Mohammed Shami: ಟೀಂ ಇಂಡಿಯಾಕ್ಕೆ ಮರಳುವ ಮುನ್ನ..; ಫಾರ್ಮ್​ ಕಂಡುಕೊಳ್ಳಲು ಶಮಿ ಮಸ್ತ್ ಪ್ಲಾನ್!

|

Updated on: Aug 03, 2024 | 9:01 PM

Mohammed Shami: ಪ್ರಸ್ತುತ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಶ್ರಮಿಸುತ್ತಿರುವ ಶಮಿ ಯಾವಾಗ ಟೀಂ ಇಂಡಿಯಾಗೆ ಮರಳುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಏತನ್ಮಧ್ಯೆ, ಮೊಹಮ್ಮದ್ ಶಮಿ ರಾಷ್ಟ್ರೀಯ ತಂಡಕ್ಕೆ ಮರಳುವ ಮೊದಲ ನಾನು ದೇಶೀಯ ಕ್ರಿಕೆಟ್‌ನಲ್ಲಿ ಬಂಗಾಳದ ತಂಡದ ಪರ ಆಡುವುದಾಗಿ ಘೋಷಿಸಿದ್ದಾರೆ.

1 / 5
2023 ರ ವಿಶ್ವಕಪ್​ನಲ್ಲಿ ಇಂಜುರಿಗೊಂಡು ಟೀಂ ಇಂಡಿಯಾದಿಂದ ಹೊರಗುಳಿದಿರುವ ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಸದ್ಯ ರಾಷ್ಟ್ರೀಯ ತಂಡಕ್ಕೆ ಮರಳುವ ಸನಿಹದಲಿದ್ದಾರೆ. ಏಕದಿನ ವಿಶ್ವಕಪ್ ವೇಳೆ ಕಾಲಿನ ಗಾಯಕ್ಕೆ ತುತ್ತಾಗಿದ್ದ ಶಮಿ, 2024 ರ ಫೆಬ್ರವರಿಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

2 / 5
ಪ್ರಸ್ತುತ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಶ್ರಮಿಸುತ್ತಿರುವ ಶಮಿ ಯಾವಾಗ ಟೀಂ ಇಂಡಿಯಾಗೆ ಮರಳುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಏತನ್ಮಧ್ಯೆ, ಮೊಹಮ್ಮದ್ ಶಮಿ ರಾಷ್ಟ್ರೀಯ ತಂಡಕ್ಕೆ ಮರಳುವ ಮೊದಲ ನಾನು ದೇಶೀಯ ಕ್ರಿಕೆಟ್‌ನಲ್ಲಿ ಬಂಗಾಳದ ತಂಡದ ಪರ ಆಡುವುದಾಗಿ ಘೋಷಿಸಿದ್ದಾರೆ.

3 / 5
ಇತ್ತೀಚೆಗೆ ಮೊಹಮ್ಮದ್ ಶಮಿ ಅವರನ್ನು ಕೋಲ್ಕತ್ತಾದ ಈಸ್ಟ್ ಬೆಂಗಾಲ್ ಕ್ಲಬ್ ಸನ್ಮಾನಿಸಿತ್ತು. ಈ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಶಮಿ, ‘ನಾನು ಯಾವಾಗ ತಂಡಕ್ಕೆ ಮರಳುತ್ತೇನೆ ಎಂದು ಹೇಳುವುದು ಕಷ್ಟ. ನಾನು ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇನೆ ಆದರೆ ನಾನು ಮತ್ತೊಮ್ಮೆ ಟೀಂ ಇಂಡಿಯಾ ಜರ್ಸಿಯನ್ನು ಧರಿಸುವ ಮೊದಲು ನೀವು ನನ್ನನ್ನು ಬಂಗಾಳದ ಜೆರ್ಸಿಯಲ್ಲಿ ಆಡುವುದನ್ನು ನೋಡುತ್ತೀರಿ. ನಾನು ಬಂಗಾಳ ತಂಡದ 2 ರಿಂದ 3 ಪಂದ್ಯಗಳನ್ನು ಆಡಲು ಸಂಪೂರ್ಣ ಸಿದ್ಧನಾಗಿ ಬರುತ್ತೇನೆ ಎಂದಿದ್ದಾರೆ.

4 / 5
ತಮ್ಮ ಗಾಯದ ಬಗ್ಗೆ ಮಾತನಾಡಿದ ಶಮಿ, ‘ಗಾಯವು ಇಷ್ಟು ಗಂಭೀರವಾಗಿದೆ ಎಂದು ನಾನು ಭಾವಿಸಿರಲಿಲ್ಲ. ಟಿ20 ವಿಶ್ವಕಪ್ ನಂತರ ಈ ಗಾಯದ ಬಗ್ಗೆ ಯೋಚಿಸುವುದು ನನ್ನ ಯೋಜನೆಯಾಗಿತ್ತು. ಆದರೆ ಏಕದಿನ ವಿಶ್ವಕಪ್ ಸಮಯದಲ್ಲಿ ಗಾಯವು ಹೆಚ್ಚು ಗಂಭೀರವಾಯಿತು. ಹೀಗಾಗಿ ನಾನು ಈ ಗಾಯವನ್ನು ಲಘುವಾಗಿ ಪರಿಗಣಿಸಲಿಲ್ಲ. ಗಾಯವು ಇಷ್ಟು ತೀವ್ರವಾಗಿರುತ್ತದೆ ಮತ್ತು ವಾಸಿಯಾಗಲು ಇಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ವೈದ್ಯರೂ ಸಹ ಭಾವಿಸಿರಲಿಲ್ಲ ಎಂದು ಶಮಿ ಹೇಳಿದ್ದಾರೆ.

5 / 5
ಮೊಹಮ್ಮದ್ ಶಮಿ ಟೀಂ ಇಂಡಿಯಾ ಪರ ಇದುವರೆಗೆ 64 ಟೆಸ್ಟ್, 101 ಏಕದಿನ ಹಾಗೂ 23 ಟಿ20 ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ 229, ಏಕದಿನದಲ್ಲಿ 195 ಮತ್ತು ಟಿ20ಯಲ್ಲಿ 24 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದೇ ವೇಳೆ ಅವರು 11 ಬಾರಿ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಶಮಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 2 ಅರ್ಧಶತಕ ಸೇರಿದಂತೆ 970 ರನ್ ಸಿಡಿಸಿದ್ದಾರೆ.

Published On - 8:58 pm, Sat, 3 August 24