ODI World Cup 2023: ಕಿಂಗ್ ಕೊಹ್ಲಿ ಹುಟ್ಟುಹಬ್ಬದ ದಿನವೇ ವಿಶ್ವಕಪ್​ ಪಂದ್ಯ; ಎದುರಾಳಿ ಯಾರು ಗೊತ್ತಾ?

|

Updated on: Jun 28, 2023 | 12:55 PM

Virat Kohli Birthday: ಕೊಹ್ಲಿ ಹುಟ್ಟು ಹಬ್ಬದಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್​ನಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.

1 / 7
ಈ ವರ್ಷ ಭಾರತದಲ್ಲಿ ನಡೆಯಲಿರುವ 2023ರ ವಿಶ್ವಕಪ್‌ನ ವೇಳಾಪಟ್ಟಿಯನ್ನು ಐಸಿಸಿ ಹಂಚಿಕೊಂಡಿದೆ. ಇದರೊಂದಿಗೆ ವಿಶ್ವಕಪ್ ಲೀಗ್ ಹಂತದಲ್ಲಿ ಟೀಂ ಇಂಡಿಯಾ ಆಡಲಿರುವ 9 ಪಂದ್ಯಗಳ ಬಗ್ಗೆಯೂ ಚಿತ್ರಣ ಸ್ಪಷ್ಟವಾಗಿದೆ. ದೇಶದ ವಿವಿಧ ನಗರಗಳಲ್ಲಿ ಭಾರತ 9 ಪಂದ್ಯಗಳನ್ನು ಆಡಲಿದೆ.

2 / 7
ಆದರೆ ನವೆಂಬರ್ 5 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್​ನಲ್ಲಿ ನಡೆಯಲ್ಲಿರುವ ಪಂದ್ಯ ಟೀಂ ಇಂಡಿಯಾ ಅಭಿಮಾನಿಗಳಿಗೆ ಬಹಳ ವಿಶೇಷವಾಗಿದೆ. ಏಕೆಂದರೆ ಅಂದು ಅಂದರೆ ನವೆಂಬರ್ 5 ರಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ 35ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಹೀಗಾಗಿ, ಅಂದು ನಡೆಯುವ ವಿಶ್ವಕಪ್​ ಪಂದ್ಯ ಕೊಹ್ಲಿ ಪಾಲಿಗೆ ಅವಿಸ್ಮರಣೀಯವೆನಿಸಲಿದೆ.

3 / 7
ಕೊಹ್ಲಿ ಹುಟ್ಟು ಹಬ್ಬದಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್​ನಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಇದರೊಂದಿಗೆ ಸತತ ಮೂರನೇ ವರ್ಷ ಐಸಿಸಿ ಈವೆಂಟ್​ವೊಂದರಲ್ಲಿ ಕೊಹ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ.

4 / 7
ಕಳೆದ ವರ್ಷ ಟಿ20 ವಿಶ್ವಕಪ್​ನಲ್ಲಿ ಕೊಹ್ಲಿ ಜನ್ಮದಿನದಂದು ಭಾರತ ತಂಡ ಜಿಂಬಾಬ್ವೆಯನ್ನು ಮೆಲ್ಬೋರ್ನ್ ಮೈದಾನದಲ್ಲಿ ಎದುರಿಸಿತ್ತು. ಅದಕ್ಕೂ ಮೊದಲು 2021 ರ ಟಿ20 ವಿಶ್ವಕಪ್‌ನಲ್ಲಿ ಭಾರತವು ಕೊಹ್ಲಿಯ ಜನ್ಮದಿನದಂದು ಸ್ಕಾಟ್‌ಲ್ಯಾಂಡ್‌ ತಂಡವನ್ನು ಎದುರಿಸಿತ್ತು.

5 / 7
ಅಲ್ಲದೆ ಈ ವಿಶ್ವಕಪ್​ನಲ್ಲಿ ಕಣಕ್ಕಿಳಿಯವುದರೊಂದಿಗೆ ಕೊಹ್ಲಿ, ನವಜೋತ್ ಸಿಂಗ್ ಸಿದ್ದು, ಮೊಹಮ್ಮದ್ ಅಜರುದ್ದೀನ್, ಮನೋಜ್ ಪ್ರಭಾಕರ್ ಮತ್ತು ಸಚಿನ್ ತೆಂಡೂಲ್ಕರ್ ನಂತರ ತವರು ನೆಲದಲ್ಲಿ ಎರಡು ಬಾರಿ ಮಾರ್ಕ್ಯೂ ಈವೆಂಟ್ ಆಡಿದ ಐದನೇ ಭಾರತೀಯ ಎಂಬ ಇತಿಹಾಸವನ್ನು ರಚಿಸಲಿದ್ದಾರೆ. ಈ ಹಿಂದೆ ಕೊಹ್ಲಿ 2011ರ ವಿಶ್ವಕಪ್ ವಿಜೇತ ಭಾರತ ತಂಡದ ಭಾಗವಾಗಿದ್ದರು.

6 / 7
ಇನ್ನು ಈ ಬಾರಿಯ ವಿಶ್ವಕಪ್ ವಿರಾಟ್ ಕೊಹ್ಲಿಗೆ ಬಹಳ ವಿಶೇಷವಾಗಿದ್ದು, ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ವಿರೇಂದ್ರ ಸೆಹ್ವಾಗ್, ವಿರಾಟ್ ಕೊಹ್ಲಿಗಾಗಿ ಟೀಂ ಇಂಡಿಯಾ ಏಕದಿನ ವಿಶ್ವಕಪ್ ಗೆಲ್ಲಬೇಕು ಎಂಬ ಹೇಳಿಕೆಯನ್ನು ವಿಶ್ವಕಪ್ ಆರಂಭಕ್ಕೂ ಮುನ್ನವೇ ನೀಡಿದ್ದಾರೆ. ಹೀಗಾಗಿ ತನ್ನ ಜನ್ಮದಿನದಂದು ಟೀಂ ಇಂಡಿಯಾ ಪರ ಸ್ಮರಣೀಯ ಇನ್ನಿಂಗ್ಸ್ ಆಡುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

7 / 7
ಏತನ್ಮಧ್ಯೆ, ಇದೇ ವಿಶ್ವಕಪ್​​ನಲ್ಲಿ ಪಾಕ್ ನಾಯಕ ಬಾಬರ್ ಆಜಮ್ ಕೂಡ ತಮ್ಮ 29ನೇ ಜನ್ಮದಿನವನ್ನು ಆಚರಿಸಿಕೊಳ್ಳಲಿದ್ದಾರೆ. ವಿಶೇಷವೆಂದರೆ ಅವರ ಜನ್ಮದಿನದಂದೇ (ಅಕ್ಟೋಬರ್ 15) ಪಾಕ್ ತಂಡ ಭಾರತವನ್ನು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಎದುರಿಸಲಿದೆ.