PBKS vs GT, IPL 2023: ಐಪಿಎಲ್​ನಲ್ಲಿಂದು ಪಂಜಾಬ್- ಗುಜರಾತ್ ನಡುವೆ ಹೈವೋಲ್ಟೇಜ್ ಪಂದ್ಯ

Updated on: Apr 13, 2023 | 9:31 AM

Punjab vs Gujarat: ಪಂಜಾಬ್ ಕಿಂಗ್ಸ್ ಆಡಿರುವ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಗೆಲುವು ಒಂದರಲ್ಲಿ ಸೋಲು ಕಂಡು ಆರನೇ ಸ್ಥಾನದಲ್ಲಿದೆ -0.281 ರನ್​ರೇಟ್ ಹೊಂದಿದೆ. ಇತ್ತ ಜಿಟಿ ತಂಡ ಕೂಡ ಆಡಿದ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಗೆಲುವು ಒಂದರಲ್ಲಿ ಸೋಲು ಕಂಡು ರನ್​ರೇಟ್ (+0.431) ಆಧಾರದ ಮೇಲೆ ನಾಲ್ಕನೇ ಸ್ಥಾನದಲ್ಲಿದೆ.

1 / 7
16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಇಂದು 18ನೇ ಪಂದ್ಯ ನಡೆಯಲಿದೆ. ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಈ ಪಂದ್ಯದಲ್ಲಿ ಶಿಖರ್ ಧವನ್ ನಾಯಕತ್ವದ ಪಂಜಾಬ್ ಕಿಂಗ್ಸ್ ಮತ್ತು ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡ ಮುಖಾಮುಖಿ ಆಗಲಿದೆ.

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಇಂದು 18ನೇ ಪಂದ್ಯ ನಡೆಯಲಿದೆ. ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಈ ಪಂದ್ಯದಲ್ಲಿ ಶಿಖರ್ ಧವನ್ ನಾಯಕತ್ವದ ಪಂಜಾಬ್ ಕಿಂಗ್ಸ್ ಮತ್ತು ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡ ಮುಖಾಮುಖಿ ಆಗಲಿದೆ.

2 / 7

ಪಂಜಾಬ್ ಕಿಂಗ್ಸ್ ಆಡಿರುವ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಗೆಲುವು ಒಂದರಲ್ಲಿ ಸೋಲು ಕಂಡು ಆರನೇ ಸ್ಥಾನದಲ್ಲಿದೆ -0.281 ರನ್​ರೇಟ್ ಹೊಂದಿದೆ. ಇತ್ತ ಜಿಟಿ ತಂಡ ಕೂಡ ಆಡಿದ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಗೆಲುವು ಒಂದರಲ್ಲಿ ಸೋಲು ಕಂಡು ರನ್​ರೇಟ್ (+0.431) ಆಧಾರದ ಮೇಲೆ ನಾಲ್ಕನೇ ಸ್ಥಾನದಲ್ಲಿದೆ.

3 / 7

ಪಂಜಾಬ್ ತಂಡದ ಪರ ಆರಂಭಿಕರಾದ ನಾಯಕ ಶಿಖರ್ ಧವನ್ ಮತ್ತು ಪ್ರಭ್​ಸಿಮ್ರಾನ್ ಬಿಟ್ಟರೆ ಉಳಿದವರೆಲ್ಲ ವೈಫಲ್ಯ ಅನುಭವಿಸುತ್ತರುವುದು ದೊಡ್ಡ ಹಿನ್ನಡೆಯಾಗಿದೆ. ಓಪನರ್​ಗಳಷ್ಟೆ ರನ್ ಕಲೆಹಾಕುತ್ತಿದ್ದಾರೆ.

4 / 7

ಮ್ಯಾಥ್ಯೂ ಶಾರ್ಟ್, ಜಿತೇಶ್ ಶರ್ಮಾ, ಸ್ಯಾಮ್ ಕುರ್ರನ್, ಸಿಖಂದರ್ ರಾಜಾ, ಶಾರುಖ್ ಖಾನ್ ರಂತಹ ಅಪಾಯಕಾರಿ ಬ್ಯಾಟರ್​ಗಳು ತಂಡದಲ್ಲಿದ್ದರೂ ಯಾರೂ ನೆರವಾಗುತ್ತಿಲ್ಲ. ಬೌಲಿಂಗ್​ನಲ್ಲಿ ಕೂಡ ಅರ್ಶ್​ದೀಪ್ ಸಿಂಗ್, ಹರ್ಪ್ರೀತ್ ಬ್ರಾರ್, ನೇಥನ್ ಎಲೊಸ್, ರಾಹುಲ್ ಚಹರ್ ಇದ್ದರೂ ವಿಕೆಟ್ ಟೇಕರ್ ಆಗಿ ಕಾಣಿಸಿಕೊಂಡಿಲ್ಲ.

5 / 7

ಇತ್ತ ಜಿಟಿ ತಂಡ ಕಳೆದ ಪಂದ್ಯದಲ್ಲಿ ಸೋಲುಂಡರೂ ಬಲಿಷ್ಠವಾಗಿದೆ. ನಾಯಕ ಹಾರ್ದಿಕ್ ಅನಾರೋಗ್ಯದಿಂದ ಗುಣಮುಖರಾಗಿದ್ದು ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ.

6 / 7

ವೃದ್ದಿಮಾನ್ ಸಾಹ ಮತ್ತು ಶುಬ್​ಮನ್ ಗಿಲ್ ತಂಡಕ್ಕೆ ಉತ್ತಮ ಆರಂಭ ಒದಗಿಸುತ್ತಿದ್ದಾರೆ. ಸಾಯಿ ಸುದರ್ಶನ್ ಕೂಡ ಭರ್ಜರಿ ಫಾರ್ಮ್​ನಲ್ಲಿದ್ದು ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದರು. ವಿಜಯ್ ಶಂಕರ್ ಕೂಡ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಡೇವಿಡ್ ಮಿಲ್ಲರ್, ರಾಹುಲ್ ತೇವಾಟಿಯ ಕೂಡ ಇದ್ದಾರೆ.

7 / 7

ರಶೀದ್ ಹ್ಯಾಟ್ರಿಕ್ ವಿಕೆಟ್ ಪಡೆದು ಎದುರಾಳಿಗರಲ್ಲಿ ನಡುಕ ಹುಟ್ಟಿಸಿದ್ದಾರೆ. ಮೊಹಮ್ಮದ್ ಶಮಿ, ಜೋಶ್ವಾ ಲಿಟಲ್, ಅಲ್ಜರಿ ಜೋಸೆಫ್ ಪ್ರಮುಖ ಬೌಲರ್​ಗಳಿದ್ದಾರೆ.

Published On - 9:31 am, Thu, 13 April 23

Loading...
Unable to load recommendations.
Follow Us