ENG vs PAK: 1524 ದಿನಗಳ ನಂತರ ಅತಿ ವೇಗದ ಟೆಸ್ಟ್ ಶತಕ ಸಿಡಿಸಿದ ಪಾಕ್ ನಾಯಕ
Shan Masood: ಮುಲ್ತಾನ್ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಶಾನ್ ಮಸೂದ್ ಗಳಿಸಿದ ಶತಕದ ವಿಶೇಷವೆಂದರೆ ಅವರ ಸ್ಟ್ರೈಕ್ ರೇಟ್. ಮುಲ್ತಾನ್‌ನಲ್ಲಿ ನಾಯಕತ್ವದ ಇನ್ನಿಂಗ್ಸ್ ಆಡಿದ ಶಾನ್ ಮಸೂದ್ ಕೇವಲ 102 ಎಸೆತಗಳಲ್ಲಿ ತಮ್ಮ ಶತಕ ಪೂರೈಸಿದರು. ಅಂತಿಮವಾಗಿ ಅವರ ಇನ್ನಿಂಗ್ಸ್ 151 ರನ್ಗಳಿಗೆ ಅಂತ್ಯಗೊಂಡಿತು.
1 / 6
ಪ್ರಸ್ತುತ ಪಾಕಿಸ್ತಾನ ಹಾಗೂ ಇಂಗ್ಲೆಂಡ್ ನಡುವೆ ಮುಲ್ತಾನ್‌ನಲ್ಲಿ ಮೊದಲ ಟೆಸ್ಟ್ ಪಂದ್ಯ ಆರಂಭವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲ ಇನ್ನಿಂಗ್ಸ್ ಆರಂಭಿಸಿರುವ ಪಾಕಿಸ್ತಾನ ತಂಡಕ್ಕೆ ಉತ್ತಮ ಆರಂಭ ಲಭಿಸಿದೆ. ದಿನದಾಟದಂತ್ಯಕ್ಕೆ ಪಾಕ್ ತಂಡ 4 ವಿಕೆಟ್ ಕಳೆದುಕೊಂಡು 328 ರನ್ ಕಲೆಹಾಕಿದೆ. ಇದರಲ್ಲಿ ಇಬ್ಬರ ಶತಕದ ಇನ್ನಿಂಗ್ಸ್ ಕೂಡ ಸೇರಿದೆ.
2 / 6
ಮೊದಲು ಬ್ಯಾಟಿಂಗ್ ಆರಂಭಿಸಿದ ಪಾಕ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಕೇವಲ 4 ರನ್ಗಳಿಗೆ ಆರಂಭಿಕ ಸೈಮ್ ಅಯೂಬ್ ಪೆವಿಲಿಯನ್ ಸೇರಿಕೊಂಡರು ಆದರೆ ಆ ಬಳಿಕ ಜೊತೆಯಾದ ಅಬ್ದುಲ್ಲಾ ಶಫೀಕ್ ಹಾಗೂ ನಾಯಕ ಶಾನ್ ಮಸೂದ್ ದ್ವಿಶತಕದ ಜೊತೆಯಾಟ ನಡೆಸಿದರು. ಅಲ್ಲದೆ ಇಬ್ಬರು ಸಹ ವೈಯಕ್ತಿಕ ಶತಕ ಸಿಡಿಸಿ ಮಿಂಚಿದರು.
3 / 6
ಅದರಲ್ಲೂ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕದ ಬರ ಎದುರಿಸುತ್ತಿದ್ದ ನಾಯಕ ಶಾನ್ ಮಸೂದ್ ಕೊನೆಗೂ ಶತಕ ಸಿಡಿಸಿ ಮಿಂಚಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮುಲ್ತಾನ್ ಟೆಸ್ಟ್‌ನಲ್ಲಿ ಶತಕ ಬಾರಿಸುವ ಮೂಲಕ ಅವರು ತಮ್ಮ ಕಾಯುವಿಕೆಯನ್ನು ಅಂತ್ಯಗೊಳಿಸಿದರು. ಶಾನ್ ಮಸೂದ್ ಕೊನೆಯ ಬಾರಿಗೆ 2020ರಲ್ಲಿ ಇದೇ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ಶತಕ ಸಿಡಿಸಿದ್ದರು.
4 / 6
ಇದೀಗ ಅದೇ ಇಂಗ್ಲೆಂಡ್ ತಂಡದ ವಿರುದ್ಧವೇ ಮಸೂದ್ ತಮ್ಮ ಕಾಯುವಿಕೆಯನ್ನು ಕೊನೆಗೊಳಿಸಿದ್ದಾರೆ. ಬರೋಬ್ಬರಿ 1524 ದಿನಗಳ ನಂತರ ಟೆಸ್ಟ್‌ನಲ್ಲಿ ಶಾನ್ ಮಸೂದ್ ಗಳಿಸಿದ ಶತಕ ಇಂಗ್ಲೆಂಡ್ ವಿರುದ್ಧ ಅವರ ಎರಡನೇ ಶತಕ ಮತ್ತು ಅವರ ಟೆಸ್ಟ್ ವೃತ್ತಿಜೀವನದ 5 ನೇ ಶತಕವಾಗಿದೆ.
5 / 6
ಮುಲ್ತಾನ್ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಶಾನ್ ಮಸೂದ್ ಗಳಿಸಿದ ಶತಕದ ವಿಶೇಷವೆಂದರೆ ಅವರ ಸ್ಟ್ರೈಕ್ ರೇಟ್. ಮುಲ್ತಾನ್‌ನಲ್ಲಿ ನಾಯಕತ್ವದ ಇನ್ನಿಂಗ್ಸ್ ಆಡಿದ ಶಾನ್ ಮಸೂದ್ ಕೇವಲ 102 ಎಸೆತಗಳಲ್ಲಿ ತಮ್ಮ ಶತಕ ಪೂರೈಸಿದರು. ಇದರೊಂದಿಗೆ 10 ವರ್ಷಗಳ ನಂತರ ಟೆಸ್ಟ್ ಕ್ರಿಕೆಟ್‌ನಲ್ಲಿ ಪಾಕಿಸ್ತಾನದ ಬ್ಯಾಟ್ಸ್‌ಮನ್ ಒಬ್ಬರು ಅತಿ ವೇಗದ ಶತಕ ಸಿಡಿಸಿದ ಸಾಧನೆಯನ್ನು ಮಸೂದ್ ಮಾಡಿದರು.
6 / 6
ಶಾನ್ ಮಸೂದ್ ಇಂಗ್ಲೆಂಡ್ ವಿರುದ್ಧ ಎರಡನೇ ಬಾರಿ ಶತಕ ಸಿಡಿಸಿದ್ದಾರೆ. ಆದರೆ, ತನ್ನದೇ ದೇಶದಲ್ಲಿ ಇಂಗ್ಲೆಂಡ್ ವಿರುದ್ಧ ಶತಕದ ಸ್ಕ್ರಿಪ್ಟ್ ಬರೆದಿರುವುದು ಇದೇ ಮೊದಲು. 2020 ರಲ್ಲಿ, ಅವರು ಮ್ಯಾಂಚೆಸ್ಟರ್‌ನಲ್ಲಿ ಆಡಿದ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ 156 ರನ್‌ಗಳ ಇನ್ನಿಂಗ್ಸ್ ಆಡಿದ್ದರು. ಇದೀಗ ಮುಲ್ತಾನ್ ಟೆಸ್ಟ್‌ನಲ್ಲಿ ಶಾನ್ ಮಸೂದ್ ಇಂಗ್ಲೆಂಡ್ ವಿರುದ್ಧ 102 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 10 ಬೌಂಡರಿಗಳ ಸಹಾಯದಿಂದ ಶತಕ ದಾಖಲಿಸಿದರು.
Published On - 7:07 pm, Mon, 7 October 24