PAK vs BAN: ಪಾಕ್ ತಂಡಕ್ಕೆ ಶುರುವಾಯ್ತು ಟೆಸ್ಟ್ ಸರಣಿ ಸೋಲಿನ ಭಯ

Updated on: Aug 30, 2024 | 7:17 PM

PAK vs BAN: ರಾವಲ್ಪಿಂಡಿಯಲ್ಲಿ ನಡೆಯುತ್ತಿರುವ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್‌ನ ಮೊದಲ ದಿನ ಮಳೆಯಿಂದಾಗಿ ರದ್ದಾಗಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಈ ಪಂದ್ಯದ ಟಾಸ್ ಕೂಡ ನಡೆಯಲು ಸಾಧ್ಯವಾಗಲಿಲ್ಲ. ಪಂದ್ಯ ನಡೆಸುವ ಸಲುವಾಗಿ ಊಟದ ವಿರಾಮದವರೆಗೂ ಕಾಯ್ದರೂ ಮಳೆ ನಿಲ್ಲದ ಕಾರಣಕ್ಕೆ ಪಂದ್ಯದ ಅಧಿಕಾರಿಗಳು ಮೊದಲ ದಿನದ ಆಟವನ್ನು ರದ್ದುಗೊಳಿಸಿದರು.

1 / 6
ರಾವಲ್ಪಿಂಡಿಯಲ್ಲಿ ನಡೆಯುತ್ತಿರುವ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್‌ನ ಮೊದಲ ದಿನ ಮಳೆಯಿಂದಾಗಿ ರದ್ದಾಗಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಈ ಪಂದ್ಯದ ಟಾಸ್ ಕೂಡ ನಡೆಯಲು ಸಾಧ್ಯವಾಗಲಿಲ್ಲ. ಪಂದ್ಯ ನಡೆಸುವ ಸಲುವಾಗಿ ಊಟದ ವಿರಾಮದವರೆಗೂ ಕಾಯ್ದರೂ ಮಳೆ ನಿಲ್ಲದ ಕಾರಣಕ್ಕೆ ಪಂದ್ಯದ ಅಧಿಕಾರಿಗಳು ಮೊದಲ ದಿನದ ಆಟವನ್ನು ರದ್ದುಗೊಳಿಸಿದರು.

ರಾವಲ್ಪಿಂಡಿಯಲ್ಲಿ ನಡೆಯುತ್ತಿರುವ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್‌ನ ಮೊದಲ ದಿನ ಮಳೆಯಿಂದಾಗಿ ರದ್ದಾಗಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಈ ಪಂದ್ಯದ ಟಾಸ್ ಕೂಡ ನಡೆಯಲು ಸಾಧ್ಯವಾಗಲಿಲ್ಲ. ಪಂದ್ಯ ನಡೆಸುವ ಸಲುವಾಗಿ ಊಟದ ವಿರಾಮದವರೆಗೂ ಕಾಯ್ದರೂ ಮಳೆ ನಿಲ್ಲದ ಕಾರಣಕ್ಕೆ ಪಂದ್ಯದ ಅಧಿಕಾರಿಗಳು ಮೊದಲ ದಿನದ ಆಟವನ್ನು ರದ್ದುಗೊಳಿಸಿದರು.

2 / 6

ರಾವಲ್ಪಿಂಡಿಯಲ್ಲಿ ಮೊದಲ ದಿನದ ಆಟ ರದ್ದಾಗಿರುವುದು ಆತಿಥೇಯ ಪಾಕಿಸ್ತಾನಕ್ಕೆ ಅತ್ಯಂತ ಕೆಟ್ಟ ಸುದ್ದಿಯಾಗಿದೆ. ಏಕೆಂದರೆ ಈ ತಂಡವು ಟೆಸ್ಟ್ ಸರಣಿಯಲ್ಲಿ ಬಾಂಗ್ಲಾದೇಶಕ್ಕಿಂತ 0-1 ಹಿನ್ನಡೆಯಲ್ಲಿದೆ. ಇದೀಗ ಸರಣಿಯನ್ನು ಡ್ರಾ ಮಾಡಿಕೊಳ್ಳಲು ಪಾಕ್ ತಂಡಕ್ಕೆ ಕೇವಲ ನಾಲ್ಕು ದಿನಗಳು ಮಾತ್ರ ಉಳಿದಿವೆ. ರಾವಲ್ಪಿಂಡಿಯಲ್ಲಿ ಇದೇ ಹವಾ ಮುಂದುವರಿದರೆ ಪಾಕಿಸ್ತಾನ ಟೆಸ್ಟ್ ಸರಣಿ ಸೋಲಬೇಕಾಗುತ್ತದೆ.

3 / 6

ಇನ್ನು ರಾವಲ್ಪಿಂಡಿಯ ಹವಾಮಾನದ ಬಗ್ಗೆ ಹೇಳುವುದಾದರೆ.. ಮಳೆಯಿಂದಾಗಿ ಶುಕ್ರವಾರದ ಮೊದಲ ದಿನದ ರದ್ದಾಗಿದೆ. ಇದೀಗ ಮುಂದಿನ ಎರಡು ದಿನಗಳಲ್ಲೂ ಮಳೆ ಈ ಪಂದ್ಯಕ್ಕೆ ದೊಡ್ಡ ಅಡಚಣೆಯನ್ನು ಉಂಟುಮಾಡುವ ಸಾಧ್ಯತೆಗಳಿವೆ. ವರದಿಗಳ ಪ್ರಕಾರ ಸೋಮವಾರ ಮತ್ತು ಮಂಗಳವಾರ ಭಾರೀ ಮಳೆಯಾಗುವ ಸಾಧ್ಯತೆ ಇದೆ.

4 / 6

ಶನಿವಾರ ಮತ್ತು ಭಾನುವಾರ ಮಾತ್ರ ಮಳೆಯಿಲ್ಲ ಎಂದು ವರದಿ ಹೇಳಿದೆ. ಅಂದರೆ ಕೊನೆಯ ಎರಡು ದಿನಗಳಲ್ಲಿ ಪಂದ್ಯ ನಡೆದರೆ, ನಿಖರ ಫಲಿತಾಂಶ ಹೊರಬೀಳುವುದು ಕಷ್ಟ ಸಾಧ್ಯ. ಕೊನೆಯ ಎರಡೂ ದಿನಗಳಲ್ಲಿ ಮಳೆ ಇಲ್ಲದಿದ್ದರೂ, ಪಂದ್ಯಕ್ಕೆ ಕ್ರೀಡಾಂಗಣ ಸಿದ್ದವಾಗುವುದರ ಮೇಲೆ ಪಾಕ್ ತಂಡದ ಭವಿಷ್ಯ ನಿಂತಿದೆ. ಒಂದು ವೇಳೆ ಈ ಪಂದ್ಯ ನಡೆಯದಿದ್ದರೆ ಬಾಂಗ್ಲಾದೇಶ ಟೆಸ್ಟ್ ಸರಣಿಯನ್ನು ತನ್ನದಾಗಿಸಿಕೊಳ್ಳಲಿದೆ.

5 / 6

ಮೊದಲ ಟೆಸ್ಟ್‌ನಲ್ಲಿ ಪಾಕಿಸ್ತಾನ ನಾಚಿಕೆಗೇಡಿನ ಸೋಲು ಕಂಡಿತ್ತು. ಮೊದಲ ಟೆಸ್ಟ್‌ನಲ್ಲಿ ಪಾಕಿಸ್ತಾನ ಮೊದಲ ಇನ್ನಿಂಗ್ಸ್‌ನಲ್ಲಿ 448 ರನ್ ಕಲೆಹಾಕಿದರೆ, ಇದಕ್ಕುತ್ತರವಾಗಿ ಬಾಂಗ್ಲಾದೇಶ 565 ರನ್ ಗಳಿಸಿತ್ತು. ಆ ಬಳಿಕ ಎರಡನೇ ಇನ್ನಿಂಗ್ಸ್ ಆರಂಭಿಸಿದ ಪಾಕಿಸ್ತಾನ ಕೇವಲ 146 ರನ್​ಗಳಿಗೆ ಆಲೌಟ್ ಆಯಿತು. ಅಂತಿಮವಾಗಿ 30 ರನ್​ಗಳ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ಯಾವುದೇ ವಿಕೆಟ್ ನಷ್ಟವಿಲ್ಲದೆ ಗೆಲುವಿನ ದಡ ಮುಟ್ಟಿತು.

6 / 6

ಇದೀಗ ರಾವಲ್ಪಿಂಡಿಯಲ್ಲಿ ನಡೆಯಬೇಕಾದ ಎರಡನೇ ಟೆಸ್ಟ್‌ಗೆ ಮಳೆ ಅಡ್ಡಿಪಡಿಸಿ ಪಾಕಿಸ್ತಾನ ಈ ಪಂದ್ಯವನ್ನು ಗೆಲ್ಲದಿದ್ದರೆ, ಬಾಂಗ್ಲಾದೇಶ ಮೊದಲ ಬಾರಿಗೆ ಪಾಕಿಸ್ತಾನದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದುಕೊಂಡ ದಾಖಲೆ ಬರೆದರೆ, ಇತ್ತ ಈ ಸೋಲಿನೊಂದಿಗೆ ಪಾಕ್ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ರೇಸ್‌ನಿಂದ ಹೊರಗುಳಿಯಲಿದೆ.

ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us