ನಾಳೆ ವಾಂಖೆಡೆ ಸ್ಟೇಡಿಯಂನಲ್ಲಿ ಸಚಿನ್ ತೆಂಡೂಲ್ಕರ್ ಪ್ರತಿಮೆ ಅನಾವರಣ

|

Updated on: Oct 31, 2023 | 3:00 PM

Sachin Tendulkar statue: ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಜೀವನಗಾಥೆಯನ್ನು ಹೇಳುವ ಪ್ರತಿಮೆಯನ್ನು ​ಭಾರತ- ಶ್ರೀಲಂಕಾ ನಡುವಿನ ವಿಶ್ವಕಪ್ ಪಂದ್ಯದ ಹಿಂದಿನದಂದು ಅನಾವರಣ ಮಾಡುತ್ತಿದೆ. 'ಭಾರತ ರತ್ನ' ಸಚಿನ್ ತೆಂಡೂಲ್ಕರ್ ಅವರು ಅನಾವರಣ ಕಾರ್ಯಕ್ರಮಕ್ಕೆ ಸ್ವತಃ ಹಾಜರಿರಲಿದ್ದಾರೆ.

1 / 6
ಕ್ರಿಕೆಟ್ ದೇವರು ಎಂದೇ ಖ್ಯಾತರಾಗಿರುವ ಸಚಿನ್ ತೆಂಡೂಲ್ಕರ್ ಅವರ ಮುಡಿಗೆ ಮತ್ತೊಂದು ಕಿರೀಟ ದೊರಕಲಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಸಚಿನ್ ತೆಂಡೂಲ್ಕರ್ ಅವರ ಜೀವನಗಾಥೆಯನ್ನು ಹೇಳುವ ಪೂರ್ಣ ಪ್ರಮಾಣದ ಪ್ರತಿಮೆ ನವೆಂಬರ್ 1 ಬುಧವಾರದಂದು ಅನಾವರಣಗೊಳ್ಳಲಿದೆ. ಇದು ಹೊಸ ಆಟಗಾರರಿಗೆ ಸ್ಫೂರ್ತಿ ನೀಡುವ ಪ್ರತಿಮೆಯಾಗಿದೆ.

2 / 6
ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಜೀವನಗಾಥೆಯನ್ನು ಹೇಳುವ ಪ್ರತಿಮೆಯನ್ನು ​ಭಾರತ- ಶ್ರೀಲಂಕಾ ನಡುವಿನ ವಿಶ್ವಕಪ್ ಪಂದ್ಯದ ಹಿಂದಿನದಂದು ಅನಾವರಣ ಮಾಡುತ್ತಿದೆ. 'ಭಾರತ ರತ್ನ' ಸಚಿನ್ ತೆಂಡೂಲ್ಕರ್ ಅವರು ಅನಾವರಣ ಕಾರ್ಯಕ್ರಮಕ್ಕೆ ಸ್ವತಃ ಹಾಜರಿರಲಿದ್ದಾರೆ.

3 / 6
ವಾಂಖೆಡೆಯ 'ಎಂಸಿಎ' ಈ ಕಾರ್ಯಕ್ರಮ ನಡೆಯಲಿದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಸಚಿನ್ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಬಿಸಿಸಿಐ ಕಾರ್ಯದರ್ಶಿ ಜೈ ಶಾ, ಬಿಸಿಸಿಐ ಖಜಾಂಚಿ ಆಶಿಶ್ ಶೇಲಾರ್ ಭಾಗವಹಿಸಲಿದ್ದಾರೆ.

4 / 6
ತೆಂಡೂಲ್ಕರ್ ಅವರ ಪ್ರತಿಮೆ 22 ಅಡಿ ಉದ್ದವಿದ್ದು, ಹೆಸರಾಂತ ಚಿತ್ರಕಲಾವಿದ, ಶಿಲ್ಪಿ ಪ್ರಮೋದ್ ಕಾಳೆ ಅವರು ನಿರ್ಮಿಸಿದ್ದಾರೆ. ಬುಧವಾರದಿಂದ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿರಲಿದೆ. ಉದ್ಘಾಟನಾ ಸಮಾರಂಭದಲ್ಲಿ ಹಲವು ಮಾಜಿ ಕ್ರಿಕೆಟಿಗರು ಕೂಡ ಪಾಲ್ಗೊಳ್ಳುವ ನಿರೀಕ್ಷೆ ಇದೆ.

5 / 6
ಸಚಿನ್ ಪ್ರತಿಯೊಬ್ಬ ಉದಯೋನ್ಮುಖ ಕ್ರಿಕೆಟಿಗನಿಗೆ ಸ್ಫೂರ್ತಿ. ಅವರ 50 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ದೇಶಾದ್ಯಂತ ಮತ್ತು ಇಡೀ ಪ್ರಪಂಚದ ಅಭಿಮಾನಿಗಳಿಗೆ ಸಂದೇಶ ರವಾನಿಸಲು ಬಯಸಿದ್ದೆವು. ಅದರಂತೆ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಇದು ಭವಿಷ್ಯದ ಕ್ರಿಕೆಟ್ ಪೀಳಿಗೆಯನ್ನು ಪ್ರೇರೇಪಿಸುತ್ತದೆ. ಮುಂದೆ ಇದು ಸಚಿನ್ ಮತ್ತು ಮುಂಬೈ ಕ್ರಿಕೆಟ್‌ನ ಪರಂಪರೆಯನ್ನು ಪ್ರತಿನಿಧಿಸುತ್ತದೆ ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ಕಾರ್ಯದರ್ಶಿ ಅಜಿಂಕ್ಯಾ ನಾಯಕ್ ಹೇಳಿದ್ದಾರೆ.

6 / 6
ಸಚಿನ್ ಅವರ ಪ್ರತಿಮೆಯ ಎತ್ತರ 10 ಅಡಿ ಮತ್ತು ಅವರ ಕೈಯಲ್ಲಿ 4 ಅಡಿಯ ಬ್ಯಾಟ್ ಇದೆ. ಅದರ ಮೇಲೆ ಸಚಿನ್ ಅವರ ಪೂರ್ಣ ಹೆಸರನ್ನು ಬರೆಯಲಾಗಿದೆ. ಇಡೀ ಮೂರ್ತಿಯ ಒಟ್ಟು ಎತ್ತರ 22 ಅಡಿ ಇರಲಿದೆ. ಸಚಿನ್ ಸಿಕ್ಸರ್ ಬಾರಿಸುವ ಭಂಗಿಯಲ್ಲಿ ಪ್ರತಿಮೆ ಇದೆ.