Travis Head: ಪವರ್​​ಪ್ಲೇನಲ್ಲಿ ಪವರ್​ಫುಲ್ ದಾಖಲೆ ಬರೆದ ಟ್ರಾವಿಸ್ ಹೆಡ್

|

Updated on: Sep 17, 2024 | 11:03 AM

Travis Head: 2024 ರಲ್ಲಿ ಆಸ್ಟ್ರೇಲಿಯಾ, ಸನ್​ರೈಸರ್ಸ್ ಹೈದರಾಬಾದ್ ಮತ್ತು ವಾಷಿಂಗ್ಟನ್ ಫ್ರೀಡಮ್ ತಂಡಗಳ ಪರ ಇನಿಂಗ್ಸ್ ಆರಂಭಿಸಿರುವ ಟ್ರಾವಿಸ್ ಹೆಡ್ ಇದೀಗ ಹೊಸ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಪವರ್​ಪ್ಲೇನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ 1000+ ರನ್​ ಕಲೆಹಾಕುವ ಮೂಲಕ ಎಂಬುದೇ ವಿಶೇಷ.

1 / 5
ಟಿ20 ಕ್ರಿಕೆಟ್​ನಲ್ಲಿ ಆಸ್ಟ್ರೇಲಿಯಾ ದಾಂಡಿಗ ಟ್ರಾವಿಸ್ ಹೆಡ್ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಸಹ ಚುಟುಕು ಕ್ರಿಕೆಟ್​ನ ಪವರ್​ಪ್ಲೇನಲ್ಲಿ ಪವರ್​ಫುಲ್ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಎಂಬುದು ವಿಶೇಷ. ಅಂದರೆ 2024 ರಲ್ಲಿ ಟಿ20 ಕ್ರಿಕೆಟ್​ನ ಮೊದಲ 6 ಓವರ್​ಗಳಲ್ಲಿ ಅತ್ಯಧಿಕ ರನ್ ಬಾರಿಸಿದ ಬ್ಯಾಟರ್ ಎಂಬ ದಾಖಲೆ ಹೆಡ್ ಪಾಲಾಗಿದೆ.

2 / 5
ಟ್ರಾವಿಸ್ ಹೆಡ್ 2024 ರಲ್ಲಿ ಈವರೆಗೆ 38 ಟಿ20 ಇನಿಂಗ್ಸ್ ಆಡಿದ್ದಾರೆ. ಈ ವೇಳೆ ಪವರ್​ಪ್ಲೇನಲ್ಲೇ 1027 ರನ್ ಕಲೆಹಾಕಿದ್ದಾರೆ. ಈ ಮೂಲಕ ಈ ವರ್ಷ ಟಿ20 ಕ್ರಿಕೆಟ್​ನಲ್ಲಿ ಪವರ್​ಪ್ಲೇನಲ್ಲಿ ಸಾವಿರ ರನ್ ಪೂರೈಸಿದ ಮೊದಲ ಬ್ಯಾಟರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

3 / 5
ಇನ್ನು ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವುದು ಇಂಗ್ಲೆಂಡ್​ ತಂಡದ ಆರಂಭಿಕ ದಾಂಡಿಗ ಫಿಲ್ ಸಾಲ್ಟ್. ಈ ವರ್ಷ 44 ಟಿ20 ಇನಿಂಗ್ಸ್ ಆಡಿರುವ ಸಾಲ್ಟ್ ಪವರ್​ಪ್ಲೇನಲ್ಲಿ ಒಟ್ಟು 827 ರನ್ ಕಲೆಹಾಕಿದ್ದಾರೆ.

4 / 5
ಹಾಗೆಯೇ ಮೂರನೇ ಸ್ಥಾನದಲ್ಲಿರುವುದು ಸೌತ್ ಆಫ್ರಿಕಾ ಕ್ರಿಕೆಟಿಗ ಫಾಫ್ ಡುಪ್ಲೆಸಿಸ್. ಆರ್​ಸಿಬಿ ನಾಯಕ ಈ ವರ್ಷ 38 ಟಿ20 ಇನಿಂಗ್ಸ್ ಆಡಿದ್ದು, ಈ ವೇಳೆ ಪವರ್​ಪ್ಲೇನಲ್ಲಿ ಒಟ್ಟು 807 ರನ್​ ಕಲೆಹಾಕಿದ್ದಾರೆ.

5 / 5
ಇನ್ನು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಪವರ್​ಪ್ಲೇನಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಶ್ವ ದಾಖಲೆ ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ಹೆಸರಿನಲ್ಲಿದೆ. ಹಿಟ್​ಮ್ಯಾನ್ ಪವರ್​ಪ್ಲೇನಲ್ಲಿ ಒಟ್ಟು 2141 ರನ್ ಕಲೆಹಾಕಿ ಈ ಭರ್ಜರಿ ದಾಖಲೆ ನಿರ್ಮಿಸಿದ್ದಾರೆ.