ODI World Cup 2023: ಈ ಮೂರು ಮೈದಾನಗಳಲ್ಲಿ ನಡೆಯುವ ಪಂದ್ಯಗಳೇ ಭಾರತಕ್ಕೆ ಪ್ರಮುಖ ಸವಾಲು..!

Updated on: Jun 29, 2023 | 8:22 AM

ODI World Cup 2023: ವಿಶ್ವಕಪ್ ವೇಳಾಪಟ್ಟಿಯ ಪ್ರಕಾ ಭಾರತ ತಂಡವು ಅಕ್ಟೋಬರ್ 8 ರಿಂದ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಟೀಂ ಇಂಡಿಯಾ ಒಂಬತ್ತು ತಂಡಗಳ ವಿರುದ್ಧ ಒಂಬತ್ತು ವಿವಿಧ ಮೈದಾನಗಳಲ್ಲಿ ಪಂದ್ಯಗಳನ್ನು ಆಡಲಿದೆ.

1 / 12
2011 ರ ನಂತರ ಟೀಂ ಇಂಡಿಯಾ ಮೊದಲ ಬಾರಿಗೆ ತವರಿನಲ್ಲಿ ಏಕದಿನ ವಿಶ್ವಕಪ್ ಆಡಲಿದೆ. ವಿಶ್ವಕಪ್ ವೇಳಾಪಟ್ಟಿಯ ಪ್ರಕಾರ ಭಾರತ ತಂಡವು ಅಕ್ಟೋಬರ್ 8 ರಿಂದ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಟೀಂ ಇಂಡಿಯಾ ಒಂಬತ್ತು ತಂಡಗಳ ವಿರುದ್ಧ ಒಂಬತ್ತು ವಿವಿಧ ಮೈದಾನಗಳಲ್ಲಿ ಪಂದ್ಯಗಳನ್ನು ಆಡಲಿದೆ.

2011 ರ ನಂತರ ಟೀಂ ಇಂಡಿಯಾ ಮೊದಲ ಬಾರಿಗೆ ತವರಿನಲ್ಲಿ ಏಕದಿನ ವಿಶ್ವಕಪ್ ಆಡಲಿದೆ. ವಿಶ್ವಕಪ್ ವೇಳಾಪಟ್ಟಿಯ ಪ್ರಕಾರ ಭಾರತ ತಂಡವು ಅಕ್ಟೋಬರ್ 8 ರಿಂದ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಟೀಂ ಇಂಡಿಯಾ ಒಂಬತ್ತು ತಂಡಗಳ ವಿರುದ್ಧ ಒಂಬತ್ತು ವಿವಿಧ ಮೈದಾನಗಳಲ್ಲಿ ಪಂದ್ಯಗಳನ್ನು ಆಡಲಿದೆ.

2 / 12

ಭಾರತ ಈ ಬಾರಿಯ ವಿಶ್ವಕಪ್ ಅನ್ನು ತವರಿನಲ್ಲಿ ಆಡುತ್ತಿರುವುದರಿಂದ ವಿಶ್ವಕಪ್ ಗೆಲುವಿಗೆ ಪ್ರಬಲ ಸ್ಪರ್ಧಿಯಾಗಿದೆ. ಆದರೆ ಭಾರತ ವಿಶ್ವಚಾಂಪಿಯನ್ ಆಗುವ ಹಾದಿ ಅಷ್ಟು ಸುಲಭವಾಗಿಲ್ಲ. ಈ ವಿಶ್ವಕಪ್ ಪ್ರಯಾಣದಲ್ಲಿ ಭಾರತ ಬಲಿಷ್ಠ ತಂಡಗಳನ್ನು ಎದುರಿಸಬೇಕಿದೆ. ಅದರಲ್ಲೂ ಈ ಮೂರು ಪಂದ್ಯಗಳು ಭಾರತದ ವಿಶ್ವಕಪ್ ಕನಸನ್ನು ನಿರ್ಧರಿಸಲಿವೆ.

3 / 12

ವಾಸ್ತವವಾಗಿ ಟೀಂ ಇಂಡಿಯಾ ಈ ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್​ನಂತಹ ಬಲಿಷ್ಠ ತಂಡಗಳನ್ನು ಎದುರಿಸಬೇಕಿದೆ. ಈ ಮೂರು ತಂಡಗಳು ಪ್ರಸ್ತುತ ವಿಶ್ವ ಕ್ರಿಕೆಟ್‌ನಲ್ಲಿ ಬಲಿಷ್ಠ ತಂಡಗಳೆಂದು ಪರಿಗಣಿಸಲ್ಪಟ್ಟಿವೆ.

4 / 12

ಒಂದು ಕಡೆ ಹಾಲಿ ಚಾಂಪಿಯನ್ ಪಟ್ಟದೊಂದಿಗೆ ಇಂಗ್ಲೆಂಡ್ ಈ ವಿಶ್ವಕಪ್‌ಗೆ ಎಂಟ್ರಿಕೊಡುತ್ತಿದೆ. ಮತ್ತೊಂದೆಡೆ, ನ್ಯೂಜಿಲೆಂಡ್ ಸತತ ಎರಡು ವಿಶ್ವಕಪ್‌ಗಳ ಫೈನಲ್ ಸೋತಿರುವುದರಿಂದ ಈ ಬಾರಿಯ ವಿಶ್ವಕಪ್ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಐದು ಬಾರಿ ಚಾಂಪಿಯನ್ ಆಸ್ಟ್ರೇಲಿಯಾ ಕೂಡ ವಿಶ್ವಕಪ್​ ಗೆಲುವಿನ ಪ್ರಮುಖ ಸ್ಪರ್ಧಿಯಾಗಿದೆ.

5 / 12

ಅಲ್ಲದೆ ಈ ಮೂರು ತಂಡಗಳ ವಿರುದ್ಧ ಟೀಂ ಇಂಡಿಯಾ ಆಡುತ್ತಿರುವ ಮೈದಾನ ಕೂಡ ಇದೀಗ ಟೀಂ ಇಂಡಿಯಾ ಅಭಿಮಾನಿಗಳನ್ನು ಚಿಂತೆಗೀಡು ಮಾಡಿದೆ. ಹಾಗಿದ್ದರೆ ಭಾರತ ಈ ಮೂರು ತಂಡಗಳ ವಿರುದ್ಧ ಯಾವ ಮೈದಾನದಲ್ಲಿ ಕಣಕ್ಕಿಳಿಯುತ್ತದೆ. ಈ ಮೈದಾನದಲ್ಲಿ ಟೀಂ ಇಂಡಿಯಾದ ಪ್ರದರ್ಶನ ಹೇಗಿದೆ ಎಂಬುದನ್ನು ನೋಡುವುದಾದರೆ..

6 / 12

ಭಾರತ ತನ್ನ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್ 8 ರಂದು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಆಡಬೇಕಾಗಿದೆ. ಇಲ್ಲಿನ ಪಿಚ್ ನಿಧಾನವಾಗಿದ್ದು ಸ್ಪಿನ್ನರ್‌ಗಳಿಗೆ ಸಹಾಯಕವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ತಂಡದಲ್ಲಿ ಉತ್ತಮ ಸ್ಪಿನ್ನರ್‌ಗಳಿದ್ದು, ತಂಡದ ಬ್ಯಾಟ್ಸ್‌ಮನ್‌ಗಳು ಸಹ ಸ್ಪಿನ್ನರ್‌ಗಳನ್ನು ಉತ್ತಮವಾಗಿ ಆಡುವುದರಿಂದ ಇಲ್ಲಿ ಭಾರತವು ಆಸ್ಟ್ರೇಲಿಯಾವನ್ನು ಸುಲಭವಾಗಿ ಸೋಲಿಸುತ್ತದೆ ಎಂಬುದು ಎಲ್ಲರ ಮನಸ್ಸಿನಲ್ಲಿದೆ.

7 / 12

ಆದರೆ ಆಸ್ಟ್ರೇಲಿಯಾ ಕೂಡ ಈ ಪಿಚ್​ಗೆ ಅನುಗುಣವಾಗಿ ತಂಡವನ್ನು ಕಟ್ಟುವ ಸಾಮಥ್ಯ್ರ ಹೊಂದಿದೆ. ಕಾಂಗರೂ ತಂಡದಲ್ಲೂ ಚೆನ್ನೈ ಪಿಚ್​ಗೆ ಬೇಕಾದ ಆಟಗಾರರ ದಂಡೆ ಇದೆ. ಇನ್ನು ಕಳೆದ ಮಾರ್ಚ್‌ನಲ್ಲಿ ಇದೇ ಮೈದಾನದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಭಾರತವನ್ನು 21 ರನ್‌ಗಳಿಂದ ಸೋಲಿಸಿತ್ತು.

8 / 12

ಇದರ ನಂತರ, ಅಕ್ಟೋಬರ್ 22 ರಂದು ಧರ್ಮಶಾಲಾದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತದ ಮುಂದಿನ ಕಠಿಣ ಪಂದ್ಯ ನಡೆಯಲಿದೆ. ಧರ್ಮಶಾಲಾ ಪಿಚ್ ಬೌನ್ಸ್ ಮತ್ತು ವೇಗದ ಬೌಲರ್​ಗೆ ಹೆಚ್ಚು ನೆರವಾಗಲಿದೆ. ಇದು ನ್ಯೂಜಿಲೆಂಡ್ ಬೌಲರ್‌ಗಳಿಗೆ ಹೇಳಿ ಮಾಡಿಸಿದ ಪಿಚ್​ನಂತಿದೆ.

9 / 12

ಕಿವೀಸ್ ತಂಡದಲ್ಲಿರುವ ಟ್ರೆಂಟ್ ಬೌಲ್ಟ್, ಲಾಕಿ ಫರ್ಗುಸನ್, ಟಿಮ್ ಸೌಥಿ ಅವರಂತಹ ಬೌಲರ್‌ಗಳು ಇಂತಹ ಪಿಚ್​ನ ಲಾಭ ಪಡೆಯುವುದರಲ್ಲಿ ನಿಸ್ಸೀಮರು. ಇದಕ್ಕೆ ತದ್ವೀರುದ್ಧವಾಗಿ ಬೌನ್ಸಿ ಮತ್ತು ವೇಗದ ಪಿಚ್‌ಗಳಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳ ದೌರ್ಬಲ್ಯ ಎಲ್ಲರಿಗೂ ತಿಳಿದಿರುವ ಕಾರಣ ಇಲ್ಲಿ ನ್ಯೂಜಿಲೆಂಡ್ ಕೂಡ ಭಾರತದ ಮೇಲೆ ಪ್ರಾಬಲ್ಯ ಸಾಧಿಸಿದರೆ ಆಶ್ಚರ್ಯಪಡಬೇಕಾಗಿಲ್ಲ.

10 / 12

ಹಾಲಿ ಚಾಂಪಿಯನ್ ಇಂಗ್ಲೆಂಡ್, ಟೀಂ ಇಂಡಿಯಾ ವಿರುದ್ಧ ಅಕ್ಟೋಬರ್ 29 ರಂದು ಲಕ್ನೋದಲ್ಲಿ ಪಂದ್ಯವನ್ನಾಡಲಿದೆ. ಲಕ್ನೋದ ಏಕಾನಾ ಸ್ಟೇಡಿಯಂ ಈ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಇತ್ತೀಚೆಗೆ ಈ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ನಲ್ಲಿ, ಈ ಪಿಚ್ ಕೂಡ ನಿಧಾನವಾಗಿದ್ದು ಸ್ಪಿನ್ನರ್‌ಗಳಿಗೆ ನೆರವಾಗುತ್ತಿರುವುದು ಕಂಡುಬಂತು.

11 / 12

ಇಂಗ್ಲೆಂಡ್ ಈಗಿನ ಕಾಲದ ಅತ್ಯುತ್ತಮ ಲೆಗ್ ಸ್ಪಿನ್ನರ್‌ಗಳಲ್ಲಿ ಒಬ್ಬರಾದ ಆದಿಲ್ ರಶೀದ್ ಅವರನ್ನು ಹೊಂದಿದ್ದರೆ, ಈ ತಂಡದಲ್ಲಿ ಅತ್ಯುತ್ತಮ ಆಫ್ ಸ್ಪಿನ್ನರ್ ಮೊಯಿನ್ ಅಲಿ ಕೂಡ ಇದ್ದಾರೆ. ಇವರಿಬ್ಬರನ್ನು ಹೊರತುಪಡಿಸಿ, ಇಂಗ್ಲೆಂಡ್‌ಗೆ ಲಿಯಾಮ್ ಲಿವಿಂಗ್‌ಸ್ಟನ್ ರೂಪದಲ್ಲಿ ಮತ್ತೊಬ್ಬ ಪಾರ್ಟ್‌ಟೈಮ್ ಸ್ಪಿನ್ನರ್ ಕೂಡ ಇದ್ದಾರೆ.

12 / 12

ಇತ್ತೀಚಿನ ದಿನಗಳಲ್ಲಿ ಕೊಹ್ಲಿ ಸೇರಿದಂತೆ ಟೀಂ ಇಂಡಿಯಾದ ಹಲವು ಆಟಗಾರರು ಸ್ಪಿನ್ನರ್​ಗಳಿಗೆ ಆಡುವುದಕ್ಕೆ ಕಷ್ಟಪಡುತ್ತಿರುವುದನ್ನು ನಾವು ನೋಡಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ಇಂಗ್ಲೆಂಡ್ ತನ್ನ ಸ್ಪಿನ್ನರ್‌ಗಳ ಆಧಾರದ ಮೇಲೆ ಇಲ್ಲಿ ಭಾರತವನ್ನು ಸೋಲಿಸುವ ಸಾಮರ್ಥ್ಯ ಹೊಂದಿದೆ.

Published On - 8:19 am, Thu, 29 June 23

Loading...
Unable to load recommendations.
Follow Us