Piyush Chawla: 1000 ವಿಕೆಟ್‌ಗಳ ಸರದಾರ ಪಿಯೂಷ್ ಚಾವ್ಲಾ..!
Piyush Chawla: ಟೀಂ ಇಂಡಿಯಾದ ಮಾಜಿ ಗೂಗ್ಲಿ ಸ್ಪಿನ್ನರ್ ಹಾಗೂ ಪ್ರಸ್ತುತ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡುತ್ತಿರುವ ಪಿಯೂಷ್ ಚಾವ್ಲಾ ತಮ್ಮ ವೃತ್ತಿಜೀವನದಲ್ಲಿ 1000 ವಿಕೆಟ್‌ಗಳನ್ನು ಪೂರೈಸಿದ ದಾಖಲೆ ಬರೆದಿದ್ದಾರೆ.
1 / 6
ಟೀಂ ಇಂಡಿಯಾದ ಮಾಜಿ ಗೂಗ್ಲಿ ಸ್ಪಿನ್ನರ್ ಹಾಗೂ ಪ್ರಸ್ತುತ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡುತ್ತಿರುವ ಪಿಯೂಷ್ ಚಾವ್ಲಾ ತಮ್ಮ ವೃತ್ತಿಜೀವನದಲ್ಲಿ 1000 ವಿಕೆಟ್‌ಗಳನ್ನು ಪೂರೈಸಿದ ದಾಖಲೆ ಬರೆದಿದ್ದಾರೆ.
2 / 6
ಪ್ರಸ್ತುತ ವಿಜಯ್ ಹಜಾರೆ ಟ್ರೋಫಿಯಲ್ಲಿ ಗುಜರಾತ್ ಪರ ಆಡುತ್ತಿರುವ ಪಿಯೂಷ್ ಚಾವ್ಲಾ, ಅರುಣಾಚಲ ಪ್ರದೇಶದ ವಿರುದ್ಧದ ಪಂದ್ಯದಲ್ಲಿ 10 ಓವರ್ಗಳನ್ನು ಬೌಲ್ ಮಾಡಿ 30 ರನ್ ನೀಡಿ 3 ವಿಕೆಟ್ ಕಬಳಿಸಿದ್ದರು. ಇದರಲ್ಲಿ 1ಓವರ್ ಮೇಡನ್ ಕೂಡ ಇತ್ತು.
3 / 6
ಇದರೊಂದಿಗೆ ಅವರು ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ 1000 ವಿಕೆಟ್‌ಗಳನ್ನು ಪೂರೈಸುವಲ್ಲಿ ಯಶಸ್ವಿಯಾಗಿದ್ದಾರೆ.
4 / 6
ತಮ್ಮ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 445 ವಿಕೆಟ್‌ಗಳನ್ನು ಪಡೆದಿರುವ ಪಿಯೂಷ್ ಚಾವ್ಲಾ, ಟಿ20 ಕ್ರಿಕೆಟ್‌ನಲ್ಲಿ 302 ವಿಕೆಟ್‌ಗಳನ್ನು ಮತ್ತು ಲಿಸ್ಟ್-ಎ ಕ್ರಿಕೆಟ್‌ನಲ್ಲಿ 254 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಮೂಲಕ ಅವರ ಹೆಸರಿನಲ್ಲಿ ಈಗ 1001 ವಿಕೆಟ್‌ಗಳು ದಾಖಲಾಗಿವೆ.
5 / 6
ಐಪಿಎಲ್ 2023 ರ ಹರಾಜಿನಲ್ಲಿ ಅವರನ್ನು ಮುಂಬೈ ಇಂಡಿಯನ್ಸ್ ತಂಡವು 50 ಲಕ್ಷಕ್ಕೆ ಖರೀದಿಸಿತ್ತು. ಇದಾದ ಬಳಿಕ ಐಪಿಎಲ್ 2023ರಲ್ಲೂ ಅದ್ಭುತ ಪ್ರದರ್ಶನ ನೀಡಿದ ಅವರು ಮುಂಬೈ ಪರ 16 ಪಂದ್ಯಗಳಲ್ಲಿ 18 ವಿಕೆಟ್ ಕಬಳಿಸಿದ್ದಾರೆ.
6 / 6
ಪಿಯೂಷ್ ಚಾವ್ಲಾ ಭಾರತದ ಪರ ಎಲ್ಲಾ ಮೂರು ಮಾದರಿಗಳಲ್ಲಿ ಕ್ರಿಕೆಟ್ ಆಡಿದ್ದಾರೆ. 2006 ರಲ್ಲಿ ಟೀಂ ಇಂಡಿಯಾ ಪರ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ್ದರು. ಆದರೆ ಕಳೆದ 12 ವರ್ಷಗಳಿಂದ ಟೀಂ ಇಂಡಿಯಾದಲ್ಲಿ ಚಾವ್ಲಾಗೆ ಅವಕಾಶ ಸಿಕ್ಕಿಲ್ಲ. ಭಾರತದ ಪರ ಚಾವ್ಲಾ 2 ಟೆಸ್ಟ್, 25 ಏಕದಿನ ಮತ್ತು 7 ಟಿ20 ಪಂದ್ಯಗಳನ್ನು ಆಡಿದ್ದಾರೆ.