲಿ ಕೆನಡಾ ವಿರುದ್ಧ ಪಾಕಿಸ್ತಾನ್ ತಂಡದ ಆರಂಭಿಕ ಆಟಗಾರ ಮುಹಮ್ಮದ್ ರಿಝ್ವಾನ್ (Mohammad Rizwan) ಅರ್ಧಶತಕ ಬಾರಿಸಿದ್ದರು. ವಿಶೇಷ ಎಂದರೆ ಈ ಅರ್ಧಶತಕದೊಂದಿಗೆ ಟಿ20 ವಿಶ್ವಕಪ್​ನ ಅತ್ಯಂತ ಕೆಟ್ಟ ದಾಖಲೆಯೊಂದನ್ನು ರಿಝ್ವಾನ್ ತಮ್ಮದಾಗಿಸಿಕೊಂಡಿದ್ದಾರೆ.

T20 World Cup 2024: ಟಿ20 ವಿಶ್ವಕಪ್​ನ 22ನೇ ಪಂದ್ಯದಲ್ಲಿ ಕೆನಡಾ ವಿರುದ್ಧ ಪಾಕಿಸ್ತಾನ್ ತಂಡದ ಆರಂಭಿಕ ಆಟಗಾರ ಮುಹಮ್ಮದ್ ರಿಝ್ವಾನ್ (Mohammad Rizwan) ಅರ್ಧಶತಕ ಬಾರಿಸಿದ್ದರು. ವಿಶೇಷ ಎಂದರೆ ಈ ಅರ್ಧಶತಕದೊಂದಿಗೆ ಟಿ20 ವಿಶ್ವಕಪ್​ನ ಅತ್ಯಂತ ಕೆಟ್ಟ ದಾಖಲೆಯೊಂದನ್ನು ರಿಝ್ವಾನ್ ತಮ್ಮದಾಗಿಸಿಕೊಂಡಿದ್ದಾರೆ.

2 / 5

ನ್ಯೂಯಾರ್ಕ್​ನ ನಸ್ಸೌ ಕೌಂಟಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆನಡಾ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 106 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ಪರ ಮುಹಮ್ಮದ್ ರಿಝ್ವಾನ್ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದರು.

3 / 5

ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದ್ದ ಮುಹಮ್ಮದ್ ರಿಝ್ವಾನ್ ಅರ್ಧಶತಕ ಪೂರೈಸಲು ಬರೋಬ್ಬರಿ 52 ಎಸೆತಗಳನ್ನು ತೆಗೆದುಕೊಂಡಿದ್ದರು. ಇದರೊಂದಿಗೆ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತ್ಯಂತ ನಿಧಾನವಾಗಿ ಹಾಫ್ ಸೆಂಚುರಿ ಸಿಡಿಸಿದ ಬ್ಯಾಟರ್ ಎಂಬ ಕಳಪೆ ದಾಖಲೆ ರಿಝ್ವಾನ್ ಪಾಲಾಯಿತು.

4 / 5

ಇದಕ್ಕೂ ಮುನ್ನ ಈ ಕೆಟ್ಟ ದಾಖಲೆ ಸೌತ್ ಆಫ್ರಿಕಾದ ಡೇವಿಡ್ ಮಿಲ್ಲರ್ ಹೆಸರಿನಲ್ಲಿತ್ತು. 2024ರ ಟಿ20 ವಿಶ್ವಕಪ್​ನಲ್ಲಿ ನೆದರ್​ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಮಿಲ್ಲರ್ 50 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಈ ಅನಗತ್ಯ ದಾಖಲೆ ಬರೆದಿದ್ದರು.

5 / 5

ಇದೀಗ ಕೆನಡಾ ವಿರುದ್ಧ ನಿಧಾನಗತಿಯ ಬ್ಯಾಟಿಂಗ್​ನೊಂದಿಗೆ ಮುಹಮ್ಮದ್ ರಿಝ್ವಾನ್ 52 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದಾರೆ. ಈ ಮೂಲಕ ಟಿ20 ವಿಶ್ವಕಪ್​ ಇತಿಹಾಸದಲ್ಲಿ ಹಾಫ್ ಸೆಂಚುರಿ ಸಿಡಿಸಲು ಅತೀ ಹೆಚ್ಚು ಎಸೆತಗಳನ್ನು ತೆಗೆದುಕೊಂಡ ಬ್ಯಾಟರ್ ಎಂಬ ಕಳಪೆ ದಾಖಲೆ ಬರೆದಿದ್ದಾರೆ.

Loading...
Unable to load recommendations.
Follow Us