PAK vs AFG, ICC World Cup: ಅಫ್ಘಾನ್ ವಿರುದ್ಧ ಸೋತ ಪಾಕಿಸ್ತಾನಕ್ಕೆ ಸೆಮಿ ಫೈನಲ್ ತಲುಪುವ ಅವಕಾಶ ಇದೆಯೇ?
Pakistan Semi Final Chance in ICC ODI World Cup 2023: 2023 ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಸದ್ಯ ಆಡಿರುವ ಐದು ಪಂದ್ಯಗಳಲ್ಲಿ ಕೇವಲ ಎರಡು ಗೆಲುವು ಹಾಗೂ ಮೂರು ಸೋಲಿನೊಂದಿಗೆ ಒಟ್ಟು 4 ಅಂಕ ಸಂಪಾದಿಸಿ -0.400 ರನ್ರೇಟ್ನೊಂದಿಗೆ ಪಾಯಿಂಟ್ ಟೇಬಲ್ನಲ್ಲಿ ಐದನೇ ಸ್ಥಾನದಲ್ಲಿದೆ. ಮೂರು ಸೋಲು ಕಂಡಿರುವ ಪಾಕಿಸ್ತಾನ ಸೆಮಿ ಫೈನಲ್ ರೇಸ್ನಿಂದ ಹೊರಬಿದ್ದಿಲ್ಲ.
1 / 6
ಸೋಮವಾರ ಚೆನ್ನೈನ ಎಮ್‌ಎ ಚಿದಂಬರಂ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ ವಿರುದ್ಧ ಆಘಾತಕಾರಿ ಸೋಲು ಅನುಭವಿಸಿದ ನಂತರ 2023 ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ಮುಂದಿನ ಹಾದು ಕಷ್ಟಕರವಾಗಿದೆ. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಾಬರ್ ಪಡೆ ಅಫ್ಘಾನಿಸ್ತಾನ ವಿರುದ್ಧ ಸೋಲು ಕಂಡಿತು.
2 / 6
ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧ ಸೋಲು ಅನುಭವಿಸಿದ ನಂತರ ಪಾಕಿಸ್ತಾನಕ್ಕೆ ಇದು ಸತತ ಮೂರನೇ ಸೋಲು. ನೆದರ್ಲೆಂಡ್ಸ್ ಮತ್ತು ಶ್ರೀಲಂಕಾ ವಿರುದ್ಧದ ವಿಜಯಗಳೊಂದಿಗೆ ಟೂರ್ನಿಯನ್ನು ಪ್ರಾರಂಭಿಸಿದ್ದ ಪಾಕ್ ಬಳಿಕ ಹ್ಯಾಟ್ರಿಕ್ ಸೋಲು ಕಂಡಿದೆ.
3 / 6
ಬಾಬರ್ ಪಡೆ ಸದ್ಯ ಆಡಿರುವ ಐದು ಪಂದ್ಯಗಳಲ್ಲಿ ಕೇವಲ ಎರಡು ಗೆಲುವು ಹಾಗೂ ಮೂರು ಸೋಲಿನೊಂದಿಗೆ ಒಟ್ಟು 4 ಅಂಕ ಸಂಪಾದಿಸಿ -0.400 ರನ್ರೇಟ್ನೊಂದಿಗೆ ಪಾಯಿಂಟ್ ಟೇಬಲ್ನಲ್ಲಿ ಐದನೇ ಸ್ಥಾನದಲ್ಲಿದೆ. ಪಾಕ್ ಜೊತೆ ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ಕೂಡ ನಾಲ್ಕು ಅಂಕ ಪಡೆದುಕೊಂಡಿದೆ.
4 / 6
ಮೂರು ಸೋಲು ಕಂಡಿರುವ ಪಾಕಿಸ್ತಾನ ಸೆಮಿ ಫೈನಲ್ ರೇಸ್ನಿಂದ ಹೊರಬಿದ್ದಿಲ್ಲ. ಆದರೆ, ಸೆಮಿಫೈನಲ್ ತಲುಪುವ ಹಾದಿ ಕಠಿಣವಾಗಿದೆ. 10 ಅಂಕಗಳನ್ನು ಹೊಂದಿರುವ ಭಾರತ ಮೊದಲ ಸ್ಥಾನದಲ್ಲಿದ್ದಾರೆ, ಎಂಟು ಅಂಕಗಳೊಂದಿಗೆ ನ್ಯೂಝಿಲೆಂಡ್ ಎರಡನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ಕೂಡ ಆರು ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.
5 / 6
ಪಾಕಿಸ್ತಾನದ ಲೆಕ್ಕಚಾರ ಸರಳವಾಗಿದೆ, ಏನೆಂದರೆ ಪಾಕಿಸ್ತಾನ ಸೆಮೀಸ್ನಲ್ಲಿ ಸ್ಥಾನ ಭದ್ರಪಡಿಸಬೇಕು ಎಂದರೆ ಉಳಿದಿರುವ ಎಲ್ಲ ಪಂದ್ಯ ಗೆಲ್ಲಲೇಬೇಕು. ಒಂದು ತಂಡ ಐದು ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ಸಾಕಾಗುವುದಿಲ್ಲ. ಈ ಹಿಂದೆ ಪಾಕ್-ನ್ಯೂಝಿಲೆಂಡ್ 2019 ರಲ್ಲಿ ಐದು ಗೆಲುವು ಕಂಡು ಸಮಬಲ ಸಾಧಿಸಿತ್ತು. ಆದರೆ, ರನ್ರೇಟ್ ಆಧಾರದ ಮೇಲೆ ನ್ಯೂಝಿಲೆಂಡ್ ಸೆಮೀಸ್ಗೆ ಲಗ್ಗೆಯಿಟ್ಟಿತ್ತು.
6 / 6
ಇದೀಗ ಪಾಕ್ ಚೆನ್ನೈನಲ್ಲಿ ದಕ್ಷಿಣ ಆಫ್ರಿಕಾ, ಕೋಲ್ಕತ್ತಾದಲ್ಲಿ ಬಾಂಗ್ಲಾದೇಶ, ಬೆಂಗಳೂರಿನಲ್ಲಿ ನ್ಯೂಝಿಲೆಂಡ್ ಮತ್ತು ಕೋಲ್ಕತ್ತಾದಲ್ಲಿ ಇಂಗ್ಲೆಂಡ್ ವಿರುದ್ಧ ಪಂದ್ಯಗಳನ್ನು ಆಡಲಿದೆ. ನಾಲ್ಕು ಪಂದ್ಯಗಳಲ್ಲಿ ಒಂದು ಸೋಲು ಕಂಡರೆ ಪಾಕಿಸ್ತಾನ ಟೂರ್ನಿಯಿಂದ ಬಹುತೇಕ ಹೊರಬಿದ್ದಂತೆ. ಎರಡರಲ್ಲಿ ಸೋತರೆ ಅಧಿಕೃತವಾಗಿ ಔಟ್ ಆಗಲಿದೆ.