ವೆಸ್ಟ್ ಇಂಡೀಸ್​ಗೆ ಗೆಲುವು ತಂದುಕೊಟ್ಟ ನಿಕೋಲಸ್ ಪೂರನ್​ಗೆ ಬಿತ್ತು ಭಾರೀ ದಂಡ

|

Updated on: Aug 08, 2023 | 10:15 AM

Nicholas Pooran, IND vs WI T20I: ಐಸಿಸಿ ಆರ್ಟಿಕಲ್ 2.7ರ ಉಲ್ಲಂಘನೆಗಾಗಿ ನಿಕೋಲಸ್ ಪೂರನ್​ಗೆ ಈ ದಂಡನೆ ವಿಧಿಸಲಾಗಿದ್ದು, ಆಟಗಾರರು ಅಥವಾ ಬೆಂಬಲ ಸಿಬ್ಬಂದಿಗಳಿಗೆ ಸಾರ್ವಜನಿಕವಾಗಿ ಟೀಕಿಸಿರುವುದನ್ನು ಈ ಕಾನೂನು ಬಿಂಬಿಸುತ್ತದೆ.

1 / 8
ಭಾರತ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ಕೇವಲ 40 ಎಸೆತಗಳಲ್ಲಿ 6 ಫೋರ್, 4 ಸಿಕ್ಸರ್​ನೊಂದಿಗೆ 67 ರನ್ ಚಚ್ಚಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದು ವೆಸ್ಟ್ ಇಂಡೀಸ್ ತಂಡಕ್ಕೆ ಗೆಲುವು ತಂದುಕೊಟ್ಟ ನಿಕೋಲಸ್ ಪೂರನ್​ಗೆ ಭಾರೀ ದಂಡ ವಿಧಿಸಲಾಗಿದೆ.

2 / 8
ಗಯಾನಾದಲ್ಲಿ ಭಾರತ ವಿರುದ್ಧದ ಎರಡನೇ ಟಿ20 ಸಂದರ್ಭದ ಐಸಿಸಿ ನೀತಿ ಸಂಹಿತೆಯ 1 ನೇ ಹಂತವನ್ನು ಉಲ್ಲಂಘಿಸಿದ್ದಕ್ಕಾಗಿ ವೆಸ್ಟ್ ಇಂಡೀಸ್‌ನ ವಿಕೆಟ್‌ ಕೀಪರ್ ನಿಕೋಲಸ್ ಪೂರನ್‌ಗೆ ಪಂದ್ಯದ ಶುಲ್ಕದ 15 ಪ್ರತಿಶತ ದಂಡ ವಿಧಿಸಲಾಗಿದೆ.

3 / 8
ಐಸಿಸಿ ಆರ್ಟಿಕಲ್ 2.7ರ ಉಲ್ಲಂಘನೆಗಾಗಿ ನಿಕೋಲಸ್ ಪೂರನ್​ಗೆ ಈ ದಂಡನೆ ವಿಧಿಸಲಾಗಿದ್ದು, ಆಟಗಾರರು ಅಥವಾ ಬೆಂಬಲ ಸಿಬ್ಬಂದಿಗಳಿಗೆ ಸಾರ್ವಜನಿಕವಾಗಿ ಟೀಕಿಸಿರುವುದನ್ನು ಈ ಕಾನೂನು ಬಿಂಬಿಸುತ್ತದೆ.

4 / 8
ಪೂರನ್ ಈ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಮತ್ತು ಮ್ಯಾಚ್ ರೆಫರಿ ರಿಚಿ ರಿಚರ್ಡ್ಸನ್ ಪ್ರಸ್ತಾಪಿಸಿದ ವಾಗ್ದಂಡನೆಯ ಅನುಮತಿಯನ್ನು ಒಪ್ಪಿಕೊಂಡ ಪರಿಣಾಮ ಔಪಚಾರಿಕ ವಿಚಾರಣೆಯ ಅಗತ್ಯವಿರಲಿಲ್ಲ. ಇದರ ಜೊತೆಗೆ, ಪೂರನ್ ಅವರ ಈ ನಡತೆಗೆ ಒಂದು ಡಿಮೆರಿಟ್ ಪಾಯಿಂಟ್ ಅನ್ನು ಸೇರಿಸಲಾಗಿದೆ, ಇದು 24 ತಿಂಗಳ ಅವಧಿಯಲ್ಲಿ ಇವರ ಮೊದಲ ಅಪರಾಧವಾಗಿದೆ.

5 / 8
ಭಾರತ ಇನ್ನಿಂಗ್ಸ್‌ನ 4ನೇ ಓವರ್‌ನಲ್ಲಿ ಎಲ್‌ಬಿಡಬ್ಲ್ಯು ನಿರ್ಧಾರವನ್ನು ಪರಿಶೀಲಿಸಿದ ನಂತರ ಈ ಘಟನೆ ಸಂಭವಿಸಿದೆ. ನಿಕೋಲಸ್ ಪೂರನ್ ಇಲ್ಲಿ ತಪ್ಪೆಸಗಿದ್ದು, ಎಲ್ ಬಿಡಬ್ಲ್ಯು ತೀರ್ಪು ನೀಡದ ಅಂಪೈರ್ ಗಳೊಂದಿಗೆ ಅತೃಪ್ತಿ ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ಐಸಿಸಿ ಈ ಕ್ರಮ ಕೈಗೊಂಡಿದೆ.

6 / 8
ಪ್ರತಿ ಪಂದ್ಯವನ್ನು ಸೂಕ್ಷ್ಮವಾಗಿ ಗಮನಿಸುವ ಐಸಿಸಿ ಆಟಗಾರರು ಅಶಿಸ್ತು ತೋರಿದರೆ ದಂಡ ವಿಧಿಸುತ್ತದೆ. ನೀತಿ ಸಂಹಿತೆ ಲೆವೆಲ್ 1 ನಿಯಮವನ್ನು ಉಲ್ಲಂಘಿಸಿದರೆ ಕನಿಷ್ಠ ದಂಡನೆ ರೂಪದಲ್ಲಿ ಪಂದ್ಯದ ಸಂಭಾವನೆಯ ಶೇ.15ವರೆಗೆ ದಂಡ ವಿಧಿಸಬಹುದು. ಇದರಲ್ಲಿ ಗರಿಷ್ಠ ದಂಡದ ಎಂದರೆ ಶೇ.50 ರಷ್ಟು ಮತ್ತು 1 ಅಥವಾ 2 ಡಿಮೆರಿಟ್ ಶಿಕ್ಷೆ ನೀಡಬಹುದು.

7 / 8
ದ್ವಿತೀಯ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಗೆದ್ದ ಪರಿಣಾಮ ಭಾರತ ಸರಣಿ ವಶಪಡಿಸಿಕೊಳ್ಳಬೇಕಾದರೆ ಉಳಿದಿರುವ ಮೂರೂ ಪಂದ್ಯ ಗೆಲ್ಲಲೇ ಬೇಕಿದೆ. ಈ ಪೈಕಿ ಇಂದು ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವೆ ಮೂರನೇ ಟಿ20 ಪಂದ್ಯ ಆಯೋಜಿಸಲಾಗಿದೆ.

8 / 8
ಸತತ ಎರಡು ಪಂದ್ಯಗಳನ್ನು ಸೋತಿರುವ ಟೀಮ್ ಇಂಡಿಯಾ ಸರಣಿ ಕಳೆದುಕೊಳ್ಳುವ ಭೀತಿಯಲ್ಲಿದ್ದು, ಇಂದಿನದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ವೆಸ್ಟ್ ಇಂಡೀಸ್ ಸದ್ಯ ಐದು ಪಂದ್ಯಗಳ ಟಿ20 ಸರಣಿಯಲ್ಲಿ 2-0 ಮುನ್ನಡೆ ಪಡೆದುಕೊಂಡಿದೆ.