ಟಿ20 ಪಂದ್ಯದಲ್ಲಿ ಟೆಸ್ಟ್ ಆಡಿ ಅಚ್ಚರಿಯ ದಾಖಲೆ ಬರೆದ ಮೊಹಮ್ಮದ್ ರಿಝ್ವಾನ್

Updated on: Dec 11, 2024 | 7:53 AM

Mohammed Rizwan: ಟಿ20 ಕ್ರಿಕೆಟ್ ಅಂದ್ರೆನೇ ಹೊಡಿಬಡಿ ಆಟ. ಆದರೆ ಈ ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸಿ ಪಾಕಿಸ್ತಾನ್ ತಂಡದ ನಾಯಕ ಮೊಹಮ್ಮದ್ ರಿಝ್ವಾನ್ ಅತ್ಯಂತ ಕಳಪೆ ದಾಖಲೆ ಬರೆದಿದ್ದಾರೆ. ಅದು ಕೂಡ ಪಾಕಿಸ್ತಾನ್ ತಂಡದ ಮಾಜಿ ನಾಯಕ ಬಾಬರ್ ಆಝಂ ಹೆಸರಿನಲ್ಲಿದ್ದ ಹೀನಾಯ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.

1 / 8
ಡರ್ಬನ್​ನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಪಾಕಿಸ್ತಾನ್ ತಂಡದ ನಾಯಕ ಮೊಹಮ್ಮದ್ ರಿಝ್ವಾನ್ ಅನಗತ್ಯ ದಾಖಲೆಯೊಂದು ಬರೆದಿದ್ದಾರೆ. ಅದು ಕೂಡ 74 ರನ್ ಬಾರಿಸಿ ಎಂಬುದೇ ಅಚ್ಚರಿ.

ಡರ್ಬನ್​ನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಪಾಕಿಸ್ತಾನ್ ತಂಡದ ನಾಯಕ ಮೊಹಮ್ಮದ್ ರಿಝ್ವಾನ್ ಅನಗತ್ಯ ದಾಖಲೆಯೊಂದು ಬರೆದಿದ್ದಾರೆ. ಅದು ಕೂಡ 74 ರನ್ ಬಾರಿಸಿ ಎಂಬುದೇ ಅಚ್ಚರಿ.

2 / 8

ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡದ ನಾಯಕ ಹೆನ್ರಿಕ್ ಕ್ಲಾಸೆನ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 183 ರನ್ ಕಲೆಹಾಕಿತು.

3 / 8

ಈ ಗುರಿಯನ್ನು ಬೆನ್ನತ್ತಿದ ಪಾಕ್ ತಂಡವು ಉತ್ತಮ ಆರಂಭ ಪಡೆಯಲಿಲ್ಲ. ಆರಂಭಿಕನಾಗಿ ಕಣಕ್ಕಿಳಿದ ಬಾಬರ್ ಆಝಂ (0) ಶೂನ್ಯಕ್ಕೆ ಔಟಾದರು. ಈ ಆರಂಭಿಕ ಆಘಾತವನ್ನು ತಪ್ಪಿಸಲು ಮೊಹಮ್ಮದ್ ರಿಝ್ವಾನ್ ಎಚ್ಚರಿಕೆಯ ಬ್ಯಾಟಿಂಗ್​​ನ ಮೊರೆ ಹೋದರು.

4 / 8

ಈ ಎಚ್ಚರಿಕೆಯೊಂದಿಗೆ ಸೌತ್ ಆಫ್ರಿಕಾ ವೇಗಿಗಳ ಮಾರಕ ದಾಳಿ ಮುಂದೆ ಸೆಟೆದು ನಿಂತ ರಿಝ್ವಾನ್ ರನ್ ಗಳಿಸಲು ಮರೆತರು. ಪರಿಣಾಮ ಪವರ್ ಪ್ಲೇನಲ್ಲಿ 19 ಎಸೆತಗಳನ್ನು ಎದುರಿಸಿ ಕಲೆಹಾಕಿದ್ದು ಕೇವಲ 15 ರನ್ ಮಾತ್ರ.

5 / 8

ಇನ್ನು ಪವರ್ ಪ್ಲೇ ಬಳಿಕ ಮೊಹಮ್ಮದ್ ರಿಝ್ವಾನ್ ಸಂಪೂರ್ಣ ಪವರ್ ಕಳೆದುಕೊಂಡರು. ಅಲ್ಲದೆ ಪವರ್ ಇಲ್ಲದ ಬ್ಯಾಟಿಂಗ್ ನೊಂದಿಗೆ 50 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಅರ್ಧಶತಕದೊಂದಿಗೆ ಟಿ20 ಕ್ರಿಕೆಟ್​ನ ಅತ್ಯಂತ ಹೀನಾಯ ದಾಖಲೆ ರಿಝ್ವಾನ್ ಪಾಲಾಯಿತು.

6 / 8

ಅಂದರೆ ಬರೋಬ್ಬರಿ 50 ಎಸೆತಗಳಲ್ಲಿ ಅರ್ಧಶತಕ ಪೂರೈಸಿ, ಟಿ20 ಕ್ರಿಕೆಟ್ ಇತಿಹಾಸದಲ್ಲೇ ಹಾಫ್ ಸೆಂಚುರಿ ಸಿಡಿಸಲು ಅತ್ಯಧಿಕ ಎಸೆತಗಳನ್ನು ಎದುರಿಸಿದ ಕ್ಯಾಪ್ಟನ್ ಎನಿಸಿಕೊಂಡರು. ಹಾಗೆಯೇ ಟಿ20 ಪಂದ್ಯದಲ್ಲಿ 2 ಬಾರಿ 50+ ಎಸೆತಗಳನ್ನು ಎದುರಿಸಿ ಅರ್ಧಶತಕ ಬಾರಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ಅಪಖ್ಯಾತಿಗೂ ಒಳಗಾದರು.

7 / 8

ಇದಕ್ಕೂ ಮುನ್ನ ಟಿ20 ವಿಶ್ವಕಪ್ ಪಂದ್ಯದಲ್ಲಿ ಕೆನಡಾ ವಿರುದ್ಧ ರಿಝ್ವಾನ್ 52 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಇದೀಗ ಮತ್ತೊಮ್ಮೆ ಟಿ20 ಪಂದ್ಯದಲ್ಲಿ ಟೆಸ್ಟ್ ಆಡುವ ಮೂಲಕ ಮೊಹಮ್ಮದ್ ರಿಝ್ವಾನ್ ಹೀನಾಯ ದಾಖಲೆಯನ್ನು ತಮ್ನದಾಗಿಸಿಕೊಂಡಿದ್ದಾರೆ.

8 / 8

ಇನ್ನು ಈ ಪಂದ್ಯದಲ್ಲಿ 62 ಎಸೆತಗಳನ್ನು ಎದುರಿಸಿದ ರಿಝ್ವಾನ್ 74 ರನ್ ಬಾರಿಸಿ ಔಟಾದರು. ಈ ನಿಧಾನಗತಿಯ ಬ್ಯಾಟಿಂಗ್ ಪರಿಣಾಮ ಪಾಕಿಸ್ತಾನ್ ತಂಡವು 20 ಓವರ್‌ಗಳಲ್ಲಿ 172 ರನ್ ಗಳಿಸಲಷ್ಟೇ ಶಕ್ತರಾದರು. ಇದರ ಸಂಪೂರ್ಣ ಲಾಭ ಪಡೆದ ಸೌತ್ ಆಫ್ರಿಕಾ ತಂಡವು 11 ರನ್​್ಗಳ ರೋಚಕ ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು.

Loading...
Unable to load recommendations.
Follow Us