ಮೊಹಮ್ಮದ್ ಸಿರಾಜ್, ನಿಖತ್ ಜರೀನ್‌ಗೆ ಡಿಎಸ್ಪಿ ಹುದ್ದೆ..! ತೆಲಂಗಾಣ ಸರ್ಕಾರದ ಮಹತ್ವದ ನಿರ್ಧಾರ
Mohammed Siraj and Nikhat Zareen: ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಭಾಗವಾಗಿದ್ದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಹಾಗೂ ಎರಡು ಬಾರಿಯ ವಿಶ್ವ ಚಾಂಪಿಯನ್ ಬಾಕ್ಸರ್ ನಿಖತ್ ಜರೀನ್ ಅವರಿಗೆ ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಸರ್ಕಾರಿ ಭೂಮಿ ಹಾಗೂ ಸರ್ಕಾರಿ ಉದ್ಯೋಗವನ್ನು ನೀಡುವುದಾಗಿ ಘೋಷಿಸಿದ್ದಾರೆ.
1 / 6
ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಭಾಗವಾಗಿದ್ದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಹಾಗೂ ಎರಡು ಬಾರಿಯ ವಿಶ್ವ ಚಾಂಪಿಯನ್ ಬಾಕ್ಸರ್ ನಿಖತ್ ಜರೀನ್ ಅವರಿಗೆ ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಸರ್ಕಾರಿ ಭೂಮಿ ಹಾಗೂ ಸರ್ಕಾರಿ ಉದ್ಯೋಗವನ್ನು ನೀಡುವುದಾಗಿ ಘೋಷಿಸಿದ್ದಾರೆ.
2 / 6
ಮೊಹಮ್ಮದ್ ಸಿರಾಜ್ ಹಾಗೂ ಬಾಕ್ಸರ್ ನಿಖತ್ ಜರೀನ್ ಅವರಿಗೆ ತೆಲಂಗಾಣ ಸರ್ಕಾರದಿಂದ ಗ್ರೂಪ್-1 ಉದ್ಯೋಗ ಸಿಗಲಿದೆ. ಇದಲ್ಲದೇ ಬಂಜಾರಾ ಹಿಲ್ಸ್ ಅಥವಾ ಜುಬಿಲಿ ಹಿಲ್ಸ್‌ನಂತಹ ಪಾಶ್ ಏರಿಯಾದಲ್ಲಿ ಮನೆ ಕಟ್ಟಲು 600 ಗಜ ಜಾಗ ಕೂಡ ನೀಡಲಾಗುವುದು.
3 / 6
ಮೊಹಮ್ಮದ್ ಸಿರಾಜ್ ಮತ್ತು ಭಾರತದ ಮಹಿಳಾ ಸ್ಟಾರ್ ಬಾಕ್ಸಿಂಗ್ ಆಟಗಾರ್ತಿ ನಿಖತ್ ಜರೀನ್‌ಗೆ ಉದ್ಯೋಗ ಕಲ್ಪಿಸುವ ಮಸೂದೆಯನ್ನು ರಾಜ್ಯ ಸರ್ಕಾರ ಇಂದು ವಿಧಾನಸಭೆಯಲ್ಲಿ ಅಂಗೀಕರಿಸಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ತಿಳಿಸಿದ್ದಾರೆ.
4 / 6
ಸಿರಾಜ್ಗೆ ಗ್ರೂಪ್-1 ಉದ್ಯೋಗ ನೀಡುವ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ, ಸಿರಾಜ್ ಓದಿದ್ದು ಇಂಟರ್ ಮೀಡಿಯೇಟ್ವರೆಗೆ ಮಾತ್ರ. ಆದರೆ ಅವರ ಸಾಧನೆ ಎಲ್ಲಕ್ಕೂ ಮಿಗಿಲಾಗಿದೆ ಎಂದರು. ಇನ್ನು ನಿಖಿತ್ ಜರೀನ್ ಬಗ್ಗೆ ಮಾತನಾಡಿದ ಸಿಎಂ, ನಿಖತ್‌ಗೆ ಹಿಂದಿನ ಬಿಆರ್‌ಎಸ್ ಸರ್ಕಾರ ಏಕೆ ಕೆಲಸ ನೀಡಲಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
5 / 6
ಗ್ರೂಪ್-1 ಉದ್ಯೋಗ ಎಂದರೆ ಮೊಹಮ್ಮದ್ ಸಿರಾಜ್ ಪೊಲೀಸ್ ಪಡೆಗೆ ಸೇರಲು ನಿರ್ಧರಿಸಿದರೆ, ಅವರು ಡಿಎಸ್ಪಿ ಹುದ್ದೆಗೆ ನೇರ ನೇಮಕಾತಿ ಪಡೆಯುತ್ತಾರೆ. 2024 ರ ಟಿ20 ವಿಶ್ವಕಪ್‌ನಲ್ಲಿ ಭಾರತದ ಮೂರು ಪಂದ್ಯಗಳಲ್ಲಿ ಆಡುವ ಅವಕಾಶವನ್ನು ಸಿರಾಜ್ ಪಡೆದಿದ್ದರು. ಆದರೆ ವಿಂಡೀಸ್ನಲ್ಲಿ ಪಿಚ್ನಿಂದಾಗಿ ಅವರಿಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಆಡುವ ಅವಕಾಶ ಸಿಗಲಿಲ್ಲ.
6 / 6
ಸದ್ಯ ಮೊಹಮ್ಮದ್ ಸಿರಾಜ್ ಟೀಂ ಇಂಡಿಯಾ ಜೊತೆ ಶ್ರೀಲಂಕಾ ಪ್ರವಾಸದಲ್ಲಿದ್ದಾರೆ. ಅವರು ಇತ್ತೀಚೆಗೆ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಿದ್ದರು. ಇದೀಗ ಏಕದಿನ ಸರಣಿಯಲ್ಲೂ ಅವರು ಆಡುವುದನ್ನು ಕಾಣಬಹುದಾಗಿದೆ. ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಇದುವರೆಗೆ 6 ಏಕದಿನ ಪಂದ್ಯಗಳನ್ನು ಆಡಿದ್ದು 19 ವಿಕೆಟ್ ಪಡೆದಿದ್ದಾರೆ.