Rahul Dravid Birthday: ಇಂದು ಕರ್ನಾಟಕ ಹೆಮ್ಮೆಯ ಕ್ರಿಕೆಟಿಗ ದ್ರಾವಿಡ್ ಹುಟ್ಟುಹಬ್ಬ: ರಾಹುಲ್ ಅವರ ಮರೆಯಲಾಗದ ಇನ್ನಿಂಗ್ಸ್ ಇಲ್ಲಿದೆ
Happy Birthday Rahul Dravid: ರಾಹುಲ್ ದ್ರಾವಿಡ್ ಇಂದು ತಮ್ಮ 51ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಮೈದಾನದೊಳಗೆ ಹಾಗೂ ಮೈದಾನದಾಚೆ ತನ್ನದೇ ಆದ ವರ್ಚಸ್ಸನ್ನು ಹೊಂದಿರುವ ರಾಹುಲ್ ದ್ರಾವಿಡ್, ಟೀಮ್ ಇಂಡಿಯಾ ಪಾಲಿಗೆ ಆಪತ್ಭಾಂದವ ಆಗಿದ್ದವರು.
1 / 7
ಭಾರತ ಕ್ರಿಕೆಟ್ ಕಂಡ ಅತ್ಯಂತ ಸಭ್ಯ ಕ್ರಿಕೆಟಿಗ, ಟೀಮ್ ಇಂಡಿಯಾ ಮುಖ್ಯ ಕೋಚ್ ಆಗಿರುವ ದಿ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಇಂದು ತಮ್ಮ 51ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಮೈದಾನದೊಳಗೆ ಹಾಗೂ ಮೈದಾನದಾಚೆ ತನ್ನದೇ ಆದ ವರ್ಚಸ್ಸನ್ನು ಹೊಂದಿರುವ ರಾಹುಲ್ ದ್ರಾವಿಡ್, ಟೀಮ್ ಇಂಡಿಯಾ ಪಾಲಿಗೆ ಆಪತ್ಭಾಂದವ ಆಗಿದ್ದವರು.
2 / 7
ವಿಶ್ವದ ಎಂತಹ ಕಠಿಣ ಪಿಚ್ ಆದರೂ ಅಲ್ಲಿ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್ ಹೀಗೆ ವಿಶ್ವ ದಿಗ್ಗಜರೇ ವೈಫಲಗೊಂಡರೂ ಅಂತಹ ಪಿಚ್‌ಗಳಲ್ಲಿ ನೆಲೆಯೂರಿ ನಿಲ್ಲುವ ಮೂಲಕ ದ್ರಾವಿಡ್, ಟೀಮ್ ಇಂಡಿಯಾ ಪಾಲಿಗೆ ಆಪತ್ಬಾಂಧವ ಎನಿಸಿದ್ದರು. ಇದೇ ಕಾರಣಕ್ಕಾಗಿ ‘ದಿ ವಾಲ್’ ಎಂಬ ಮನ್ನಣೆಗೆ ಪಾತ್ರವಾಗಿದ್ದಾರೆ.
3 / 7
1996 ಏಪ್ರಿಲ್ 3 ರಂದು ಶ್ರೀಲಂಕಾ ವಿರುದ್ಧ ಪಂದ್ಯವನ್ನಾಡುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್ಗೆ ದ್ರಾವಿಡ್ ಪದಾರ್ಪಣೆ ಮಾಡಿದ್ದರು. 164 ಟೆಸ್ಟ್ ಪಂದ್ಯಗಳಲ್ಲಿ 13,288 ರನ್ ಗಳಿಸಿರುವ ದ್ರಾವಿಡ್ 36 ಶತಕ ಹಾಗೂ 63 ಅರ್ಧಶತಕ ಬಾರಿಸಿದ್ದಾರೆ. ದ್ರಾವಿಡ್ ಅವರು ಬರೋಬ್ಬರಿ 31,258 ಬಾಲ್ಗಳನ್ನು ಎದುರಿಸಿ ದಾಖಲೆ ಬರೆದಿದ್ದಾರೆ.
4 / 7
ದ್ರಾವಿಡ್ 2012ರಲ್ಲಿ ತನ್ನ ಕೊನೆಯ ಟೆಸ್ಟ್ ಪಂದ್ಯವನ್ನಾಡಿ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದರು. ವಿಕೆಟ್ ಕೀಪರ್ ಆಗಿಯು ಮಿಂಚಿದ ದ್ರಾವಿಡ್ ಟೆಸ್ಟ್ ಕ್ರಿಕೆಟ್ನಲ್ಲಿ 210 ಕ್ಯಾಚ್ ಪಡೆದಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ 344 ಪಂದ್ಯಗಳನ್ನು ಆಡಿ 10, 889 ರನ್ ದ್ರಾವಿಡ್ ಕಲೆಹಾಕಿದ್ದಾರೆ. ಇದರಲ್ಲಿ 12 ಶತಕ ಹಾಗೂ 83 ಅರ್ಧಶತಕ ಸೇರಿವೆ.
5 / 7
ದ್ರಾವಿಡ್ ಅವರ ಮರೆಯಲಾಗದ ಇನ್ನಿಂಗ್ಸ್ ಪೈಕಿ 2000ನೇ ಇಸವಿಯಲ್ಲಿ ಈಡನ್ ಗಾರ್ಡನ್ಸ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯ ಕೂಡ ಒಂದು. ಈ ಪಂದ್ಯದಲ್ಲಿ ಭಾರತ ಗೆಲ್ಲಲು ಹರಸಾಹಸ ನಡೆಸಿತು. ವಿವಿಎಸ್ ಲಕ್ಷ್ಮಣ್, ರಾಹುಲ್ ದ್ರಾವಿಡ್ ಮತ್ತು ಸೌರವ್ ಗಂಗೂಲಿ ಹೋರಾಟ ನಡೆಸಿದರು. ಲಕ್ಷ್ಮಣ್ 280 ರನ್ ಗಳಿಸಿದ್ದರೆ, ದ್ರಾವಿಡ್ ಅಮೂಲ್ಯವಾದ 180 ರನ್ಗಳ ಕೊಡುಗೆ ನೀಡಿದ್ದರು.
6 / 7
ಇನ್ನು ಅಡಿಲೇಡ್ನಲ್ಲಿ 2003 ರಲ್ಲಿ ನಡೆದ ಆಸೀಸ್ ವಿರುದ್ಧದ ಪಂದ್ಯದಲ್ಲಿ ದ್ರಾವಿಡ್ ಕೊಡುಗೆ ಮರೆಯಲು ಸಾಧ್ಯವಿಲ್ಲ. ಇಲ್ಲಿ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ನಲ್ಲಿ 566 ರನ್ ಗಳಿಸಿತ್ತು. ದ್ರಾವಿಡ್ (233) ಹಾಗೂ ಲಕ್ಷ್ಮಣ್ (148) ಅವರ ಅಮೋಘ ಆಟದ ನೆರವಿನಿಂದ ಭಾರತ ಉತ್ತಮ ರನ್ ಗಳಿಸಿತು. ಈ ಪಂದ್ಯದಲ್ಲಿ ಭಾರತ 4 ವಿಕೆಟ್ಗಳ ಗೆಲುವು ಸಾಧಿಸಿತ್ತು.
7 / 7
2004 ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ದ್ವಿಶತಕ ಸಿಡಿಸಿ ತಂಡವನ್ನು ಸೋಲಿನಿಂದ ಪಾರು ಮಾಡಿದ್ದರು. ಈ ಪಂದ್ಯದಲ್ಲಿ ಇವರು 270 ರನ್ ಚಚ್ಚಿದ್ದರು. ಇದು ಪಾಕ್ ನೆಲದಲ್ಲಿ ಭಾರತ ಜಯಿಸಿದ ಮೊಟ್ಟ ಮೊದಲ ಟೆಸ್ಟ್ ಸರಣಿ ಗೆಲುವಾಗಿತ್ತು.