ಜಾಹೀರಾತು ತಂದ ಆಪತ್ತು; ಗಾಯಕ್ಕೆ ತುತ್ತಾದ ಕನ್ನಡಿಗ ರಚಿನ್ ರವೀಂದ್ರ

Updated on: Sep 19, 2026 | 3:43 PM

ರಚಿನ್ ರವೀಂದ್ರ ಜಾಹೀರಾತು ಚಿತ್ರೀಕರಣದ ವೇಳೆ ಭುಜದ ಗಾಯಕ್ಕೆ ಒಳಗಾಗಿದ್ದು, ಭಾರತ ವಿರುದ್ಧದ ಮುಂಬರುವ T20 ಸರಣಿಯಿಂದ ಹೊರಗುಳಿಯುವ ಸಾಧ್ಯತೆ ಇದೆ. ಗಂಭೀರ ಗಾಯವಿಲ್ಲದಿದ್ದರೂ, ತಂಡವು ಯಾವುದೇ ಅಪಾಯವನ್ನು ತೆಗೆದುಕೊಳ್ಳಲು ಬಯಸುತ್ತಿಲ್ಲ. ರಚಿನ್ ಶೀಘ್ರವಾಗಿ ಚೇತರಿಸಿಕೊಂಡು ಮೈದಾನಕ್ಕೆ ಮರಳಲು ಸಂಪೂರ್ಣ ಬೆಂಬಲ ನೀಡಲಾಗುತ್ತಿದೆ, ಆದರೆ ಅವರ ಲಭ್ಯತೆ ಚೇತರಿಕೆಯನ್ನು ಅವಲಂಬಿಸಿದೆ.

1 / 5
ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಯುವ ಸ್ಟಾರ್ ಆಲ್‌ರೌಂಡರ್ ರಚಿನ್ ರವೀಂದ್ರ ಜಾಹೀರಾತು ಚಿತ್ರೀಕರಣದ ವೇಳೆ ಗಾಯಗೊಂಡಿದ್ದಾರೆ. ಹೀಗಾಗಿ ಮುಂಬರುವ ಭಾರತ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ  ರವೀಂದ್ರ ಆಡುವ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿವೆ. ಜಾಹೀರಾತು ಚಿತ್ರೀಕರಣದ ವೇಳೆ ಡೈವಿಂಗ್ ಕ್ಯಾಚ್ ತೆಗೆದುಕೊಳ್ಳಲು ಪ್ರಯತ್ನಿಸುವಾಗ ರಚಿನ್ ಅವರ ಬಲ ಭುಜದ ಕೀಲು ಸ್ಥಳಾಂತರಗೊಂಡಿದೆ(PC-PTI).

ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಯುವ ಸ್ಟಾರ್ ಆಲ್‌ರೌಂಡರ್ ರಚಿನ್ ರವೀಂದ್ರ ಜಾಹೀರಾತು ಚಿತ್ರೀಕರಣದ ವೇಳೆ ಗಾಯಗೊಂಡಿದ್ದಾರೆ. ಹೀಗಾಗಿ ಮುಂಬರುವ ಭಾರತ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ರವೀಂದ್ರ ಆಡುವ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿವೆ. ಜಾಹೀರಾತು ಚಿತ್ರೀಕರಣದ ವೇಳೆ ಡೈವಿಂಗ್ ಕ್ಯಾಚ್ ತೆಗೆದುಕೊಳ್ಳಲು ಪ್ರಯತ್ನಿಸುವಾಗ ರಚಿನ್ ಅವರ ಬಲ ಭುಜದ ಕೀಲು ಸ್ಥಳಾಂತರಗೊಂಡಿದೆ(PC-PTI).

2 / 5

ಗಾಯದ ಬಳಿಕ ಆಸ್ಪತ್ರೆಗೆ ದಾಖಲಾದ ರಚಿನ್ ರವೀಂದ್ರ ಅವರನ್ನು ವೈದ್ಯರು ಪರೀಕ್ಷಿಸಿದ್ದಾರೆ. ಪರೀಕ್ಷೆಯಲ್ಲಿ ರಚಿನ್ ಅವರ ಭುಜಕ್ಕೆ ಯಾವುದೇ ಗಂಭೀರ ಗಾಯವಾಗಿರುವುದು ಧೃಡಪಟ್ಟಿಲ್ಲ. ಆದಾಗ್ಯೂ, ಅವರು ಯಾವಾಗ ಆಟಕ್ಕೆ ಮರಳುತ್ತಾರೆ ಎಂಬುದು ರಿಹ್ಯಾಬ್ ಸಮಯದಲ್ಲಿನ ಚೇತರಿಕೆಯನ್ನು ಅವಲಂಬಿಸಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ವಿರುದ್ಧದ ಸರಣಿಯಲ್ಲಿ ಅವರ ಲಭ್ಯತೆ ಇನ್ನೂ ನಿರ್ಧಾರವಾಗಿಲ್ಲ(PC-PTI).

3 / 5

ರಚಿನ್ ಅವರ ಗಾಯದ ಬಗ್ಗೆ ಮಾಹಿತಿ ನೀಡಿರುವ ನ್ಯೂಜಿಲೆಂಡ್‌ನ ಪರ್ಫಾರ್ಮೆನ್ಸ್ ಮ್ಯಾನೇಜರ್ ಮೈಕ್ ಸ್ಯಾಂಡೆಲ್, ‘ಇದು ದುರದೃಷ್ಟಕರ ಅಪಘಾತ. ಪ್ರಸ್ತುತ ರಚಿನ್ ಸಂಪೂರ್ಣ ಚೇತರಿಸಿಕೊಳ್ಳುವುದು ತಂಡದ ಆದ್ಯತೆಯಾಗಿದೆ. ರಚಿನ್ ಚೆನ್ನಾಗಿ ಚೇತರಿಸಿಕೊಳ್ಳುತ್ತಾರೆ ಮತ್ತು ಸಾಧ್ಯವಾದಷ್ಟು ಬೇಗ ಮೈದಾನಕ್ಕೆ ಮರಳುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಮುಖ್ಯ ಆದ್ಯತೆಯಾಗಿದೆ’ ಎಂದಿದ್ದಾರೆ(PC-PTI).

4 / 5

ಇನ್ನು ರಚಿನ್ ರವೀಂದ್ರ ಅವರ ಮರಳುವಿಕೆಯ ಬಗ್ಗೆ ಮಾಹಿತಿ ನೀಡಿರುವ ನ್ಯೂಜಿಲೆಂಡ್ ಮುಖ್ಯ ಕೋಚ್ ರಾಬ್ ವಾಲ್ಟರ್, ‘ನಾವು ರಚಿನ್​ಗೆ ಸಂಬಂಧಿಸಿದ ವಿಚಾರದಲ್ಲಿ ಯಾವುದೇ ಅಪಾಯವನ್ನು ತೆಗೆದುಕೊಳ್ಳಲಾಗುವುದಿಲ್ಲ. ಮುಂದಿನ ಆರು ತಿಂಗಳಲ್ಲಿ ಕಿವೀಸ್ ತಂಡವು ಭಾರತದ ವಿರುದ್ಧದ ಟೆಸ್ಟ್ ಪಂದ್ಯಗಳನ್ನು ಒಳಗೊಂಡಂತೆ ಕಾರ್ಯನಿರತ ರೆಡ್-ಬಾಲ್ ವೇಳಾಪಟ್ಟಿಯನ್ನು ಹೊಂದಿದೆ. ಆದ್ದರಿಂದ ನಾವು ರಚಿನ್ ಅವರನ್ನು ಅಗತ್ಯಕ್ಕಿಂತ ಮುಂಚಿತವಾಗಿ ಮೈದಾನಕ್ಕಿಳಿಸಲು ಆತುರಪಡಿಸುವುದಿಲ್ಲ’ ಎಂದಿದ್ದಾರೆ(PC-PTI).

5 / 5

ರಚಿನ್ ನ್ಯೂಜಿಲೆಂಡ್‌ನ ಸೀಮಿತ ಓವರ್‌ಗಳ ತಂಡದ ಪ್ರಮುಖ ಭಾಗವಾಗಿದ್ದಾರೆ. ಅವರು ಬ್ಯಾಟ್ ಮತ್ತು ಬಾಲ್ ಎರಡರಿಂದಲೂ ತಂಡಕ್ಕೆ ಕೊಡುಗೆ ನೀಡುತ್ತಾರೆ. ಇಲ್ಲಿಯವರೆಗೆ 52 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ರಚಿನ್ 759 ರನ್ ಬಾರಿಸಿದ್ದಾರೆ. ಇದರಲ್ಲಿ ಅವರ ಗರಿಷ್ಠ ಸ್ಕೋರ್ 69 ರನ್. ಹಾಗೆಯೇ ಬೌಲಿಂಗ್‌ನಲ್ಲಿಯೂ 26 ವಿಕೆಟ್‌ಗಳನ್ನು ಕಬಳಿಸಿದ್ದಾರೆ(PC-PTI).

Loading...
Unable to load recommendations.
Follow Us